ಜಪ್ಪು ಸಬೀಲುತ್ತಾವುನ್ ಹಳೆ ವಿದ್ಯಾರ್ಥಿ ಸಂಘ: ಧಾರ್ಮಿಕ ತರಗತಿಗೆ ಚಾಲನೆ

ಮಂಗಳೂರು: ಇಲ್ಲಿನ ಜಪ್ಪು ಮಸೀದಿಯಲ್ಲಿ ಬಹು: ಶೈಖುನಾ ಜಪ್ಪು ಉಸ್ತಾದರ ದರ್ಸಿನಲ್ಲಿ ಧಾರ್ಮಿಕ ವಿದ್ಯೆಕಲಿತು, ಬಿರುದು ಪಡೆದವರೂ, ಅಲ್ಲದವರೂ ಒಂದಾಗಿ ಕಾರ್ಯಾಚರಿಸುವ ಸಬೀಲುತ್ತಾವುನ್ ಹಳೆ ವಿದ್ಯಾರ್ಥಿ ಸಂಘಟನೆಯ ಸದಸ್ಯರಿಗೆ 3 ತಿಂಗಳಿಗೊಮ್ಮೆ ನಡೆಸುವ ಧಾರ್ಮಿಕ ತರಗತಿಗೆ ಚಾಲನೆ ನೀಡಲಾಯಿತು.

ದಿನಾಂಕ 21 ರಂದು ಬಹು:ಶೈಖುನಾ ಜಪ್ಪು ಉಸ್ತಾದರು(كتاب بداية الهداية)ತರಗತಿ ನಡೆಸುವ ಮೂಲಕ ಹಳೆ ವಿದ್ಯಾರ್ಥಿಗಳಿಗೆ ದರ್ಸ್ ಕಲಿಕಾ ಸಮಯದ ಅನುಭವವನ್ನು ನೀಡಿದರು.

ತರಗತಿ ಬಳಿಕ ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಉದ್ಯಾವರ ಇವರ ನೇತೃತ್ವದಲ್ಲಿ ಮರ್ಹೂಮ್ ಶರಫುಲ್ ಉಲಮಾ ಹಾಗೂ ಅಗಲಿದ ಉಲಮಾಗಳ ಮೇಲೆ ಖುರ್ಆನ್ ಪಠಿಸಿ, ತಹ್ಲೀಲ್ ಹಾಗೂ ದುಆ ನಡೆಸಲಾಯಿತು.

ಕುಕ್ಕಾಜೆ ಇಬ್ರಾಹಿಮ್ ಮದನಿಯವರು ಸ್ವಾಗತಿಸಿ, ಅಬ್ದುಲ್ ಅಝೀಝ್ ಮದನಿ ಪರಪ್ಪು ರವರು ದನ್ಯವಾದ ಹೇಳಿದರು.

ಇಕ್ಬಾಲ್ ಮದನಿ ಕಟ್ಟತ್ತಿಲ

Leave a Reply

Your email address will not be published. Required fields are marked *

error: Content is protected !!