janadhvani

Kannada Online News Paper

ಇಖಾಮಾ ನವೀಕರಿಸಲಾಗದ ಭಾರತೀಯರಿಗೆ ಸೌದಿ ತೊರೆಯಲು ಅವಕಾಶ

ರಿಯಾದ್: ಸೌದಿಯ ಗುರುತಿನ ದಾಖಲೆ ಇಕಾಮಾ ನವೀಕರಿಸಲು ಸಾಧ್ಯವಾಗದವರು ಮತ್ತು ಹುರೂಬ್ ಸಂತ್ರಸ್ತರಿಗೆ ಸೌದಿ ತೊರೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಸೌದಿ ಅರೇಬಿಯಾದ ಭಾರತೀಯ ರಾಯಭಾರ ಕಚೇರಿ ಪ್ರಕಟಿಸಿದೆ ಎಂದು ಮಲಯಾಳಂ ಪತ್ರಿಕೆಗಳು ವರದಿ ಮಾಡಿದೆ. ಈ ಕುರಿತ ಅಧಿಕೃತ ಮಾಹಿತಿಯು ಬಾನುವಾರವಷ್ಟೇ ಹೊರಬರಲಿದೆ.

ಮನೆ ಚಾಲಕರು ಮತ್ತು ವೈಯಕ್ತಿಕ ವೀಸಾದಲ್ಲಿರುವವರು ತಮ್ಮ ಇಖಾಮಾವನ್ನು ನವೀಕರಿಸಲು ಸಾಧ್ಯವಾಗದೆ ಸಂಕಷ್ಟದಲ್ಲಿರುವವರಿಗೆ ಗಡೀಪಾರು ಕೇಂದ್ರ ಮೂಲಕ ಸೌದಿ ಅರೇಬಿಯಾದಿಂದ ಭಾರತಕ್ಕೆ ಮರಳಲು ಸಾಧ್ಯವಿದೆ ಎಂದು ರಿಯಾದ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ. ಸದ್ಯಕ್ಕೆ ಮನೆ-ಚಾಲಕ ವೀಸಾ ಮತ್ತು ವೈಯಕ್ತಿಕ ವೀಸಾಗಳಲ್ಲಿರುವವರಿಗೆ ಈ ಅವಕಾಶವನ್ನು ಕಲ್ಪಿಸಲಾಗಿದೆ.

ಗಡೀಪಾರು ಕೇಂದ್ರವು ಮುಂದಿನ ಭಾನುವಾರ( ಅ.13)ಗಡೀಪಾರು ಪ್ರಕ್ರಿಯೆಗಳನ್ನು ಪ್ರಾರಂಭಿಸಲಿದೆ.ಭಾರತಕ್ಕೆ ತೆರಳಲು ಇಚ್ಛಿಸುವವರು ರಿಯಾದ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು ಅಥವಾ ಜಿದ್ದಾದ ಭಾರತೀಯ ದೂತಾವಾಸವನ್ನು ಸಂಪರ್ಕಿಸಬೇಕು ಎಂದು ಭಾರತೀಯ ರಾಯಭಾರ ಸಮುದಾಯ ಕಲ್ಯಾಣ ಕಾನ್ಸುಲರ್ ದೇಶ್ ಬಂಧು ಭಟ್ಟಿ ಹೇಳಿದರು.

ದಿನವೊಂದಕ್ಕೆ ಐವತ್ತು ಭಾರತೀಯರನ್ನು ಸೌದಿಯಿಂದ ಗಡೀಪಾರು ಮಾಡಲಾಗುತ್ತದೆ. ಮುಂದಿನ ಭಾನುವಾರ ಗ ಡೀಪಾರು ಪ್ರಾರಂಭವಾಗಲಿದ್ದರೂ, ಇಂದಿನಿಂದಲೇ ರಾಯಭಾರ ಕಚೇರಿ ಮತ್ತು ದೂತಾವಾಸದಲ್ಲಿ ಹೆಸರು ನೋಂದಾಯಿಸಬಹುದು.

ಹೆಸರನ್ನು ನೋಂದಾಯಿಸಿದ ನಂತರ, ಅಗತ್ಯ ಪ್ರಯಾಣ ದಾಖಲೆಗಳನ್ನು ಒದಗಿಸಲಾಗುತ್ತದೆ. ಅದೇ ಸಮಯದಲ್ಲಿ,ಕಂಪನಿಗಳು ಮತ್ತು ಇತರ ಸಂಸ್ಥೆಗಳಲ್ಲಿ ನಿವಾಸ ದಾಖಲೆಯಿರುವವರು ಮತ್ತು ಯಾವುದಾದರೂ ಪ್ರಕರಣದಲ್ಲಿ ಕೇಸ್ ಇರುವರಿಗೆ ದೇಶ ತೊರೆಯಲು ಅನುಮತಿಸದ ಕಾರಣ ತಮ್ಮ ಹೆಸರನ್ನು ನೋಂದಾಯಿಸಲು ಕಾನ್ಸುಲೇಟ್ ಅಥವಾ ರಾಯಭಾರ ಕಚೇರಿಯನ್ನು ಸಂಪರ್ಕಿಸಬೇಕಾಗಿಲ್ಲ.

ಹೆಚ್ಚಿನ ಮಾಹಿತಿಗಾಗಿ ಭಾರತೀಯ ರಾಯಭಾರಿ ಕಚೇರಿಯ ಟೋಲ್ ಫ್ರೀ ಸಂಖ್ಯೆ: 8002471234 ಗೆ ಸಂಪರ್ಕಿಸಬಹುದಾಗಿದೆ.

error: Content is protected !! Not allowed copy content from janadhvani.com