✍🏻ಎಂ.ಕೆ.ಸಿನಾನ್ ಸಖಾಫಿ ಅಜಿಲಮೊಗರು
ಅವರು ಯಾವುದೋ ಒಂದು ರೋಗಿಯ ತುರ್ತು ಅವಶ್ಯಕತೆಯನ್ನು ಪೂರೈಸಿ ರಾತ್ರಿ 3 ಘಂಟೆಗೆ ಮನೆಗೆ ತಲುಪಿ ನಿದ್ರೆಗೆ ಜಾರಿದ್ದರು. 5 ಘಂಟೆಯ ಹೊತ್ತಲ್ಲೊಂದು ಫೋನ್ ಕಾಲ್. ಅಟೆಂಡ್ ಮಾಡಿದಾಗ ಒಬ್ಬಾಕೆ ಮಹಿಳೆಯ ಧ್ವನಿ. “ಅಕ್ಕ ಯೆನೋಪೋಯ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ಡಾಳೆˌ 8 ಘಂಟೆಯ ಒಳಗೆ ಒಂದು ಯೂನಿಟ್ ರಕ್ತದ ಅವಶ್ಯಕತೆಯಿದೆˌ ಈ ಆಸ್ಪತ್ರೆಯಲ್ಲಿ ಆ ವಿಭಾಗದ ರಕ್ತವಿಲ್ಲ.ಇನ್ನು 3 ಘಂಟೆ ಬಾಕಿˌ ರಕ್ತ ತಲುಪಿಸದಿದ್ದಲ್ಲಿ ಜೀವಕ್ಕೆ ಅಪಾಯ ಖಾತ್ರಿˌ ಹೇಗಾದರೂ ಮಾಡಿ ನನ್ನ ಅಕ್ಕನ ಜೀವ ಉಳಿಸಿ ಪ್ಲೀಸ್…..”ಎಂಬ ಭಾವುಕತೆಯ ಮಾತುಗಳಾಗಿತ್ತು.
ಅವರು ತಕ್ಷಣವೇ ಎಚ್ಚೆತ್ತು ಮಂಗಳೂರಿನ ಹೆಚ್ಚಿನ ಆಸ್ಪತ್ರೆಯ ಬ್ಲಡ್ ಬ್ಯಾಂಕ್ ಗೆ ಕರೆ ಮಾಡಿದಾಗ ಎಲ್ಲೂ ಕೂಡ ಆ ವಿಭಾಗದ ರಕ್ತ ಸಂಗ್ರಹವಿಲ್ಲ.ಕೊನೇಗೆ ಮಣಿಪಾಲ್ ಆಸ್ಪತ್ರೆಗೆ ಕರೆ ಮಾಡಿದಾಗˌ ಅಲ್ಲಿ ರಕ್ತವಿತ್ತು.ಆದರೆ 8 ಘಂಟೆಯ ಒಳಗೆ ಮಂಗಳೂರು ತಲುಪಿಸುವುದು ಅಸಾಧ್ಯವಾಗಿತ್ತು. ಹಲವಾರು ರಕ್ತದಾನ ಶಿಬಿರಗಳಿಗೆ ನಾಯಕತ್ವ ನೀಡಿದ ಅವರ ಕೈಯಲ್ಲಿ ದಾನಿಗಳ ಹೆಸರು ಹಾಗೂ ಬ್ಲಡ್ ಗ್ರೂಪ್ ಪಟ್ಟಿಯಿತ್ತು. ತೆರೆದು ನೋಡಿದಾಗ ಉಪ್ಪಿನಂಗಡಿ ವ್ಯಾಪ್ತಿಯ ಬಾಜಾರ ಪರಿಸರದ ವ್ಯಕ್ತಿಯೋರ್ವರ ಬ್ಲಡ್ ಗ್ರೂಪ್ ಹೊಂದಾಣಿಕೆಯಾಗುತ್ತೆ ಎಂದು ತಿಳಿದಾಗ ತಕ್ಷಣವೇ ಕರೆ ಮಾಡಿ ಒಬ್ಬ ಮಹಿಳೆಯ ಜೀವ ಉಳಿಸುವಂತೆ ಬೇಡಿಕೊಂಡರು. ನೀವು ಬಾಡಿಗೆಗೆ ಕಾರ್ ಮಾಡಿಯಾದರೂ ಮಂಗಳೂರು ತಲುಪಬೇಕುˌ ನಾನು ಕಲ್ಲಡ್ಕದಲ್ಲಿ ಕಾರು ಹತ್ತುತ್ತೇನೆ.ಕಾರು ಬಾಡಿಗೆಯನ್ನ ನಾನು ನೀಡುತ್ತೇನೆˌ ಎಂದೆಲ್ಲಾ ಹೇಳಿದರು. ಒಳ್ಳೆ ಮನುಷ್ಯ ಅವರ ಸ್ವಂತ ವಾಹನದಲ್ಲೇ ಯೇನೆಪೋಯಕ್ಕೆ ಹೊರಟೇ ಬಿಟ್ಟರು. ಬಾಜಾರದ ದಾನಿಯು ಯೆನೇಪೋಯ ಆಸ್ಪತ್ರೆಗೆ ತುಂಬಾ ದೂರ ಪ್ರಯಾಣ ಮಾಡಬೇಕೆಲ್ಲವೆ ಎಂಬ ಚಿಂತೆಯಲ್ಲಿ ಅವರು ವೆನ್ಲಾಕ್ ಆಸ್ಪತ್ರೆಯ ಡಾ.ಶರತ್ ಗೆ ಫೋನ್ ಮಾಡಿ ಏನಾದರೂ ಮಾಡುವಂತೆ ಬೇಡಿಕೊಂಡಾಗˌ “ಇಲ್ಲಿನ ನರ್ಸ್ ಒಬ್ಬರ ರಕ್ತ ಆ ಗ್ರೂಪ್ ನಲ್ಲಿದೆ. ಅವರು ನೀಡುವುದಾದರೆˌ ನಾನು ವ್ಯವಸ್ಥೆ ಮಾಡುವೆ ಎಂದು ಭರವಸೆ ನೀಡಿದರು. ಹಾಗೆ ವೆನ್ಲಾಕ್ ಆಸ್ಪತ್ರೆ ನರ್ಸ್ ಒಬ್ಬರ ರಕ್ತವನ್ನು ಪಡೆದು ಸಮಯಕ್ಕೆ ಮುಂಚಿತವಾಗಿ ರಕ್ತ ಯೆನೇಪೋಯ ತಲುಪುವಂತೆ ಮಾಡಿದ್ರು. ಅಷ್ಟರಲ್ಲಿ ಬಾಜಾರದ ವ್ಯಕ್ತಿ ಉಪ್ಪಿನಂಗಡಿ ತಲುಪಿದ್ರು. ರಕ್ತದ ವ್ಯವಸ್ಥೆ ಆದ ನಿಟ್ಟಿನಲ್ಲಿ ಅವರನ್ನು ಮರುಕಳಿಸಿದ್ರು. ನಿರ್ದಿಷ್ಟ ಸಮಯದೊಳಗೆ ರಕ್ತ ತಲುಪಿಸಿˌ ಒಬ್ಬ ಮಹಿಳೆಯ ಜೀವ ಉಳಿಸಲು ಅವರಿಗೆ ಸಾಧ್ಯವಾಯ್ತು….!!
ಅದೊಂದು ದಿನ ರಾತ್ರಿ 2 ಘಂಟೆಗ ರಕ್ತದ ಅವಶ್ಯಕತೆಯಲ್ಲಿ ಅವರಿಗೆ ಕರೆ ಬಂದಿತ್ತಂತೆ.ಗಂಡನ ಜೀವ ಉಳಿಸುವಂತೆ ಬೇಡಿಕೊಂಡಾಗˌ ರಾತ್ರೋ ರಾತ್ರಿ ಮೂರ್ನಾಲ್ಕು ಯುವಕರೊಂದಿಗೆ ಆಸ್ಪತ್ರೆಗೆ ತೆರಳಿಯೇ ಬಿಟ್ಟರು. ಸಮಯಕ್ಕೆ ಸರಿಯಾಗಿ ಅವರು ರಕ್ತದಾನ ಮಾಡಿದರು. ಜೊತೆಗಿದ್ದ ಫಯಾಝ್ ಎಂಬವರು ಆರ್ಥಿಕವಾಗಿಯೂ ಸಹಾಯ ಮಾಡಿ ಹಿಂತಿರುಗಿದರು. ಎರಡುವರೆ ವರ್ಷಗಳ ಬಳಿಕ ಆ ಮಹಿಳೆ ಕರೆ ಮಾಡಿˌ “ನಾನು ಶಿವಮೊಗ್ಗದ ರಿಪ್ಪನ್ ಪೇಟೆಯಿಂದ ಮಾತನಾಡುತ್ತೇದ್ದೇನೆ.ಅವತ್ತು ನೀವು ರಕ್ತ ನೀಡಿ ನನ್ನ ಗಂಡನ ಜೀವ ಉಳಿಸಿದ್ದೀರಾ.ಮಂಗಳೂರಲ್ಲಿ ನಮ್ಮವ್ರು ಯಾರೂ ಇಲ್ಲ.ನಿಮ್ ಎಸ್ಸೆಸ್ಸೆಫ್ ನನ್ ಗಂಡನ್ ಜೀವ ಉಳಿಸಿದೆ.ಈಗ ನನ್ ಗಂಡ ಆರೋಗ್ಯವಂತರಾಗಿದ್ದಾರೆ. ದೇವರ್ ನಿಮ್ಮನ್ ಚೆನ್ನಾಗಿಟ್ಟಿರಲಿ” ಎಂಬ ಮಾತುಗಳಾಗಿತ್ತು ಅವರೊಂದಿಗೆ ತಿಳಿಸಿದ್ದು.
ಅಷ್ಟಕ್ಕೂ ಅವರು ಯಾರು….? ಎಂಬ ಪ್ರಶ್ನೆ ನಿಮ್ಮಲ್ಲಿರಬಹುದು.
ಅವರ ಹೆಸರು ಕರೀಂ ಕದ್ಕಾರ್. ಸರಿಸುಮಾರು ನಲವತ್ತು ಬಾರಿ ರಕ್ತದಾನ ಮಾಡಿದ ಮಾದರಿ ಪುರುಷ. ಎಸ್ಸೆಸ್ಸೆಫ್ ದ.ಕ ಜಿಲ್ಲಾ ಬ್ಲಡ್ ಸೈಬೋ ಇದರ ಸಂಚಾಲಕ. ಎಸ್ಸೆಸ್ಸೆಫ್ ಎಂಬ ಸಂಘಟನೆಯಲ್ಲಿ ಶಾಖಾ ಮಟ್ಟದಿಂದ ಕಾರ್ಯಾಚರಿಸಿ ಇದೀಗ ಜಿಲ್ಲಾ ಬ್ಲಡ್ ಸೈಬೋ ಇದರ ಸಂಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಯಾವುದೇ ಸಂಧರ್ಭದಲ್ಲಿ ಕರೆಮಾಡಿದರೂˌ ತಕ್ಷಣ ಸ್ಪಂದಿಸುವ ಕರೀಂ ಕದ್ಕಾರ್ ರವರು ಎಸ್ಸೆಸ್ಸೆಫ್ ಜಿಲ್ಲಾ ಸಮಿತಿಯು ನೀಡಿದ ಹುದ್ದೆಯನ್ನ ಜವಾಬ್ಧಾರಿ ಯುತವಾಗಿಯೇ ನಿಭಾಯಿಸುತ್ತಿದ್ದಾರೆ.
ಸಿರಾಜುದ್ದೀನ್ ಸಖಾಫಿ ಕನ್ಯಾನರವರು ಜಿಲ್ಲಾಧ್ಯಕ್ಷರಾಗಿ ಕಾರ್ಯಾಚರಿಸುತ್ತಿದ್ದ ವೇಳೆಯಲ್ಲಿ ಪ್ರಾರಂಭಗೊಂಡ ಬ್ಲಡ್ ಸೈಬೋ 2 ವರ್ಷಗಳಲ್ಲಿನ 99 ಶಿಬಿರಗಳಲ್ಲಿ 7103 ಯೂನಿಟ್ ರಕ್ತಗಳನ್ನ ಸಂಗ್ರಹಿಸಿ ದಾನ ಮಾಡಿದೆ. ವೈದ್ಯಕೀಯ ವರದಿ ಪ್ರಕಾರ ಒಂದು ಯೂನಿಟ್ ರಕ್ತದಲ್ಲಿ ಮೂರು ಜೀವವನ್ನು ಉಳಿಸಬಹುದು. ಹಾಗಾದರೆ ಎಸ್ಸೆಸ್ಸೆಫ್ ಉಳಿಸಿದ ಜೀವಗಳ ಲೆಕ್ಕಚಾರವನ್ನೊಮ್ಮೆ ಹಾಕಿ ನೋಡಿ…!!
ಎಸ್ಸೆಸ್ಸೆಫ್ ದ.ಕ ಜಿಲ್ಲಾ ಸಮಿತಿಯ ಅಧೀನದಲ್ಲಿ 11 ಡಿವಿಷನ್ˌ 52 ಸೆಕ್ಟರ್ ಹಾಗೂ 459 ಶಾಖೆಗಳಲ್ಲಿ ಕಾರ್ಯಾಚರಿಸುತ್ತಿದೆ. ಜಿಲ್ಲಾಧ್ಯಕ್ಷರಾದ ಇಬ್ರಾಹೀಂ ಸಖಾಫಿ ಸೆರ್ಕಳ ಹಾಗೂ ಸಾಂಘಿಕ ನೇತಾರರ ಸರ್ವ ರೀತಿಯ ಸಹಕಾರ ಹಾಗೂ SYS ರಾಜ್ಯಾಧ್ಯಾಕ್ಷರಾಗಿರುವ ಜಿ.ಎಂ ಕಾಮಿಲ್ ಸಖಾಫಿ ಉಸ್ತಾದರ ಮಾರ್ಗದರ್ಶನವೇ ಈ ಸಾಮಾಜಿಕ ಸೇವೆಯ ಯಶಸ್ಸು ಎಂದು ಬ್ಲಡ್ ಸೈಬೋ ಸಂಚಾಲಕ ಕರೀಂ ಕದ್ಕಾರ್ ಸ್ಮರಿಸುತ್ತಾರೆ.
ಎಸ್ಸೆಸ್ಸೆಫ್ ಬಂಟ್ವಾಳ ಡಿವಿಷನ್ ಸಮಿತಿಯಲ್ಲಿನ ನನ್ನ ಸಾಂಘಿಕ ಮಿತ್ರ ಕರೀಂ ಕದ್ಕಾರ್ ರವರೊಂದಿಗೆ ಫಲಾನುಭವಿಗಳ ಪ್ರತಿಕ್ರಿಯೆಗಳ ಬಗ್ಗೆ ಮಾತುಕತೆ ನಡೆಸಿದಾಗˌ ಅವರಿಂದ ಸಿಕ್ಕ ಮಾಹಿತಿಯಿಂದ ಕೆಲವೊಂದನ್ನು ಅಕ್ಷರ ರೂಪಕ್ಕಿಳಿಸಿದ್ದೇನೆ ಅಷ್ಟೇ.
ಧಾರ್ಮಿಕ ಜಾಗೃತಿಗೆ ನೇತೃತ್ವ ನೀಡುವ ಎಸ್ಸೆಸ್ಸೆಫ್ ಗೆ ಸಾಮಾಜಿಕ ಜಾಗೃತಿಯೂ ಸಾಧ್ಯ ಎಂಬುವುದಕ್ಕೆ ಜಿಲ್ಲಾ ಸಮಿತಿಯ ಬ್ಲಡ್ ಸೈಬೋ ಸ್ಪಷ್ಟ ಉದಾಹರಣೆ.
ಮಂಗಳೂರಿನ ಐದು ಪ್ರತಿಷ್ಠಿತ ಆಸ್ಪತ್ರೆಗಳ ಸಹಭಾಗಿತ್ವದಲ್ಲಿ ಎಸ್ಸೆಸ್ಸೆಫ್ ಜಿಲ್ಲಾ ಬ್ಲಡ್ ಸೈಬೋ ಇದರ 100 ನೇ ರಕ್ತದಾನ ಶಿಬಿರ ಮಂಗಳೂರಿನ ಪುರಭವನದಲ್ಲಿ ನಡೆಯಬೇಕಾದರೆˌ ರಕ್ತ ದಾನ ಮಾಡುವ ಮೂಲಕ ಮಾದರಿಯಾಗೋಣ…..!!!
ಜಾತಿˌಧರ್ಮˌ ಸಾಂಘಿಕ ಭಿನ್ನತೆ ಯಾವುದೇ ವ್ಯತ್ಯಾಸವಿಲ್ಲದೇ ಜಿಲ್ಲಾ ಸಮಿತಿಯು ಮಾಡುತ್ತಿರುವ ರಕ್ತದಾನವೆಂಬ ಶ್ಲಾಘನೀಯ ಸೇವೆಯನ್ನ ಅಭಿನಂದಿಸೋಣ..!!
✍🏻ಎಂ.ಕೆ ಸಿನಾನ್ ಸಖಾಫಿ ಅಜಿಲಮೊಗರು
(ಅಧ್ಯಕ್ಷರು ಎಸ್ಸೆಸ್ಸೆಫ್ ಬಂಟ್ವಾಳ ಸೆಕ್ಟರ್)
Masha alllah