ಶಾರ್ಜಾ: ಭವ್ಯ ಭಾರತದ 73ನೇ ಸ್ವಾತಂತ್ರ್ಯೊತ್ಸವವನ್ನು “ಮರೀಚಿಕೆಯಾಗದಿರಲಿ ಭಾರತದ ಸ್ವಾತಂತ್ರ್ಯ”ಎಂಬ ಶೀರ್ಷಿಕೆಯಡಿಯಲ್ಲಿ ದಿನಾಂಕ 16-8-19 ರಂದು ಕೆ.ಸಿ.ಎಫ್ ಶಾರ್ಜಾ ವಲಯ ಸಮಿತಿಯ ವತಿಯಿಂದ ಇದರ ಪ್ರಧಾನ ಕಾರ್ಯದರ್ಶಿ ರಜಬ್ ಮುಹಮ್ಮದ್ ಉಚ್ಚಿಲರವರ ಘನ ಅಧ್ಯಕ್ಷತೆಯಲ್ಲಿ ಅಬ್ದುಲ್ ರಜಾಕ್ ಹುಮೈದಿಯವರ ರೋಲಾ ನಿವಾಸದಲ್ಲಿ ನಡೆಸಲಾಯಿತು.
ಬಹು! ಅಶ್ರಫ್ ಮುಸ್ಲಿಯಾರ್ ಅಳಿಕೆಯವರ ದುಆದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಕಛೇರಿ ವಿಭಾಗದ ಕಾರ್ಯದರ್ಶಿ ತಾಜುದ್ದೀನ್ ಅಮ್ಮುಂಜೆಯವರು ಸ್ವಾಗತಿಸಿ, ಇಕ್ಬಾಲ್ ಮಂಜನಾಡಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ರಜಬ್ ಮುಹಮ್ಮದ್ ಉಚ್ಚಿಲರವರು ಅಧ್ಯಕ್ಷ ಭಾಷಣಗೈದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಕೆ.ಸಿ.ಎಫ್ ಯು.ಎ.ಇ ರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿಯಾದ ಬಹು! ಮೂಸಾ ಹಾಜಿ ಬಸಾರಾರವರು ಮುಖ್ಯ ಭಾಷಣ ಮಾಡಿದರು.
ನಂತರ ಪಾರುಕ್ ಕುಂಜಿಲಾರವರು ತಮ್ಮ ಮಧುರ ಕಂಠದಿಂದ ಸ್ವಾತಂತ್ರ್ಯದ ಬಗ್ಗೆ ಹಾಡಿ, ಹನೀಫ್ ಬಸರಾ, ತಾಜುದ್ದೀನ್ ಅಮ್ಮುಂಜೆ ಮತ್ತು ನಝೀಮ್ ಮುಈನಿ ಆಶಂಸೆ ಭಾಷಣ ಮಾಡಿದರು. ನಂತರ ನಡೆದ ಕ್ವಿಝ್ ಸ್ಪರ್ಧೆಯಲ್ಲಿ ಮುಸ್ತಫಾ ಪಂಜ ಮೊದಲ ಸ್ಥಾನ ಪಡೆದರು.
ಬಳಿಕ ರಾಷ್ಟ್ರ ಗೀತೆಯನ್ನು ಹಾಡಿ, ಸಿಹಿ ತಿಂಡಿ ಹಂಚಲಾಯಿತು. ಕೊನೆಯಲ್ಲಿ ಅಬ್ದುಲ್ ರಝಾಖ್ ಹುಮೈದಿಯವರು ಧನ್ಯವಾದ ಕೋರಿ ಮೂರು ಸ್ವಲಾತಿನೊಂದಿಗೆ ಕಾರ್ಯಕ್ರಮವನ್ನು ಕೊನೆಗೊಳಿಸಲಾಯಿತು.