ದಾರುಲ್ ಅಶ್ ಅರಿಯ್ಯ: ಶಾರ್ಜಾ ಸಮಿತಿಯಿಂದ ಪ್ರಚಾರ ಸಂಗಮ-ಸೆ.19 ಕ್ಕೆ

ಶಾರ್ಜಾ: ದಾರುಲ್ ಅಶ್ ಅರಿಯ್ಯ ಸುರಿಬೈಲ್ ಶಾರ್ಜಾ ಸಮಿತಿ ಇದರ ವತಿಯಿಂದ ಸನದು ದಾನ ಸಮ್ಮೇಳನದ ಪ್ರಚಾರ ಸಂಗಮ ಹಾಗೂ ಆತ್ಮೀಯ ಮಜ್ಲಿಸ್ ಇದೇ ಬರುವ ತಾರೀಖು 19/9/2019 ಶುಕ್ರವಾರ ರಾತ್ರಿ 9 ಗಂಟೆಗೆ ನಡೆಯಲಿದೆ.

ಅಲ್ ಖಾನ್ ಬವಾಬತ್ ಅಲ್ ಕರಮ್ ರೆಸ್ಟೋರೆಂಟ್ ಬಿಲ್ಡಿಂಗ್ ಪ್ಲಾಟ್ ನಂಬರ್ 303 ( ಬಹು ಅಬ್ದುಲ್ಲಾ ಹಾಜಿ ನಲ್ಕ ನಿವಾಸ ) ರಲ್ಲಿ ನಡೆಯುವ ಪ್ರಸ್ತುತ ಸಮಾರಂಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಂಯುಕ್ತ ಖಾಝಿ ಖುರ್ರತುಸ್ಸಾದಾತ್ ಅಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಕೂರತ್ ನೇತೃತ್ವ ಹಾಗೂ ದಾರುಲ್ ಅಶ್ ಅರಿಯ್ಯ ಸುರಿಬೈಲ್ ಇದರ ಜನರಲ್ ಮ್ಯಾನೇಜರ್ ಮಹಮ್ಮದ್ ಅಲಿ ಸಖಾಫಿ ಮುಖ್ಯ ಪ್ರಭಾಷಣ ಗೈಯ್ಯಲಿದ್ದಾರೆ.

ಈ ಸಮಾರಂಭದಲ್ಲಿ ಇನ್ನಿತರ ಹಲವು ಉಲಮಾ ಉಮರಾ ನೇತಾರರು ಭಾಗವಹಿಸಲಿದ್ದಾರೆ,ಕಾರ್ಯ ಕ್ರಮವನ್ನು ಯಶಸ್ವಿ ಗೊಳಿಸುವಂತೆ ದಾರುಲ್ ಅಶ್ ಅರಿಯ್ಯ ಸುರಿಬೈಲ್ ಶಾರ್ಜಾ ಕಮಿಟಿ ಪ್ರಕಟನೆಯಲ್ಲಿ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!