ಕೆ.ಸಿ.ಎಫ್ ಬಹರೈನ್ ಮೀಲಾದ್ ಸಮಾವೇಶಕ್ಕೆ ಪ್ರೌಢ ಸಮಾಪ್ತಿ

ಮನಾಮ: ಕರ್ನಾಟಕ ಕಲ್ಚರಲ್ ಫೌಂಡೇಷನ್ ಕೆ.ಸಿ.ಎಫ್ ಬಹರೈನ್ ವತಿಯಿಂದ “ಹಬೀಬ್ ನಮ್ಮ ಜೊತೆ” ಘೋಷ ವಾಕ್ಯದೊಂದಿಗೆ ಬೃಹತ್ ಮೀಲಾದ್ ಕಾನ್ಫರೆನ್ಸ್ ನವಂಬರ್ 1 ರಂದು ರಂದು ಶುಕ್ರವಾರ ಸಂಜೆ 7 :30ಕ್ಕೆ ಪಾಕಿಸ್ತಾನ ಕ್ಲಬ್ ಮನಾಮದಲ್ಲಿ ನಡೆಯಿತು.

ಮೀಲಾದ್ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಕಾರಂದೂರು ಮರ್ಕಝುಸ್ಸಖಾಫತಿಸ್ಸುನ್ನಿಯ್ಯಃ ಇದರ ಅಧ್ಯಕ್ಷರೂ, ಸಮಸ್ತ ಕೇರಳ ಸುನ್ನೀ ಜಂಇಯ್ಯತುಲ್ ಉಲಾಮದ ಉಪಾದ್ಯಕ್ಷರೂ ಆದ ಅಸ್ಸಯ್ಯಿದ್ಅಲಿ ಬಾಫಖಿ ತಂಙಳ್ ರವರು ದುಃಆ ಆಶೀರ್ವಚನ ನಡೆಸಿದ ವೇದಿಕೆಯಲ್ಲಿ ಕೆಸಿಎಫ್ ಬಹರೈನ್ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಜನಾಬ್ ಜಮಾಲುದ್ದೀನ್ ವಿಟ್ಟಲ್ ರವರು ಅಧ್ಯಕ್ಷತೆ ವಹಿಸಿದ್ದರು.

ಅಸ್ಸಯ್ಯಿದ್ ಹಾಫಿಝ್ ಅಝ್ಹರ್ ತಂಙಳ್ ಮತ್ತು ಸಂಗಡಿಗರ ನೇತೃತ್ವದಲ್ಲಿ ಮೌಲಿದ್ ಪಾರಾಯಣ ಹಾಗೂ ಬುರ್ದಾ ಆಲಾಪನೆ ನಡೆಯಿತು.
ಹಾಫಿಝ್ ದರ್ವೇಶ್ ಮುಹಮ್ಮದ್ ಅಲಿಯವರು
ಕಿರಾಅತನ್ನು ಪಠಿಸಿದರು.
ಕೆಸಿಎಫ್ ಬಹರೈನ್ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಹಾರಿಸ್ ಸಂಪ್ಯ ರವರು ಸ್ವಾಗತ ಭಾಷಣವನ್ನು ಮಾಡುತ್ತಾ, ಬಹರೈನ್ ಕೆ.ಸಿ.ಎಫ್ ಮಾಡಿರುವ ಅಭೂತಪೂರ್ವ ಕಾರ್ಯ ಚಟುವಟಿಗಳ ಬಗ್ಗೆ ಬೆಳಕನ್ನು ಚೆಲ್ಲಿದರು.ಕಾರ್ಯಕ್ರಮದ ಉದ್ಘಾಟನೆಯನ್ನು ಮಲ್ಲೂರು ಅಸಾಸ್ ಎಜುಕೇಶನ್ ಪ್ರಿನ್ಸಿಪಾಲ್ ಅಸ್ಸಯ್ಯಿದ್ ನಿಝಾಮುದ್ದೀನ್ ಬಾಫಖಿ ತಂಙಳ್ ರವರು ನೆರವೇರಿಸಿದರು.
ಪ್ರೌಡೋಜ್ವಲ ಮುಖ್ಯ ಪ್ರಭಾಷಣವನ್ನು ಮಾಡಿದ ಖ್ಯಾತ ಯುವ ವಾಗ್ಮಿ ನೌಫಲ್ ಸಖಾಫಿ ಕಳಸರವರು ಪ್ರವಾದಿ ಜೀವನ ಚರ್ಯೆಯನ್ನು ಅಳವಡಿಸಿದರೆ ಮಾತ್ರ ಪಾರತ್ರಿಕ ವಿಜಯಿಯಾಗಲು ಸಾಧ್ಯ ಎಂದರು.

ಕೆಸಿಎಫ್ ಸದಸ್ಯರ ಕ್ಷೇಮನಿಧಿ (ಎಂ ಆರ್ ಎಫ್) ಹಾಗೂ ಕೆಸಿಎಫ್ 2020ನೇ ವರ್ಷದ ಆಕರ್ಷಕ ಕ್ಯಾಲೆಂಡರ್ ನ್ನು ಅಸ್ಸಯ್ಯಿದ್ ಅಲಿ ಬಾಫಖಿ ತಂಙಳ್ ರವರ ದಿವ್ಯ ಹಸ್ತದಿಂದ ಬಿಡುಗಡೆ ಗೊಳಿಸಲಾಯಿತು.

ವೇದಿಕೆಯಲ್ಲಿ ಬಹರೈನ್ ಸ್ವದೇಶಿ ಶೈಖ್ ಹಸ್ಸನ್ ಕಮಾಲ್,ಕೆ ಸಿ.ಎಫ್ ಬಹರೈನ್ ಐ ಎನ್ ಸಿ ಸಾಂತ್ವನ ವಿಭಾಗದ ಚೈರ್ಮೆನ್ ಅಲಿ ಮುಸ್ಲಿಯಾರ್ ಕೊಡಗು,ಬಹರೈನ್ ಕೆ.ಸಿ.ಎಫ್ ಐಎನ್ಸಿ ಪ್ರತಿನಿಧಿ ಜನಾಬ್ ಫಾರೂಕ್ ಎಸ್.ಎಂ, ಡಿಕೆಎಸ್ಸಿ ಬಹರೈನ್ ಅಧ್ಯಕ್ಷ ರಾದ ಮಜೀದ್ ಸಅದಿ ಪೆರ್ಲ ಹಾಗೂ ಐಸಿಫ್ ಬಹರೈನ್ ನೇತಾರರು ಅಲ್ಲದೆ ಪ್ರಮುಖ ಧಾರ್ಮಿಕ ಹಾಗೂ ಸಾಮಾಜಿಕ ಗಣ್ಯ ವ್ಯಕ್ತಿ ಗಳು ಉಪಸ್ಥಿತರಿದ್ದರು.

ಕೆ.ಸಿ.ಎಫ್ ಬಹರೈನ್ ಮೀಲಾದ್ ಸ್ವಾಗತ ಸಮಿತಿ ಚೇರ್ಮ್ಯಾನ್ ಬಷೀರ್ ಕಾರ್ಲೆ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು ಹಾಗೂ ಕನ್ವೀನರ್ ಸಯ್ಯದ್ ಇರ್ದೆ ರವರು ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು. ಅಸ್ಸಯ್ಯಿದ್ ಅಲಿ ಬಾಫಖಿ ತಂಙಳ್ ರವರ ದುಃಅ ಆಶೀರ್ವಚನದೊಂದಿಗೆ ಕಾರ್ಯಕ್ರಮವನ್ನು ಕೊನೆಗೊಳಿಸಲಾಯಿತು. ರಾಷ್ಟ್ರೀಯ ಸಮಿತಿ ಪಬ್ಲಿ ಕೇಶನ್ ವಿಂಗ್ ಅಧ್ಯಕ್ಷರಾದ ಲತೀಫ್ ಪೇ ರೋಳಿ ಧನ್ಯವಾಧಗೈದರು.

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com
error: Content is protected !!