SSF ರಕ್ತದಾನ ಶಿಬಿರ:ರೋಗಿ ರಕ್ತ ನೀಡಿದವನ ಧರ್ಮ ನೋಡುವುದಿಲ್ಲ-ಶ್ರೀ ಭುವನಭಿರಾಮ ಉಡುಪ

ಎಸ್ಸೆಸ್ಸೆಫ್ ಮುಲ್ಕಿ ಸೆಕ್ಟರ್ ವತಿಯಿಂದ 08-09-19 ಆದಿತ್ಯವಾರದಂದು ಬೆಳಿಗ್ಗೆ ವೆನ್ಲಾಕ್ ಆಸ್ಪತ್ರೆಯ ಸಹಯೋಗದೊಂದಿಗೆ ಎಸ್ಸೆಸ್ಸೆಫ್ ದ.ಕ ಜಿಲ್ಲಾ ಬ್ಲಡ್ ಸೈಬೋ ದ 114 ನೇ ರಕ್ತದಾನ ಶಿಬಿರ ಕಿನ್ನಿಗೋಳಿಯ ಯುಗಪುರುಷ ಸಭಾ ಭವನದಲ್ಲಿ ನಡೆಯಿತು.

ಇದೇ ಸಂದರ್ಭದಲ್ಲಿ ಸೆಕ್ಟರ್ ಅಧ್ಯಕ್ಷ ಆಸೀಫ್ ಪಕ್ಷಿಕೆರೆ ಯವರ ಸಭಾಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು.ಕಿನ್ನಿಗೋಳಿ ಜುಮಾ ಮಸ್ಜಿದ್ ಖತೀಬರಾದ ಲತೀಫ್ ಸಖಾಫಿ ಉಸ್ತಾದ್ ದುಆ ಮಾಡಿದರು.

ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಕ್ಯೂ ಟೀಂ ಟ್ಯೂಟರಾದ ಸಂಶುದ್ಧೀನ್ ಅಹ್ಸನಿ ಉಸ್ತಾದರು, ಜಗತ್ತಿನಲ್ಲಿ ಎಲ್ಲದಕ್ಕೂ ಸಂಶೋದನೆಯಿಂದ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ, ಆದರೆ ರಕ್ತಕ್ಕೆ ಮಾತ್ರ ಪರ್ಯಾಯ ವ್ಯವಸ್ಥೆ ಇನ್ನೂ ಕಂಡು ಹಿಡಿಯಲಾಗಿಲ್ಲ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ SSF ಕರ್ನಾಟಕ ರಾಜ್ಯ ಕಾರ್ಯದರ್ಶಿ ಅಶ್ರಫ್ ಅಂಜದಿ ಪಕ್ಷಿಕೆರೆ ಉಸ್ತಾದರು, SSF ಕಾರ್ಯಕರ್ತರು ರಕ್ತದಾನ ಮಾಡುತ್ತಾ ಸಮಾಜದಲ್ಲಿ ಹಲವಾರು ಜೀವಗಳನ್ನು ಉಳಿಸುತ್ತಿದ್ದಾರೆ. ಆ ಮೂಲಕ ಸಮಾಜದ ಅಭಯ ಕೇಂದ್ರವಾಗಿ SSF ಕಾರ್ಯಾಚರಿಸುತ್ತಿದೆ ಎಂದೇಳುತ್ತಾ ಪ್ರಾಸ್ತಾವಿಕ ಭಾಷಣ ಮಾಡಿದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ SSF ದ.ಕ ಜಿಲ್ಲಾ ಬ್ಲಡ್ ಸೈಬೋ ಉಸ್ತುವಾರಿ ಕರೀಂ ಕೆದ್ಕಾರ್ ರವರು, ಅತ್ಯಾಲ್ಪ ಸಮಯದಲ್ಲಿ ಬ್ಲಡ್ ಸೈಬೋ ದ ಮೂಲಕ ದ.ಕ ಜಿಲ್ಲೆಯ ಉದ್ದಗಲಕ್ಕೂ SSF ರಕ್ತದಾನ ಶಿಬಿರ ಹಮ್ಮಿಕೊಂಡು ಸೈ ಎನಿಸಿದೆ, ಮುಂದಿನ ದಿನಗಳಲ್ಲಿ ಈ ರಕ್ತದಾನ ಶಿಬಿರವನ್ನು ರಾಜ್ಯಾದ್ಯಂತ ವಿಸ್ತರಿಸಲಿದ್ದೇವೆ ಎಂದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಯುಗಪುರುಷ ಸಭಾ ಭವನದ ಮುಖ್ಯಸ್ಥರಾದ ಭುವನಭಿರಾಮ ಉಡುಪರವರು, ರಕ್ತದಾನವು ಬಹಳ ಪುಣ್ಯವುಳ್ಳ ಕಾರ್ಯ, ರೋಗಿಗೆ ಅಗತ್ಯವಾಗಿ ಬೇಕಾಗಿರುವುದು ರಕ್ತವೇ ಹೊರತು, ರಕ್ತಕೊಟ್ಟವನ ಜಾತಿಯಲ್ಲ.. ಈ ನಿಟ್ಟಿನಲ್ಲಿ SSF ನವರು ನಡೆಸುತ್ತಿರುವ ರಕ್ತದಾನ ಶಿಬಿರ ಶ್ಲಾಘನೀಯವಾಗಿದೆ, ನಿಮ್ಮೆಲ್ಲಾ ಕಾರ್ಯಾಚರಣೆಗೆ ನನ್ನೆಲ್ಲಾ ಸಹಕಾರವಿದೆ ಎಂದರು.

ಇದೇ ಸಂದರ್ಭದಲ್ಲಿ ರಕ್ತದಾನ ಶಿಬಿರ ನಡೆಸಲು ಸ್ಥಳವಕಾಶವನ್ನು ಮಾಡಿಕೊಟ್ಟ ಯುಗ ಪುರುಷ ಸಭಾ ಭವನದ ಮುಖ್ಯಸ್ಥರಾದ ಭುವನಾಭಿರಾಮ ಉಡುಪರಿಗೆ SSF ಮುಲ್ಕಿ ಸೆಕ್ಟರ್ ವತಿಯಿಂದ ಕರೀಂ ಕೆದ್ಕಾರ್ ರವರು ಸ್ಮರಣಿಕೆ ನೀಡಿ ಗೌರವಿಸಿದರು.

ಹಾಗೂ ರಕ್ತದಾನ ಶಿಬಿರದಲ್ಲಿ ರಕ್ತ ಸಂಗ್ರಹಿಸಲು ಸಹಕರಿಸಿದ ವೆನ್ಲಾಕ್ ಆಸ್ಪತ್ರೆಯ ಸಿಬ್ಬಂದಿ ಬಳಗದ ಮುಖ್ಯಸ್ಥ ಆಶೋಕ್ ರವರಿಗೆ SSF ದ.ಕ ವೆಸ್ಟ್ ಝೋನ್ ಪ್ರ.ಕಾರ್ಯದರ್ಶಿ ಹೈದರ್ ಕಾಟಿಪಳ್ಳರವರು ಸ್ಮರಣಿಕೆ ನೀಡಿ ಗೌರವಿಸಿದರು.

ವೇದಿಕೆಯಲ್ಲಿ SSF ದ.ಕ ಜಿಲ್ಲಾ ಬ್ಲಡ್ ಸೈಬೋ ಉಸ್ತುವಾರಿ ಕರೀಂ ಕೆದ್ಕಾರ್, ದ.ಕ ವೆಸ್ಟ್ ಝೋನ್ ಬ್ಲಡ್ ಸೈಬೋ ಉಸ್ತುವಾರಿ ಹಕೀಂ ಪೂಮಣ್ಣು, SSF ಸುರತ್ಕಲ್ ಸೆಕ್ಟರ್ ಅಧ್ಯಕ್ಷ ಹನೀಫ್ ಅಹ್ಸನಿ ಶೇಡಿಗುರಿ, SSF ಸುರತ್ಕಲ್ ಡಿವಿಶನ್ ಪ್ರ.ಕಾರ್ಯದರ್ಶಿ ರಿಝ್ವಾನ್ ಕೃಷ್ಣಾಪುರ, SSF ಹಿತೈಷಿ ಮುಸ್ತಫ ಸಾಗ್, SSF ಮುಲ್ಕಿ ಸೆಕ್ಟರ್ ಮಾಜಿ ಅಧ್ಯಕ್ಷ ಸಿದ್ದೀಖ್ ಪುನರೂರು ಬಶೀರ್ ಹಿಮಮಿ ಜೋಕಟ್ಟೆ ಮುಂತಾದ SSF ಸೆಕ್ಟರ್, ಡಿವಿಶನ್, ಜಿಲ್ಲಾ, ರಾಜ್ಯ ನಾಯಕರು, ಹಿತೈಷಿಗಳು ಮುಖ್ಯ ಅಥಿತಿಗಳಾಗಿ ಭಾಗವಹಿಸಿದರು… ಕಾರ್ಯಕ್ರಮದಲ್ಲಿ KCF ಅಲ್ ಅಹ್ಸಾ ಸೆಕ್ಟರ್, ಸೌದಿ ಅರೇಬಿಯ ಕಾರ್ಯಕರ್ತ ಕೆ.ಎಂ ಇರ್ಶಾದ್ ಪಕ್ಷಿಕೆರೆ ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿ, ಧನ್ಯವಾದಗೈದರು.

SSF ಮುಲ್ಕಿ ಸೆಕ್ಟರ್ ರಕ್ತದಾನ ಶಿಬಿರದಲ್ಲಿ 42 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು.. ಅದೇ ದಿನ SSF ಸುರತ್ಕಲ್ ಡಿವಿಶನ್ ವ್ಯಾಪ್ತಿಗೊಳಪಟ್ಟ SSF ಮುಲ್ಕಿ ಸೆಕ್ಟರ್, ಸುರತ್ಕಲ್ ಸೆಕ್ಟರ್, ಕಾಟಿಪಳ್ಳ ಸೆಕ್ಟರ್ ಎಂಬ 3 ಸೆಕ್ಟರ್ ಗಳಲ್ಲಿ ರಕ್ತದಾನ ಶಿಬಿರ ನಡೆಯಿತು.‌‌

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com
error: Content is protected !!