SSF ಮೂಡಬಿದ್ರೆ ಡಿವಿಶನ್ ಕೋಶಾಧಿಕಾರಿ ನಜೀಬ್ ಅಹ್ಮದ್ ರಿಗೆ ಸನ್ಮಾನ

ಮೂಡಬಿದ್ರೆ: ನಿರಂತರವಾಗಿ 2 ತಿಂಗಳುಗಳಿಂದ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಸಹಾಯ ಮಾಡಲು ಮುಂಚೂಣಿಯಲ್ಲಿ ನಿಂತ SSF ಮೂಡಬಿದ್ರೆ ಡಿವಿಶನ್ ಕೋಶಾಧಿಕಾರಿ ನಜೀಬ್ ರವರಿಗೆ ಇಂದು ನಡೆದ ಮಾಸಿಕ ಸಭೆಯಲ್ಲಿ ಸನ್ಮಾನಿಸಲಾಯಿತು. 3 ಬಾರಿ ಉತ್ತರ ಕರ್ನಾಟಕದ ಬಾಗಲಕೋಟೆ ,‌ ಹಾಗೂ ಬೆಳಗಾವಿಗೆ ತೆರಳಿ ನೆರೆ ಸಂತ್ರಸ್ತರಿಗೆ ಅಗತ್ಯ ಸಾಮಾಗ್ರಿಗಳನ್ನು ಹಾಗೂ‌ ಎಜುಕಿಟ್ ಗಳನ್ನು ಸುಮಾರು 10 ಲಕ್ಷ ರೂಪಾಯಿ ವೆಚ್ಚದಲ್ಲಿ ವಿತರಿಸಲಾಗಿದೆ.

ಇನ್ನೂ ಕೂಡ ಒಂದು ಟ್ರಿಪ್ ಅವರ ನೇತೃತ್ವದಲ್ಲಿ ಅತೀ ಶೀಘ್ರದಲ್ಲಿ ಸುಮಾರು 4 ಲಕ್ಷ ವೆಚ್ಚದ ಕಿಟ್ ವಿತರಣೆಯಾಗಲಿದೆ. ಈ ಎಲ್ಲಾ ಕಾರ್ಯಗಳನ್ನು ಮನಗಂಡು ಇಂದು‌ ಸನ್ಮಾನಿಸಲಾಯಿತು. ಹಾಗೂ ಇದಕ್ಕಾಗಿ ಸಹಕರಿಸಿದ ಎಲ್ಲರನ್ನೂ ಈ ವೇಳೆ ಅಭಿನಂದಿಸಲಾಯಿತು.

ಸನ್ಮಾನವನ್ನು ಡಿವಿಶನ್ ಅಧ್ಯಕ್ಷರಾದ ರಿಯಾಝ್ ಸಅದಿ ನೆರವೇರಿಸಿದರು. ಕಾರ್ಯದರ್ಶಿಯಾದ ಸಿದ್ದೀಕ್ ಬಜ್ಪೆ ಹಾಗೂ ಕಾರ್ಯಕಾರಿ ಸದಸ್ಯರು ಹಾಜರಿದ್ದರು.

SSF ಮೂಡಬೆದ್ರೆ ಡಿವಿಶನ್ ಮೀಡಿಯಾ ವಿಂಗ್

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com
error: Content is protected !!