SჄS ಟಿಪ್ಪುನಗರ ಬ್ರಾಂಚ್: ಸದಸ್ಯತ್ವ ಅಭಿಯಾನಕ್ಕೆ ದಾರುನ್ನಜಾತ್ ಸಂಸ್ಥೆಯಲ್ಲಿ ಚಾಲನೆ

ಕರ್ನಾಟಕ ರಾಜ್ಯಾದ್ಯಂತ ಇಂದಿನಿಂದ ಆರಂಭಗೊಂಡಿರುವ SჄS ಸದಸ್ಯತ್ವ ಅಭಿಯಾನದ ಭಾಗವಾಗಿ ಟಿಪ್ಪುನಗರ ಬ್ರಾಂಚ್ ವ್ಯಾಪ್ತಿಯ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ಕೊಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಶಿಲ್ಪಿ ಅಬೂಬಕರ್ ಉಸ್ತಾದ್ ಅಧ್ಯಕ್ಷತೆ ವಹಿಸಿ ದರು. ವಾಲೆಮೊಂಡೋವ್ ಉಸ್ತಾದ್ ದುವಾ ಮಾಡಿದರು. ಮುಖ್ಯ ಸಂದೇಶ ಭಾಷಣವನ್ನು ಸಂಸ್ಥೆಯ ಮುದರಿಸ್ ಮುಹಮ್ಮದ್ ಫಾಝಿಲ್ ಕಾಮಿಲ್ ಸಖಾಫಿ ಕೊಡ್ಲಿಪೇಟೆ ಮಾಡಿದರು.

ಇಬ್ರಾಹಿಂ ಮುಸ್ಲಿಯಾರ್ ಟಿಪ್ಪುನಗರ ಸ್ವಾಗತ ಮಾಡಿದರು, ಅಬೂಬಕ್ಕರ್ ಸಖಾಫಿ, ಉಸ್ಮಾನ್ ಹಾಜಿ, SჄS ಟಿಪ್ಪುನಗರ ಅಧ್ಯಕ್ಷ ರಾಗಿರುವ ಮೋನುಚ್ಚ, ಅಬೂಬಕರ್ ಮತ್ತು ಹಲವಾರು SჄS ಕಾರ್ಯಕರ್ತರು, ಮಂಬವುಲ್ ಉಲೂಂ ದರ್ಸ್ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗಿಯಾದರು. SჄS ಸದಸ್ಯತನವನ್ನು ಇಬ್ರಾಹಿಂ ಟಿಪ್ಪುನಗರ ರವರಿಗೆ ಕೊಡುವ ಮೂಲಕ ಚಾಲನೆ ಕೊಡಲಾಯಿತು.

Leave a Reply

Your email address will not be published. Required fields are marked *

error: Content is protected !!