janadhvani

Kannada Online News Paper

ಖತ್ತರ್ ಕೆ.ಸಿ.ಎಫ್ ವತಿಯಿಂದ ಪವಿತ್ರ ಮುಹರ್ರಂ ಸಂದೇಶ ಕಾರ್ಯಕ್ರಮ

ಖತ್ತರ್ : ಕೆ.ಸಿ.ಎಫ್ ಖತ್ತರ್ ರಾಷ್ಟ್ರೀಯ ಸಮಿತಿಯ ವತಿಯಿಂದ ಪವಿತ್ರ ಮುಹರ್ರಂ ತಿಂಗಳ ಸಂ\nದೇಶ ಕಾರ್ಯಕ್ರಮವು ದಿನಾಂಕ 6-9-2019 ರಂದು ಶುಕ್ರವಾರ ಕೆ.ಸಿ.ಎಫ್ ಸೆಂಟರ್ ಮೈದರ್ ನಲ್ಲಿ ಜರಗಿತು. ಕೆ.ಸಿ.ಎಫ್ ಖತ್ತರ್ ರಾಷ್ಟೀಯ ಸಮಿತಿಯ ಅಧ್ಯಕ್ಷರಾದ ಯೂಸುಫ್ ಸಖಾಫಿ ಅಯ್ಯಂಗೇರಿ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಇಸ್ಮಾಯಿಲ್ ಸಅದಿ ಕಿನ್ಯರವರು ಉದ್ಘಾಟಿಸಿದರು.

“ಹಿಜಿರಾ ಪಲಾಯನವಲ್ಲ ಹೊಸತನಕ್ಕೆ ಪಯಣ” ಎಂಬ ವಿಷಯದಲ್ಲಿ ಮುಹರ್ರಮಿನ ಮಹತ್ವ ಮತ್ತು ಸಂದೇಶ ಭಾಷಣ ನೀಡಿದ ಹಾಫಿಳ್ ಉಮರುಲ್ ಫಾರೂಖ್ ಸಖಾಫಿ ಎಮ್ಮೆಮಾಡುರವರು, ಧರ್ಮದ ಹೆಸರಿನಲ್ಲಿ ಒಂದು ವಿಭಾಗವು, ಮುಹರ್ರಂ ದೈವಿಕ ಶಕ್ತಿ ಎಂಬ ನೆಪದಲ್ಲಿ ನಡೆಸುತ್ತಿರುವ ಮಾಯ ಪ್ರದರ್ಶನವು ಅರ್ಥಶೂನ್ಯ ಆಚಾರವಾಗಿದೆ ಎಂದು ಹೇಳಿದರು.

ಈ ಪವಿತ್ರವಾದ ಮುಹರ್ರಂ ತಿಂಗಳ ಒಂದರಿಂದ ಹತ್ತು ಅಥವಾ ತಿಂಗಳ ಒಂಬತ್ತು ಮತ್ತು ಹತ್ತನೆಯ ದಿನ ವ್ರತಾನುಷ್ಠಾನ ಅತೀ ಪುಣ್ಯವಾದ ಆರಾಧನೆಯಾಗಿರೂದಲ್ಲದೇ ಅನೇಕ ಅದ್ಭುತಗಳಿಗೆ ಸಾಕ್ಷಿಯಾದ ಈ ಪವಿತ್ರ ತಿಂಗಳ ದಿನರಾತ್ರಿಗಳಲ್ಲಿ ಪ್ರತಿಫಲಾರ್ಹ ಆರಾಧನೆಗಳನ್ನು ಪುಣ್ಯ ನಬಿ ಮತ್ತು ಅಲ್ಲಿನ ಅನುಚರರು ನಮಗೆ ಕಲಿಸಿರುತ್ತಾರೆ. ಅದರ ವಿಶಾಲ ವಿವರಣೆಯನ್ನು ಕೂಡಾ ನಮ್ಮ ಉಲಮಾಗಳು ವಿವರಿಸಿದ್ದು ಅವುಗಳನ್ನು ನಾವು ಅನುಸರಿಸಿ ಜೀವನದಲ್ಲಿ ಅಳವಡಿಸಿ ಬಾಳಬೇಕೆಂದು ಉಸ್ತಾದರು ಕಾರ್ಯಕರ್ತರನ್ನು ನೆನಪಿಸಿದರು.

ವೇದಿಕೆಯಲ್ಲಿ ಕೆ.ಸಿ.ಎಫ್ ಖತ್ತರ್ ರಾಷ್ಟ್ರೀಯ ಸಂಘಟನಾ ವಿಭಾಗದ ಅಧ್ಯಕ್ಷ ಹನೀಫ್ ಪಾತೂರು, ರಾಷ್ಟ್ರೀಯ ಸಮಿತಿ ಕೋಶಾಧಿಕಾರಿ ಕಬೀರ್ ದೇರಳಕಟ್ಟೆ, ರಾಷ್ಟ್ರೀಯ ಸಮಿತಿ ಇಹ್ಸಾನ್ ವಿಭಾಗದ ಅಧ್ಯಕ್ಷ ಮುನೀರ್ ಮಾಗುಂಡಿ ಮೊದಲಾದವರು ಉಪಸ್ಥಿತರಿದ್ದರು. ಸಭೆಯ ಮೊದಲಿಗೆ
ಕೆ.ಸಿ.ಎಫ್ ಖತ್ತರ್ ರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಹಂಡುಗುಳಿ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.

ವರದಿ: ಕೆ.ಸಿ.ಎಫ್ ಪಬ್ಲಿಷಿಂಗ್ ವಿಭಾಗ ಖತ್ತರ್

error: Content is protected !! Not allowed copy content from janadhvani.com