janadhvani

Kannada Online News Paper

ಹಣಕಾಸು ಸಂಸ್ಥೆಗಳ 13 ಸಾವಿರ ಹುದ್ದೆಗಳಲ್ಲಿ ಸ್ವದೇಶೀಕರಣ

ರಿಯಾದ್: ಸೌದಿ ಅರೇಬಿಯಾದ ಹಣಕಾಸು, ಇನ್ಷೂರೆನ್ಸ್ ಸಂಸ್ಥೆಗಳಲ್ಲಿ 13,000 ರಷ್ಟು ಹುದ್ದೆಗಳನ್ನು ಸ್ವದೇಶೀಕರಣ ವಲಯಕ್ಕೆ ತರಲು ಸೌದಿ ಅರೇಬಿಯನ್ ಹಣಕಾಸು ಪ್ರಾಧಿಕಾರ ನಿರ್ಧರಿಸಿದ್ದು, ಆರಂಭದಲ್ಲಿ ಉನ್ನತ ಹುದ್ದೆಗಳಲ್ಲಿ ಇದನ್ನು ಜಾರಿಗೆ ತರಲಾಗುವುದು.

ಖಾಸಗಿ ವಲಯದ ವಿವಿಧ ಉದ್ಯೋಗಗಳನ್ನು ಕಾರ್ಮಿಕ ಮತ್ತು ಸಾಮಾಜಿಕ ವ್ಯವಹಾರಗಳ ಸಚಿವಾಲಯವು ಸ್ವದೇಶಿಗಳಿಗಾಗಿ ಈಗಾಗಲೇ ಸೀಮಿತಗೊಳಿಸಿದೆ.

ಈ ನಿರ್ಧಾರವನ್ನು ಸೌದಿ ಅರೇಬಿಯನ್ ಹಣಕಾಸು ಪ್ರಾಧಿಕಾರದ ಅಡಿಯಲ್ಲಿ ದೇಶಾದ್ಯಂತದ ಬ್ಯಾಂಕುಗಳು, ವಿಮಾ ಕಂಪನಿಗಳು, ಹಣ ವಿನಿಮಯ ಕೇಂದ್ರಗಳು ಮತ್ತು ಇತರ ಹಣಕಾಸು ಸಂಸ್ಥೆಗಳಲ್ಲಿ ಜಾರಿಗೆ ತರಲಾಗುವುದು. ವಿದೇಶೀ ನೌಕರರನ್ನು ಅದರ ವ್ಯವಸ್ಥಾಪಕ ಹುದ್ದೆಗಳಲ್ಲಿ ಅನುಮತಿಸಲಾಗುವುದಿಲ್ಲ. 13,000 ಉನ್ನತ ಹುದ್ದೆಗಳಲ್ಲಿ ಸ್ವದೇಶೀಯರನ್ನು ಮಾತ್ರ ನೇಮಕ ಮಾಡಲಾಗುತ್ತದೆ.

ವಿದೇಶಿ ಕಾರ್ಮಿಕರನ್ನು ನೇಮಕಗೊಳಿಸುವುದಾದರೆ, ಸ್ವದೇಶೀಯರನ್ನು ಪಡೆಯುವುದು ಸಾಧ್ಯವಾಗದಿದ್ದರೆ ಮಾತ್ರ ಹಣಕಾಸು ಸಂಸ್ಥೆಗಳಲ್ಲಿ ಉನ್ನತ ಹುದ್ದೆಗಳಲ್ಲಿ ನೇಮಿಸಿಕೊಳ್ಳಬೇಕು. ಅಂತಹ ಸಂದರ್ಭಗಳಲ್ಲಿ, ಸಂಸ್ಥೆಗಳು ಸಾಕಷ್ಟು ಅರ್ಹ ಸ್ಥಳೀಯ ಕಾರ್ಮಿಕರನ್ನು ಹೊಂದಿಲ್ಲ ಎಂಬುದನ್ನು ಸಾಬೀತುಪಡಿಸಬೇಕು. ಭವಿಷ್ಯದಲ್ಲಿ ಅಂತಹ ಉದ್ಯೋಗಗಳಿಗಾಗಿ ಸ್ಥಳೀಯ ಸಿಬ್ಬಂದಿಯನ್ನು ನೇಮಿಸಿಕೊಳ್ಳಲು ಯೋಜನೆಗಳನ್ನು ರೂಪಿಸಿ, ಅದನ್ನು ಸಾಮಾಕ್ಕೆ ಸಲ್ಲಿಸಬೇಕು.

ಕಾರ್ಮಿಕ ಮತ್ತು ಸಮಾಜ ಕಲ್ಯಾಣ ಸಚಿವಾಲಯವು ಈಗಾಗಲೇ ಖಾಸಗಿ ಸಂಸ್ಥೆಗಳಲ್ಲಿ ಕೆಲವು ಉನ್ನತ ಹುದ್ದೆಗಳನ್ನು ವಿದೇಶಿಯರಿಗೆ ನೀಡದಂತೆ ಸೂಚನೆ ನೀಡಿತ್ತು. ಮಾನವ ಸಂಪನ್ಮೂಲ ವ್ಯವಸ್ಥಾಪಕ, ಸಾರ್ವಜನಿಕ ಸಂಪರ್ಕ ವ್ಯವಸ್ಥಾಪಕ ಮತ್ತು ಕಸ್ಟಮ್ಸ್ ಕ್ಲಿಯರೆನ್ಸ್ ಅಧಿಕಾರಿ ಸೇರಿದಂತೆ ಹಲವು ಪ್ರಮುಖ ಹುದ್ದೆಗಳಲ್ಲಿ ಪ್ರಸ್ತುತ ಸ್ವದೇಶೀಕರಣ ಅಸ್ತಿತ್ವದಲ್ಲಿದೆ.

error: Content is protected !! Not allowed copy content from janadhvani.com