janadhvani

Kannada Online News Paper

13 ಶತಮಾನಗಳ ಹಿಂದಿನ ಇಸ್ಲಾಮಿಕ್ ನಾಣ್ಯ 33 ಕೋಟಿಗೆ ಹರಾಜು

ರಿಯಾದ್: 13 ಶತಮಾನಗಳ ಹಿಂದಿನ ಚಿನ್ನದ ನಾಣ್ಯವನ್ನು ಹರಾಜಿನಲ್ಲಿ 33,22,43,000 ( 47 ಲಕ್ಷ ಡಾಲರ್) ಗೆ ಮಾರಾಟ ಮಾಡಲಾಗಿದೆ. ಲಂಡನ್‌ನ ಬ್ರಿಟಿಷ್ ಓಕ್ಷನ್ ಮಾರ್ಟನ್ ಹೌಸ್ ಆ್ಯಂಡ್ ಈಡನ್ ಮಾರಾಟ ಮಾಡಿದ ಚಿನ್ನದ ನಾಣ್ಯವನ್ನು ಮಕ್ಕಾದಲ್ಲಿ ತಯಾರಿಸಲಾಗಿತ್ತು ಎಂದು ನಂಬಲಾಗಿದ್ದು, ಇದನ್ನು ಹಿಜ್‌ರಾ ಶಕ 105ರಲ್ಲಿ ನಿರ್ಮಿಸಲಾಗಿದೆ. ಇದೊಂದು ಇಸ್ಲಾಮಿಕ್ ನಾಣ್ಯವಾಗಿದೆ. ಇದು ಹರಾಜಿನಲ್ಲಿ ಮಾರಾಟವಾದ ವಿಶ್ವದ ಎರಡನೇ ಇಸ್ಲಾಮಿಕ್ ನಾಣ್ಯವಾಗಿದೆ.

ಖುರ್‌ಆನ್ ವಚನಗಳನ್ನು ಕೆತ್ತಲಾದ ನಾಣ್ಯವನ್ನು ಮಕ್ಕಾ ಮತ್ತು ಮದೀನಾ ನಡುವಿನ ಬನೀ ಸುಲೈಮ್ ಪ್ರದೇಶದ ಗಣಿಯ ಚಿನ್ನದಿಂದ ತಯಾರಿಸಲಾಗಿದೆ ಎಂದು ದೃಢೀಕರಿಸಲಾಗಿದೆ. 22 ಕ್ಯಾರೆಟ್ ಚಿನ್ನದಲ್ಲಿ ತಯಾರಿಸಲಾಗಿದ್ದು, ಇದು 20 ಎಂಎಂ ವ್ಯಾಸವನ್ನು ಹೊಂದಿದೆ ಮತ್ತು ನಾಲ್ಕೂವರೆ ಗ್ರಾಂ ತೂಕವಿದೆ. ಇದು ಓಕ್ಷನ್ ಮಾರ್ಟನ್ ಹೌಸಿನ ಇತಿಹಾಸದಲ್ಲಿ ನಡೆದ ಅತಿದೊಡ್ಡ ಹರಾಜು ಎನ್ನಲಾಗಿದೆ.

error: Content is protected !! Not allowed copy content from janadhvani.com