ಜಿದ್ದಾದಿಂದ ಬರೀ 35 ನಿಮಿಷಗಳಲ್ಲಿ ಮಕ್ಕಾ ತಲುಪುವ ಹೊಸ ರಸ್ತೆ

ಜಿದ್ದಾ: ಜಿದ್ದಾದಿಂದ ಬರೀ 35 ನಿಮಿಷಗಳಲ್ಲಿ ಮಕ್ಕಾ ತಲುಪಲು ಸಾಧ್ಯವಿರುವ ರಸ್ತೆಯ ಕಾಮಗಾರಿ ಪೂರ್ಣಗೊಂಡ ಬಳಿಕ ಹಜ್-ಉಮ್ರಾ ಯಾತ್ರಾರ್ಥಿಗಳ ಸಂಚಾರಕ್ಕಾಗಿ ಬಳಸಲಾಗುವುದು ಎಂಬ ಅಧಿಕೃತ ಮಾಹಿತಿಯನ್ನು ಅರಬ್ ನ್ಯೂಸ್ ಪೋರ್ಟಲ್ ವರದಿ ಮಾಡಿದೆ.

ಎರಡೂ ಬದಿ ನಾಲ್ಕು ಟ್ರಾಕ್‌ಗಳನ್ನು ಹೊಂದಿರುವ ರಸ್ತೆ ಮೂಲಕ ಜಿದ್ದಾದ ಕಿಂಗ್ ಅಬ್ದುಲ್ ಅಝೀಝ್ ರಸ್ತೆಯಿಂದ ಯಾವುದೇ ತಡೆ ಇಲ್ಲದೆ ಮಕ್ಕಾ ತಲುಪುವುದು ಸಾಧ್ಯವಾಗಲಿದೆ.

35 ನಿಮಿಷಗಳಲ್ಲಿ ತಲುಪಬಹುದಾದ ಈ ರಸ್ತೆಯು 72 ಕಿ.ಮೀ. ಉದ್ದವಿರುವುದಾಗಿ ವರದಿಯು ತಳಿಸಿದೆ.

ವಿವಿಧ ಖಾತೆಗಳ ಅಧ್ಯಯನ ಗಳ ಬಳಿಕ ರಸ್ತೆಯನ್ನು ಹಜ್ ಉಮ್ರಾ ಯಾತ್ರಾರ್ಥಿಗಳ ಬಳಕೆಕಾಗಿ ಉಪಯೋಗಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ.

ನಾಲ್ಕು ಹಂತಗಳಲ್ಲಿ ಕಾಮಗಾರಿ ನಡೆಯುವ ಹೊಸ ರಸ್ತೆಯ ಮೂರು ಹಂತಗಳಿಗೆ ತಗಲುವ ಮೊತ್ತವನ್ನು ಈಗಾಗಲೇ ಸರಕಾರ ಬಿಡುಗಡೆಗೊಳಿಸಿದೆ.

Leave a Reply

Your email address will not be published. Required fields are marked *

error: Content is protected !!