ದೋಹಾ: ತಾಪವನ್ನು ಕಡಿಮೆಗೊಳಿಸುವ ಸಲುವಾಗಿ ನೀಲಿ ರಸ್ತೆಯನ್ನು ಪರಿಚಯಿಸಲು ಖತರ್ ಲೋಕೋಪಯೋಗಿ ಇಲಾಖೆ ಮುಂದಾಗಿದೆ. ನೀಲಿ ಬಣ್ಣವು ತಾಪಮಾನವನ್ನು 15 ಡಿಗ್ರಿ ವರೆಗೆ ತಗ್ಗಿಸುತ್ತದೆ ಎಂಬ ಅಧ್ಯಯನದ ಹಿನ್ನೆಲೆಯಲ್ಲಿ ದೋಹಾದ ಮುಖ್ಯ ರಸ್ತೆಯ ಬಣ್ಣವನ್ನು ಪ್ರಾಯೋಗಿಕವಾಗಿ ಬದಲಾಯಿಸಲಾಗಿದೆ.
ದೋಹಾ ಸೂಖ್ ವಾಕಿಫ್‌ನ ಎದುರಿನ ಅಬ್ದುಲ್ಲಾ ಬಿನ್ ಜಾಸಿಮ್ ಸ್ಟ್ರೀಟ್‌ನಲ್ಲಿರುವ ರಸ್ತೆಗೆ ನೀಲಿ ಬಣ್ಣಬಳಿಯಲಾಗಿದೆ. ಮೊದಲ ನೋಟದಲ್ಲಿ, 200 ಮೀಟರ್ ಉದ್ದದ ನೀಲ ನೆಲಹಾಸು ಹಾಸಿದಂತೆ ಗೋಚರಿಸುತ್ತಿದೆ. ಅಧ್ಯಯನದ ಪ್ರಕಾರ, ಕಪ್ಪು ಬಣ್ಣಕ್ಕೆ ಬದಲಾಗಿ ನೀಲಿ ಬಣ್ಣ ಬಳಿದರೆ, ರಸ್ತೆ ಮತ್ತು ಪಕ್ಕದ ಪ್ರದೇಶದಲ್ಲಿನ ತಾಪಮಾನವು 20 ರಿಂದ 15 ಡಿಗ್ರಿ ವರೆಗೆ ಕಡಿಮೆಯಾಗುತ್ತದೆ.
ರಸ್ತೆಬದಿಯಲ್ಲಿ ತಾಪಮಾನ ನಿರೀಕ್ಷಣೆಗಾಗಿ ಪ್ರತ್ಯೇಕ ವ್ಯವಸ್ಥೆಯನ್ನು ಸ್ಥಾಪಿಸಲಾಗಿದೆ. ಕತಾರಾದಲ್ಲಿರುವ ಬೈಸಿಕಲ್ ಟ್ರ್ಯಾಕ್‌ನಲ್ಲೂ ಪ್ರಾಯೋಗಿಕವಾಗಿ ನೀಲಿ ಬಣ್ಣ ಬಳಿಯಲಾಗಿದೆ. ಲೋಕೋಪಯೋಗಿ ವಿಭಾಗವಾದ ಅಶ್ಗಾಲ್ ಜಪಾನಿನ ಪ್ರಮುಖ ಕಂಪನಿಯೊಂದರ ಸಹಕಾರದೊಂದಿಗೆ ಈ ಯೋಜನೆ ಜಾರಿಗೊಳಿಸುತ್ತಿದೆ.