ಜೆರುಸಲೇಂ: ಖುದ್ಸ್ ನಗರವು ರಾಜಧಾನಿಯಾಗಿ ಫಲಸ್ತೀನನ್ನು ಮರಳಿ ಪಡೆಯುವವರೆಗೂ ಪೆಲಸ್ತೀನ್‌ಗೆ ನೀಡಲಾಗುವ ನೆರವು ಮುಂದುವರಿಯಲಿದೆ ಎಂದು ಎಂದು ಇಸ್ಲಾಮಿಕ್ ದೇಶಗಳ ಒಕ್ಕೂಟ ಮತ್ತೊಮ್ಮೆ ಪ್ರಕಟಿಸಿದೆ. ಮಸ್ಜಿದುಲ್ ಅಖ್ಸಾಕೆ ಬೆಂಕಿಯಿಟ್ಟ 50 ನೇ ವಾರ್ಷಿಕದಂದು ಹೊರಡಿಸಲಾದ ಹೇಳಿಕೆಯಲ್ಲಿ ತಿಳಿಸಲಾಗಿದೆ. ಈ ಪ್ರದೇಶದ ಧಾರ್ಮಿಕ ಚಿಹ್ನೆಗಳು ರಕ್ಷಿಸಲ್ಪಡಬೇಕು ಎಂದು ಒಐಸಿ ಒತ್ತಾಯಿಸಿದೆ.
1969ರ ಆಗಸ್ಟ್ 21ರಂದು, ಜೆರುಸಲೇಮಿನ ಅಲ್-ಅಖ್ಸಾ ಮಸೀದಿಗೆ ಆಸ್ಟ್ರೇಲಿಯಾದ ಕ್ರಿಶ್ಚಿಯನ್ ಉಗ್ರನೋರ್ವ ಬೆಂಕಿ ಹಚ್ಚಿದ್ದನು. ಜಾಗತಿಕ ಮಟ್ಟದಲ್ಲಿ ಪ್ರತಿಭಟನೆಗೊಳಗಾದ ಘಟನೆಯ 50ನೇ ವಾರ್ಷಿಕದಂದು ಇಸ್ಲಾಮಿಕ್ ರಾಷ್ಟ್ರಗಳ ಸಂಘಟನೆ ಈ ಹೇಳಿಕೆ ನೀಡಿದೆ.
ಪ್ಯಾಲೆಸ್ತೀನ್ ಮತ್ತು ಖುದ್ಸ್‌ನ ಕ್ರಿಶ್ಚಿಯನ್ ಚಿಹ್ನೆಗಳು ಸಹಿತ ಸಂರಕ್ಷಿಸಲ್ಪಡಬೇಕು. ಮುಸ್ಲಿಮರು ಪ್ರಾರ್ಥನೆಗಾಗಿ ಮಕ್ಕಾದ ಕಅಬಾ ಕಡೆಗೆ ತಿರುಗುವ ಮೊದಲು ಮಸ್ಜಿದುಲ್ ಅಖ್ಸಾ ಕಡೆಗೆ ತಿರುಗಿ ನಮಾಝ್ ನಿರ್ವಹಿಸಲಾಗುತ್ತಿತ್ತು. ಇದು ಮೊದಲ ಕಿಬ್ಲಾ ಮತ್ತು ಮೂರನೇ ಹರಮ್ ಆಗಿದೆ. ಈಗಲೂ ಮಸೀದಿ ಮೇಲಿನ ಆಕ್ರಮಣ ಮುಂದುವರಿದಿದ್ದು, ಮುಸ್ಲಿಮರಿಗೆ ಇಲ್ಲಿ ನಿಯಂತ್ರಣವಿದೆ. ಮಸೀದಿಯ ಸುತ್ತಲೂ ಕಂದಕಗಳನ್ನು ನಿರ್ಮಿಸಿರುವ ಇಸ್ರೇಲಿ ನಡೆ ಖಂಡನಾರ್ಹವಾಗಿದೆ ಎಂದು ಒಐಸಿ ತಿಳಿಸಿದೆ.
ಅಂತರರಾಷ್ಟ್ರೀಯ ನಿಯಮಗಳು ಮತ್ತು ನಿಬಂಧನೆಗಳನ್ನು ಪಾಲಿಸುವಂತೆ ಇಸ್ರೇಲ್ ಅನ್ನು ಒತ್ತಾಯಿಸಲು ಅಂತರ್‌ರಾಷ್ಟ್ರೀಯ ಸಮುದಾಯವು ಮುಂದೆ ಬರಬೇಕು ಮತ್ತು 1967 ರ ಖುದ್ಸ್ ರಾಜಧಾನಿಯಾಗಿರುವ ದೇಶವನ್ನು ಮತ್ತೆ ವಶಪಡಿಸಿಕೊಳ್ಳುವವರೆಗೂ ಬೆಂಬಲ ಮುಂದುವರಿಯುತ್ತದೆ ಎಂದು ಓಐಸಿ ಘೋಷಿಸಿದೆ.















ಇನ್ನಷ್ಟು ಸುದ್ದಿಗಳು
ಅಮೆರಿಕ-ಇರಾನ್ ಒಪ್ಪಂದ: ‘ಮಿಸ್ಟರ್ ಸೆಕ್ಯೂರಿಟಿ’ಗೆ ಭಾರಿ ಹಿನ್ನಡೆ- ನೆತನ್ಯಾಹು ರಾಜಕೀಯ ವರ್ಚಸ್ಸಿಗೆ ಧಕ್ಕೆ
‘ಪಶ್ಚಿಮ ಏಷ್ಯಾದಲ್ಲಿ ಶಾಂತಿಯ ಉದಯ’ ;ಅಮೆರಿಕ-ಇರಾನ್ ಕದನ ವಿರಾಮ ತಿಳುವಳಿಕಾ ಪತ್ರಕ್ಕೆ ಸಹಿ- ಹಾರ್ಮುಜ್ ಜಲಸಂಧಿ ಶೀಘ್ರದಲ್ಲೇ ಮುಕ್ತ
ಇರಾನ್ ಒಪ್ಪಂದ ಪಾಲಿಸದಿದ್ದರೆ ನೆತ್ತಿ ಮೇಲೆ ಬಾಂಬ್ ವರ್ಷಣ- ಡೊನಾಲ್ಡ್ ಟ್ರಂಪ್ ಖಡಕ್ ಎಚ್ಚರಿಕೆ!
ಇರಾನ್-ಯುಎಸ್ ಕದನ ವಿರಾಮ: ಡೊನಾಲ್ಡ್ ಟ್ರಂಪ್ ಘೋಷಣೆ- ಇರಾನ್ನಿಂದಲೂ ದೃಢೀಕರಣ
ಮುಂದಿನ 24 ಗಂಟೆಗಳಲ್ಲಿ ಯು.ಎಸ್-ಇರಾನ್ ಶಾಂತಿ ಒಪ್ಪಂದ ಅಂತಿಮ: ಪಾಕ್ ಪ್ರಧಾನಿ ಶಹಬಾಝ್ ಷರೀಫ್
“ಬೆಲೆ ಏರಿಕೆ ನನಗೆ ಇಷ್ಟ”-ಇರಾನ್ ಯುದ್ಧದ ಕಾರಣದಿಂದ ಉಂಟಾದ ಬೆಲೆ ಏರಿಕೆಯ ಬಗ್ಗೆ ಟ್ರಂಪ್ ವಿವಾದಾತ್ಮಕ ಹೇಳಿಕೆ
’60 ದಿನಗಳಲ್ಲಿ ಹೊಸ ಕೆಲಸ ಹುಡುಕಿ, ಇಲ್ಲದಿದ್ದರೆ ದೇಶ ತೊರೆಯಿರಿ’- ಭಾರತೀಯ ಉದ್ಯೋಗಿಗಳಿಗೆ ಆತಂಕ
ಗಲ್ಫ್ ನಾಯಕರ ವಿನಂತಿಗೆ ಮನ್ನಣೆ ; ಇರಾನ್ ಮೇಲಿನ ದಾಳಿ ತಾತ್ಕಾಲಿಕ ರದ್ದು- ಟ್ರಂಪ್
‘ಯುದ್ಧ ಕೊನೆಗೊಳಿಸುವುದಕ್ಕೆ ಆದ್ಯತೆ ನೀಡಬೇಕು’- ಅಮೆರಿಕದ 14 ಅಂಶಗಳ ಪ್ರಸ್ತಾವನೆಗೆ ಇರಾನ್ ಪ್ರತಿಕ್ರಿಯೆ
ಕೊಲೆ ಬೆದರಿಕೆ, ದಂಗೆಯ ಸಾಧ್ಯತೆ; ನಿವಾಸ ಬಿಟ್ಟು ಹೊರಬಾರದ ಪುಟಿನ್- ಭದ್ರತಾ ವ್ಯವಸ್ಥೆಯಲ್ಲಿ ಭಾರಿ ಬದಲಾವಣೆ