ರಿಯಾದ್: ಸೌದಿಯಲ್ಲಿ ವಿದೇಶಿಯರಿಗೆ ವಿಶೇಷ ಹಕ್ಕುಗಳನ್ನು ಪಡೆಯಬಹುದಾದ ಪ್ರಿವಿಲೇಜ್ ಇಖಾಮಾ ಶುಲ್ಕದಲ್ಲಿ ವಿಶೇಷ ರಿಯಾಯ್ತಿ ಘೋಷಿಸಲಾಗಿದ್ದು, ಒಂದಕ್ಕಿಂತ ಹೆಚ್ಚು ವರ್ಷಗಳ ಹಣವನ್ನು ಮುಂಚಿತವಾಗಿ ಪಾವತಿಸುವವರಿಗೆ ಶುಲ್ಕ ವಿನಾಯಿತಿ ಲಭ್ಯವಾಗಲಿದೆ.
50 ಕ್ಕೂ ಹೆಚ್ಚು ದೇಶಗಳಿಂದ 27 ದೇಶಗಳ ಸಾವಿರಾರು ನಾಗರಿಕರು ಪ್ರಿವಿಲೇಜ್ ಇಖಾಮಾಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಗೃಹ ಸಚಿವಾಲಯದ ಮಂತ್ರಿಗಳನ್ನು ಒಳಗೊಂಡ ವಿಶೇಷ ಮೇಲ್ವಿಚಾರಣಾ ಸಮಿತಿಯಡಿಯಲ್ಲಿ ಪ್ರಿವಿಲೇಜ್ ಇಖಾಮಾ ಕೇಂದ್ರವು ಕಾರ್ಯನಿರ್ವಹಿಸುತ್ತದೆ.
ಪ್ರಿವಿಲೇಜ್ ಇಖಾಮಾ ವರ್ಷಕ್ಕೆ ಒಂದು ಲಕ್ಷ ರಿಯಾಲ್ ಶುಲ್ಕ ವಿಧಿಸಲಾಗುತ್ತದೆ. ಒಂದು ವರ್ಷಕ್ಕಿಂತ ಹೆಚ್ಚಿನ ಅವಧಿಗೆ ಮುಂಗಡ ಶುಲ್ಕವನ್ನು ಪಾವತಿಸುವವರಿಗೆ ಎರಡು ಶೇಕಡಾ ರಿಯಾಯಿತಿ ಸಿಗುತ್ತದೆ. ಅದರಂತೆ ಎರಡು ವರ್ಷಗಳವರೆಗೆ 2 ಲಕ್ಷ ರಿಯಾಲ್‌ಗಳ ಬದಲು 1,98,039 ರಿಯಾಲ್ ಪಾವತಿಸಿದರೆ ಸಾಕಾಗಲಿದೆ. ಜೀವಮಾನದ ಇಖಾಮಾಗೆ 8 ಲಕ್ಷ ರಿಯಾಲ್ ಶುಲ್ಕವನ್ನು ನಿಗದಿಪಡಿಸಲಾಗಿದೆ. ಆರ್ಥಿಕ ಅಭಿವೃದ್ಧಿ ಮಂಡಳಿ (ಇಸಿಡಿಸಿ) ಇಖಾಮಾ ಅರ್ಜಿಗಳನ್ನು ಪರಿಗಣಿಸುತ್ತದೆ.