ನವೆಂಬರ್ 7 ರ ಹುಬ್ಬುರ್ರಸೂಲ್ ಕಾನ್ಫೆರೆನ್ಸ್ ಯಶಸ್ವಿಗೊಳಿಸಿ – ಮಾಣಿ ಸಅದಿ ಕರೆ

ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘದ ಆಶ್ರಯದಲ್ಲಿ ವಿಶ್ವ ಪ್ರವಾದಿ ಮುಹಮ್ಮದ್ ಮುಸ್ತಫಾ ﷺ ರವರ 1494ನೇ ಜನ್ಮದಿನದ ಅಂಗವಾಗಿ ಮಂಗಳೂರು ನೆಹರೂ ಮೈದಾನದಲ್ಲಿ 2019 ನವೆಂಬರ್ 7 ಗುರುವಾರ ಬೃಹತ್ ಹುಬ್ಬುರಸೂಲ್ ಕಾನ್ಫರೆನ್ಸ್ ನ್ನು ಹಮ್ಮಿಕೊಂಡಿದೆ.

ಅಂದು ಅಪರಾಹ್ನ 1.00 ಗಂಟೆಗೆ ಧ್ವಜಾರೋಹಣ 2.00 ಘಂಟೆ ಗೆ ಜ್ಯೋತಿ ಸರ್ಕಲ್ ನಿಂದ ಎಸ್ ವೈ ಎಸ್ ಟೀಮ್ ಇಸಾಬಾ ಹಾಗೂ ಎಸ್ಸೆಸ್ಸೆಫ್ ಕ್ಯೂಟೀಮ್ ನಿಂದ ಆಕರ್ಷಣೀಯ ಮೀಲಾದ್ ಜಾಥಾ ನಡೆಯಲಿದ್ದು, ಸಂಜೆ 4 ಕ್ಕೆ ಬೃಹತ್ ಹುಬ್ಬುರ್ರಸೂಲ್ ಕಾನ್ಫೆರೆನ್ಸ್ ನಡೆಯಲಿದೆ.

ಪ್ರಸ್ತುತ ಕಾರ್ಯಕ್ರಮದಲ್ಲಿ ಇಂಡಿಯನ್ ಗ್ರಾಂಡ್ ಮುಪ್ತಿ ಸುಲ್ತಾನುಲ್ ಉಲಮಾ ಎ ಪಿ ಉಸ್ತಾದ್, ಖಾಝಿ ಖುರ್ರತ್ತುಸ್ಸಾದಾತ್ ಕೂರತ್ ತಂಙಲ್, ಖಾಝಿ ತಾಜುಲ್ ಫುಕಹಾಅ್ ಬೇಕಲ್ ಉಸ್ತಾದ್, ಮೌಲಾನಾ ಪೇರೋಡ್ ಉಸ್ತಾದ್ ಸಹಿತ ಹಲವು ಸಾದಾತುಗಳು ಉಲಮಾ ಉಮರಾ ನಾಯಕರುಗಳು ಭಾಗವಹಿಸಲಿದ್ದಾರೆ.

ಆದುದರಿಂದ ಸೆಂಟರ್ ವ್ಯಾಪ್ತಿಯ ಎಲ್ಲಾ ಘಟಕಗಳ ನಾಯಕರು, ಕಾರ್ಯಕರ್ತರು, ಹಿತೈಷಿಗಳು ಯಾವುದೇ ಕೆಲಸ ಕಾರ್ಯಗಳಿದ್ದರೂ ಎಲ್ಲವನ್ನೂ ಬದಿಗೊತ್ತಿ , ಕ್ಲಪ್ತ ಸಮಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಸುನ್ನಿ ಯುವಜನ ಸಂಘ ಮಾಣಿ ಸೆಂಟರ್ ಅಧ್ಯಕ್ಷರಾದ ಇಬ್ರಾಹಿಂ ಸಅದಿ ಮಾಣಿರವರು ಕರೆ ನೀಡಿದ್ದಾರೆ.

ಪ್ರಕಟಣೆ : ಎಸ್ ವೈ ಎಸ್ ಮಾಣಿ ಸೆಂಟರ್

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com
error: Content is protected !!