janadhvani

Kannada Online News Paper

ಸಿಲಿಕಾನ್ ಸಿಟಿಯಲ್ಲಿ ಕ್ಯು ಟೀಂ ZAKVIC ಯಶಸ್ವಿ

ಬೆಂಗಳೂರು : ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಷನ್ ಸಕ್ರೀಯ ಕಾರ್ಯಕರ್ತರ ತಂಡ Qteam ಇದರ ZAKVIC -2019 ಕಾರ್ಯಕ್ರಮ ಬೆಂಗಳೂರು ನಗರದ ಹಲಸೂರು ಮರ್ಕಿನ್ಸ್ ಆಡಿಟೋರಿಯಂ ನಲ್ಲಿ ಯಶಸ್ವಿಯಾಗಿ ನಡೆಯಿತು.

ಎಸ್ಸೆಸ್ಸೆಫ್ ಬೆಂಗಳೂರು ಜಿಲ್ಲಾ ಅಧ್ಯಕ್ಷ ಹಬೀಬ್ ನೂರಾನೀ ಅಧ್ಯಕ್ಷತೆ ವಹಿಸಿದರು. ಶಂಸುದ್ದೀನ್ ಅಝ್ಹರಿ ಸಭೆಯನ್ನು ಉದ್ಘಾಟಿಸಿದರು.‌ ಎಸ್ಸೆಸ್ಸೆಫ್ ರಾಜ್ಯ ಉಪಾಧ್ಯಕ್ಷ ಹಾಫಿಝ್ ಸುಫ್ಯಾನ್ ಸಖಾಫಿ ಮಂಗಳೂರು ಕ್ಯು ಟೀಂ ಎಂಬ ಸಕ್ರೀಯ ತಂಡದ ಮುಂದಿನ ಎಂಟು ತಿಂಗಳ ಕಾಲದ ಗುರಿ ಹಾಗೂ ರೂಪುರೇಷೆಗಳ ಕುರಿತು ತರಗತಿ ನಡೆಸಿದರು.

ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ನವಾಝ್ ಭಟ್ಕಳ್, ರಾಜ್ಯ ನಾಯಕ ಅಬ್ದುಲ್ ಹಕೀಂ ಬೆಂಗಳೂರು ಹಾಗೂ ಇನ್ನಿತರ ಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ದರು.
ಕ್ಯು ಟೀಂ ಡಿಸ್ಟ್ರಿಕ್ಟ್ ಡೈರೆಕ್ಟರ್ ಮುನೀರ್ ಅಹ್ಮದ್ ‌ಸ್ವಾಗತಿಸಿ ವಂದಿಸಿದರು.