janadhvani

Kannada Online News Paper

ಸೌದಿ: ಸಂಬಂಧಿಕರಲ್ಲದ ಸ್ತ್ರೀ,ಪುರಷರು ಒಂದೇ ಕೋಣೆಯಲ್ಲಿ ತಂಗಲು ಅನುಮತಿ

ರಿಯಾದ್: ಸೌದಿ ಸಂದರ್ಶಿಸುವ ಪ್ರವಾಸಿಗಳಿಗೆ ಪುರುಷರು ಮತ್ತು ಸ್ತ್ರೀಯರು ಪರಸ್ಪರ ಸಂಬಂಧಿಕರಲ್ಲದಿದ್ದರೂ ಹೋಟೆಲ್ ಕೋಣೆಗಳಲ್ಲಿ ಒಟ್ಟಾಗಿ ಉಳಿಯಲು ಸೌದಿ ಅರೇಬಿಯಾ ಅನುಮತಿ ನೀಡಿದೆ.

ಈ ಹಿಂದೆ , ಪುರುಷರು ಮತ್ತು ಮಹಿಳೆಯರು ಹೋಟೆಲ್ ಕೋಣೆಗಳಲ್ಲಿ ಒಟ್ಟಿಗೆ ಇರಬೇಕಾದರೆ, ಅವರು ತಮ್ಮ ಸಂಬಂಧವನ್ನು ಸಾಬೀತುಪಡಿಸುವ ದಾಖಲೆಗಳನ್ನು ನೀಡಬೇಕಾಗಿತ್ತು. ಅದೇ ರೀತಿ ಸ್ಥಳೀಯ ಮಹಿಳೆಯರಿಗೆ ಹೋಟೆಲ್ ಕೋಣೆಗಳಲ್ಲಿ ಒಂಟಿಯಾಗಿ ತಂಗಲು ಕೂಡ ಅನುಮತಿಸಲಾಗಿದೆ.

ಮಹಿಳೆಯರಿಗೆ ವಾಹನ ಚಲಾಯಿಸಲು ಮತ್ತು ಏಕಾಂಗಿಯಾಗಿ ವಿದೇಶ ಪ್ರವಾಸ ಮಾಡಲು ಸೌದಿ ಕಾನೂನನ್ನು ಕಳೆದ ವರ್ಷ ತಿದ್ದುಪಡಿ ಮಾಡಲಾಗಿತ್ತು.

ವಿದೇಶೀ ಪುರುಷರು ಮತ್ತು ಮಹಿಳೆಯರು ತಮ್ಮ ಬಂಧವನ್ನು ವ್ಯಕ್ತಪಡಿಸುವ ದಾಖಲೆ ಮತ್ತು ಸ್ಥಳೀಯ ಮಹಿಳೆ ತನ್ನ ಗುರುತಿನ ಚೀಟಿಯನ್ನು ಸಲ್ಲಿಸಿ ಹೋಟೆಲ್ ರೂಮ್ ಬುಕ್ ಮಾಡಬಹುದು ಎಂದು ಸೌದಿ ಪ್ರವಾಸೋದ್ಯಮ ಮತ್ತು ರಾಷ್ಟ್ರೀಯ ಪರಂಪರೆ ಆಯೋಗವು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದೆ.