ಮೊಹಿಯದ್ದಿನ್ ಜುಮಾ ಮಸೀದಿ ಮತ್ತು ಮಾಚಾರ್ ಮಹಮ್ಮದ್ ವಲಿಯುಲ್ಲಾಹಿ ದರ್ಗಾ ಶರೀಫ್ ನಲ್ಲಿ ಜಮಾತರೆಲ್ಲರು ಪರಸ್ಪರ ಹಸ್ತಲಾಘವ ಮಾಡುವ ಮೂಲಕ ಈದುಲ್-ಅಳ್’ಹಾ ಆಚರಿಸಿದರು.
ಖುತ್’ಬಃ ಹಾಗೂ ನಮಾಝ್’ಗೆ ಖತೀಬ್ ಉಸ್ತಾದರಾದ ಬಹು! ಅಬ್ಬಾಸ್ ಮದನಿ ಉರ್ಲಡ್ಕ ನೇತ್ರತ್ವ ನೀಡಿದರು.ನೆರೆ ಸಂತ್ರಸ್ತರಿಗೆ ವಿಶೇಷ ಪ್ರಾರ್ಥನೆ ಮಾಡಿ ಫಂಡ್ ಸಂಗ್ರಹಿಸಲಾಯಿತು.
ನಂತರ ಮಸೀದಿಯ ಅಭಿವೃದ್ಧಿಗೆ ಕೈಜೋಡಿಸುವ, ಹಾಗೂ ಊರಿನಲ್ಲಿ ಜಾತಿ ಮತ ಭೇದವಿಲ್ಲದೆ ಎಲ್ಲಾ ವಿಷಯದಲ್ಲೂ ಸಹಕರಿಸುತ್ತಿರುವ “ಖಿದ್ಮತ್ ಗ್ರೂಪ್ ಮಾಚಾರ್” ಇದರ ಗೌರವಧ್ಯಕ್ಷರಾದ ಅಬ್ದುರ್ರಝ್ಝಾಕ್ ಬೆದ್ರಳಿಕೆ, ಅದ್ಯಕ್ಷರಾದ ಅಶ್ರಫ್ ಮಸೀದಿ ಬಳಿ, ಸದಸ್ಯರಾದ ಅನ್ಸಾರ್ ಕಿಲೋಬಝಾರ್, ಅಝರ್ ಅಂಗಡಿ, ರಿಯಾಝ್ ಬೆದ್ರಳಿಕೆ, ರಶೀದ್ ಕೆಳಗಿನಮನೆ ಇವರಿಗೆ ಹಾಗೂ SSF ಮಾಚಾರು ಶಾಖೆ ಯ ಅಧ್ಯಕ್ಷರಾದ ಅಬ್ದುಸ್ಸಲಾಮ್ ಅಂಗಡಿ ರವರಿಗೂ ಜಮಾಅತಿನ ವತಿಯಿಂದ ಸನ್ಮಾನಿಸಲಾಯಿತು.
ಅಧ್ಯಕ್ಷರಾದ ಬಿ.ಎಂ ಇಲ್ಯಾಸ್, ಗೌರವ ಅಧ್ಯಕ್ಷ ಹಂಝ ಬಿ ಎ, ಪ್ರ ಕಾರ್ಯದರ್ಶಿ ಇಕ್ಬಾಲ್ ಮಾಚಾರ್,ಕೋಶಾಧಿಕಾರಿ ಅಬ್ದುಲ್ ರಝಾಕ್ ಚೆಕ್ಕೆಡಡಿ ,ಹಸನಬ್ಬ ಬೆದ್ರಳಿಕೆ, ಹಸೈನಾರ್ ಟೈಲ್ಸ್, ಪುತ್ತಾಕ ಅಡ್ಡಾಲಿ, ಉಪಾಧ್ಯಕ್ಷ ಸಲೀಂ ಅಂಗಡಿ,ಕಾರ್ಯದರ್ಶಿ ಶರೀಫ್ ಬೆದ್ರಳಿಕೆ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಜಮಾತರು ಉಪಸ್ಥಿತರಿದ್ದರು.
ವರದಿ:ಎಂ.ಎಂ.ಉಜಿರೆ.