ಮಾಗುಂಡಿ ನೆರೆಸಂತ್ರಸ್ತರ ಪರಿಹಾರ ನಿಧಿಗೆ ಸುನ್ನಿ ಕೋ-ಆರ್ಡಿನೇಶನ್ ನಿಂದ ನೆರವು

ಚಿಕ್ಕಮಗಳೂರು ; ಇತ್ತೀಚೆಗೆ ಕರ್ನಾಟಕ ರಾಜ್ಯಾದ್ಯಂತ ಪ್ರಕೃತಿ ವಿಕೋಪದಲ್ಲಿ ಭಾರಿ ಪ್ರಮಾಣದಲ್ಲಿ ಜನರು ಸಂಕಷ್ಟ ಕ್ಕೀಡಾಗಿದ್ದರು. ಸುನ್ನಿ ಕೋ ಆರ್ಡಿನೇಶನ್ ಕರ್ನಾಟಕ ಎಲ್ಲಾ ನೆರೆ ಸಂತ್ರಸ್ತರಿಗೆ ವಿವಿಧ ರೀತಿಯಲ್ಲಿ ನೆರವಾಗುತ್ತಿದ್ದು ಆ ಪ್ರಯುಕ್ತ ಚಿಕ್ಕಮಗಳೂರು ಮಾಗುಂಡಿ ಪ್ರದೇಶದ ನಿರಾಶ್ರಿತರ ಪುನರ್ವಸತಿಗಾಗಿ ಅಲ್ಲಿಯ ಜಮಾಅತ್ ಕಮಿಟಿಯ ಮೂಲಕ ಪ್ರಥಮ ಹಂತದ 2 ಲಕ್ಷ ರೂಪಾಯಿ ನೀಡಲಾಯಿತು.

ಈ ಸಂದರ್ಭದಲ್ಲಿ ಸುನ್ನಿ ಕೋ ಆರ್ಡಿನೇಷನ್ ಕರ್ನಾಟಕ ಪ್ರಧಾನ ಕಾರ್ಯದರ್ಶಿ ಪಿ ಪಿ ಅಹ್ಮದ್ ಸಖಾಫಿ ಕಾಶಿಪಟ್ನ , SჄS ರಾಜ್ಯಾದ್ಯಕ್ಷ ಜಿ ಎಂ ಕಾಮಿಲ್ ಸಖಾಫಿ , ಪ್ರಧಾನ ಕಾರ್ಯದರ್ಶಿ ಡಾ. MSM ಝೈನಿ ಕಾಮಿಲ್, ಕರ್ನಾಟಕ ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ಎನ್ ಕೆ. ಎಂ ಶಾಫಿ ಸಅದಿ, ಚಿಕ್ಕ ಮಗಳೂರು ಜಿಲ್ಲಾ ಗೌರಾವಧ್ಯಕ್ಷ ಹಾಜಿ‌ ಯೂಸುಫ್ ಉಪ್ಪಳ್ಳಿ, KCF ಅಂತಾರಾಷ್ಟ್ರೀಯ ಕಾರ್ಯದರ್ಶಿ ರಹೀಮ್ ಸಅದಿ ಕತ್ತರ್, SჄS ಜಿಲ್ಲಾ ನಾಯಕರಾದ ಅಝೀಝ್ ಮಾಗುಂಡಿ , ಆಶ್ರಫ್ ಕಿನಾರ ಮಂಗಳೂರು , ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಹುಸೈನ್ ಸ’ಅದಿ ಹೊಸ್ಮಾರ್, ಜಿಲ್ಲಾಧ್ಯಕ್ಷ ಸಫ್ವಾನ್ ಸಖಾಫಿ ಶಾಂತಿಪುರ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!