ದೇವಚಳ್ಳ.ಬಡ ಕುಟುಂಬಕ್ಕೆ ಮನೆ ಹಸ್ತಾಂತರ ಹಾಗೂ ಸನ್ಮಾನ

ಸುಳ್ಯ: ನುಸ್ರತುಲ್ ಇಸ್ಲಾಂ ಎಸೋಸಿಯೇಶನ್ ರಿ. ಎಲಿಮಲೆ ಇದರ ಆಶ್ರಯದಲ್ಲಿ ದೇವಚಳ್ಳ ಗ್ರಾಮದ ಮಾವಿನಕಟ್ಟೆ ಎಂಬಲ್ಲಿ ವೃದ್ಧ ಸಹೋದರಿಯರಿಗಾಗಿ ನಿರ್ಮಿಸಿದ ಮನೆಯ ಹಸ್ತಾಂತರ ಕಾರ್ಯಕ್ರಮವು ನಡೆಯಿತು.ದೇವಚಳ್ಳ ಗ್ರಾಮ ಪಂಚಾಯತ್ ಅಧ್ಯಕ್ಷರಾದ ದಿವಾಕರ ಮುಂಡೋಡಿಯವರು ರಿಬ್ಬನ್ ಕತ್ತರಿಸುವ ಮೂಲಕ ಕಾರ್ಯಕ್ರಮ ನಿರ್ವಹಿಸಿದರು..ನುಸ್ರತ್ ಅಧ್ಯಕ್ಷ ಲತೀಫ್ ಹರ್ಲಡ್ಕ ಅಧ್ಯಕ್ಷತೆ ವಹಿಸಿದ ಕಾರ್ಯಕ್ರಮದಲ್ಲಿ ಎಲಿಮಲೆ ಮುದರ್ರಿಸ್ ತೌಸೀಫ್ ಸಅದಿ ಹರೇಕಳ ದುವಾ ನಿರ್ವಹಿಸಿದರು.ಜಮಾಅತ್ ಅಧ್ಯಕ್ಷರಾದ ಇಕ್ಬಾಲ್ ಎಲಿಮಲೆಯವರು ಪ್ರಾಸ್ತಾವಿಕ ಮಾತುಗಳನ್ನಾಡಿದರೆ
ಬೀಜದಕಟ್ಟೆ ಪ್ರತಿಷ್ಠಾನ ಅಧ್ಯಕ್ಷ ಉಮ್ಮರ್ ಬೀಜದಕಟ್ಟೆಯವರು ಬಡವರ ಅಶಕ್ತರ ಬಗ್ಗೆ ಕಾಳಜಿ ವಹಿಸಿ ಮನೆ ನಿರ್ಮಿಸಿದ ಸಮಿತಿಯ ಕಾರ್ಯ ವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಜಿಲ್ಲಾ ವಕ್ಫ್ ಬೋರ್ಡ್ ಸಲಹಾ ಸಮಿತಿ ಸದಸ್ಯ ಮುಸ್ತಫಾ ಹಾಜಿ ಜನತಾ,
ಕರ್ನಾಟಕ ಮುಸ್ಲಿಂ ಜಮಾಅತ್ ಸುಳ್ಯ ತಾಲೂಕು ಘಟಕದ ಅಧ್ಯಕ್ಷ ಮಹಮ್ಮದ್ ಕುಂಞ ಗೂನಡ್ಕ ರವರು ಶುಭ ಹಾರೈಸಿದರು.. ಕಾರ್ಯಕ್ರಮದಲ್ಲಿ ಮುಸ್ಲಿಂ ಜಮಾ ಅತ್ ಜಿಲ್ಲಾ ಕಾರ್ಯದರ್ಶಿ ಹಸೈನಾರ್ ಜಯನಗರ
ಎಲಿಮಲೆ ಜಮಾಅತ್ ಸಮಿತಿ ಸಲಹೆಗಾರರಾದ ಮೂಸ ಹಾಜಿ ಹಾಗೂ
ಯು ಯಂ ಅಬ್ದುಲ್ಲ,,
ಗ್ರಾಮ ಪಂಚಾಯತ್ ಸದಸ್ಯ ಪುಷ್ಪಕರ ಮಾವಿನಕಟ್ಟೆ.. ಅನ್ಸಾರುಲ್ ಮುಸ್ಲಿಮೀನ್ ಅಧ್ಯಕ್ಷ ಅಬ್ದುಲ್ ಶುಕೂರ್ ,
ಅನ್ಸಾರಿಯಾ ಯತೀಂ ಖಾನ ಅಧ್ಯಕ್ಷ
ಆಬ್ದುಲ್ ಮಜೀದ್ ಜನತಾ,
ಜೀರ್ಮಕ್ಕಿ ಮಸೀದಿ ಅಧ್ಯಕ್ಷ ಜಿ ಎಸ್ ಅಬ್ದುಲ್ಲ,
ಅರಂತೋಡು ಮಸೀದಿ ಅಧ್ಯಕ್ಷ ಅಬ್ದುಲ್ ಕಾದರ್ ಪಟೇಲ್. ಮಾವಿನಕಟ್ಟೆ ವಿಷ್ಣು ಮೂರ್ತಿ ದೇವಸ್ಥಾನದ ಅಧ್ಯಕ್ಷರಾದ ರಾಧಾಕೃಷ್ಣ ಶ್ರೀ ಕಟೀಲ್…ಜೀರ್ಮಕ್ಕಿ ಮಸೀದಿ ಇಮಾಂ ಸೂಫಿ ಮುಸ್ಲಿಯಾರ್..ಎಲಿಮಲೆ ಮದ್ರಸ ಮುಖ್ಯೋಪಾಧ್ಯಾಯ ಮಹಮೂದ್ ಸಖಾಫಿ.ಜಮಾ ಅತ್ ಉಪಾಧ್ಯಕ್ಷ ಅಬ್ದುಲ್ ಕಾದರ್ ..ಕಾರ್ಯದರ್ಶಿ ಹನೀಫ್ ಮೆತ್ತಡ್ಕ..ಕೋಶಾಧಿಕಾರಿ ಮಹಮದ್ ಕುಂಞ ಮೇಲೆಬೈಲು ಉಪಸ್ಥಿತರಿದ್ದರು .ಕಾರ್ಯದರ್ಶಿ ಸೂಫಿ ಎಲಿಮಲೆ ಸ್ವಾಗತಿಸಿ ಉಪಾಧ್ಯಕ್ಷ ಕಲಂದರ್ ಎಲಿಮಲೆ ವಂದಿಸಿದರು..ಇದೇ ಸಂಧರ್ಭದಲ್ಲಿ ಉಮ್ಮರ್ ಬೀಜದಕಟ್ಟೆ , ದಿವಾಕರ ಮುಂಡೋಡಿ ಹಾಗೂ ಜಿ ಎಸ್ ಅಬ್ದುಲ್ಲ ರವರನ್ನು ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು.ಕಾರ್ಯಕ್ರಮದ ಕೊನೆಗೆ ಸುಳ್ಯ ತಾಲೂಕಿನ ತಹಶಿಲ್ದಾರರಾದ ಕುಂಞ ಅಹಮದ್ ಆಗಮಿಸಿ ಶುಭಕೋರಿದರು… ಅವರನ್ನು ಸಂಸ್ಥೆಯ ಅಧ್ಯಕ್ಷ ಲತೀಫ್ ಹರ್ಲಡ್ಕ ಸನ್ಮಾನಿಸಿದರು.

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com
error: Content is protected !!