SSF ಬೆಳಾಲು ಯುನಿಟ್ ವತಿಯಿಂದ ಧ್ವಜ ದಿನ ಆಚರಣೆ

1973 ಎಪ್ರಿಲ್ 29 ಎಸ್ಸೆಸ್ಸೆಫ್ ಕೇರಳ ಮಣ್ಣಲ್ಲಿ ಜನ್ಮ ತಾಳಿದ ದಿನ ಅಂದರೆ SSF ಸ್ಥಾಪನಾ ದಿನ. ರಾಷ್ಟ್ರ ಮಟ್ಟದಲ್ಲಿ ಗೋಲ್ಡನ್ ಜುಬಿಲಿ ಆಚರಿಸುವ ಹೊಸ್ತಿಲಲ್ಲಿದೆ.
1989 ಸೆಪ್ಟಂಬರ್ 19 ರಂದು ರೂಪುಗೊಂಡ SSF ಇವತ್ತು ಮಹತ್ತರವಾದ ಹತ್ತಲವಾರು ಸಾಧನೆ‌ಗಳನ್ನು ಮಾಡುವಲ್ಲಿ ಸಫಲವಾಗಿದೆ. ಈ‌ ನಿಟ್ಟಿನಲ್ಲಿ SSF ಬೆಳಾಲು ಶಾಖೆಯಲ್ಲಿ ನಡೆದ ದ್ವಜ‌ ದಿನಾಚರಣೆಯಲ್ಲಿ ಸ್ಥಳೀಯ ಸದರ್ ಮುಅಲ್ಲಿಮರಾದ‌ ಸುಲೈಮಾನ್ ಸ‌ಅದಿ ಪ್ರಾರ್ಥನೆಯ ಮೂಲಕ ಚಾಲನೆ ಕೊಟ್ಟರು.‌ ಅನ್ಸಾರಿಯಾ ಜುಮಾ ಮಸೀದಿ ಅಧ್ಯಕ್ಷರಾದ ಆದಂ ಟಿ.ಹೆಚ್ ದ್ವಜಾರೋಹಣವನ್ನು ನೆರವೇರಿಸಿದರು.

ಬಳಿಕ SSFನ ಕುರಿತು ಖ್ಯಾತ ಲೇಖಕರು, ಯುವ ಪಂಡಿತರೂ ಆದ ಇಸ್ಮಾಯೀಲ್‌ ಸ‌ಅದಿ ಅಲ್-ಅಫ್ಳಲಿ ಮಾಚಾರ್ ಪ್ರಾಸ್ತಾವಿಕ ಮಾತನ್ನಾಡಿದರು. ಊರಿನ ಹಿರಿಯ ವ್ಯಕ್ತಿಯಾದ, ಅಬ್ದುಲ್‌ ರಝ್ಝಾಕ್‌ ಹಾಜಿ ಶಾಂತಿನಗರ, ಸ್ಥಳೀಯ SYS ಅಧ್ಯಕ್ಷರಾದ ಅಬ್ದುರ್ರಹ್ಮಾನ್ ಅಂಗರಕಂಡ, ಸದಸ್ಯರಾದ ಅಬ್ದುಲ್ ಖಾದರ್ ಮಲ್ಜ‌ಅ್, ಹಮೀದ್ ಟಿ.ಹೆಚ್, ಯೂಸುಫ್ ತಾಳಿದಡಿ, ಉಮರಬ್ಬ ತಾಳಿದಡಿ, ಜಮಾಅತ್ ಕಮಿಟಿ ಉಪಾಧ್ಯಕ್ಷರಾದ ಉಸ್ಮಾನ್‌ ಸೊಸೈಟಿ, SSF ಉಜಿರೆ ಸೆಕ್ಟರ್ ಪ್ರತಿನಿಧಿ ಅನ್ವರ್ ಬೆಳಾಲು ಮುಂತಾದವರು ಭಾಗವಹಿಸಿದ್ದರು. ಮುಝಮ್ಮಿಲ್ ರವರು ಘೋಷಣಾವಾಕ್ಯವನ್ನು ಕೂಗುವ ಮೂಲಕ ಕಾರ್ಯಕ್ರಮವನ್ನು ಕೊನೆಗೊಳಿಸಲಾಯಿತು.

ವರದಿ : ಹಿಮಮಿ ಬೆಳಾಲು

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com
error: Content is protected !!