ಕೊಡಗನ್ನು ಮುಳುಗಿಸಿದ ಭೀಕರ ಪ್ರವಾಹಕ್ಕೆ ಮನೆ ಸೇರಿದಂತೆ ಸರ್ವಸ್ವವನ್ನು ಕಳೆದುಕೊಂಡ ಕೆಸಿಎಫ್ ದುಬೈ ನಾರ್ತ್ ಝೋನ್ ಇಹ್ಸಾನ್ ವಿಭಾಗದ ಕಾರ್ಯದರ್ಶಿ ಇರ್ಷಾದ್ ಕೊಂಡಂಗೇರಿ ರವರ ಮನದಾಳದ ಮಾತು
ಮಳೆ ರಾಯನ ಆರ್ಭಟಕ್ಕೆ ತನ್ನ ಆಸ್ತಿಪಾಸ್ತಿ ಎಲ್ಲವನ್ನು ಕಳೆದುಕೊಂಡು ವಾಸಿಸುವ ಮನೆ ಕೂಡ ನೀರಿನಲ್ಲಿ ಕೊಚ್ಚಿ ಹೋಗಿ ದುಖದ ಕಣ್ಣೀರಿಡುತಿದ್ದ ನನ್ನ ತಂದೆ ತಾಯಿ.
ಆದರೆ ಇವತ್ತು ತನ್ನ ಮಕ್ಕಳು ಕಾರ್ಯಾಚರಿಸುವ ಸಂಘಟನೆಯ ಚಿಕ್ಕ ಕಾರ್ಯಕರ್ತರಿಂದ ಹಿಡಿದು ರಾಷ್ಟ್ರೀಯ ಅಂತಾರಾಷ್ಟ್ರೀಯ ನಾಯಕರುಗಳು ಕೂಡ ತನ್ನ ಕೊಚ್ಚಿ ಹೋದ ಮನೆಗೆ ಬಂದು ನನ್ನ ತಂದೆ ತಾಯಿಯ ರಿಗೆ ಆಶ್ವಾಸ ನೀಡಿ ದುಆ ನಡೆಸಿ ಸಾಂತ್ವನ ಹೇಳಿದಾಗ ನಿನ್ನೆ ದುಖದ ಕಣ್ಣೀರಿಡುತಿದ್ದ ನನ್ನ ತಂದೆ ತಾಯಿ ಇವತ್ತು ನಾನು ಫೋನ್ ನಲ್ಲಿ ಮಾತಾಡುವಾಗ ಅವರು ನನಗೆ ಹೇಳಿದ ಮಾತು ನಮ್ಮ ಮನೆ ಬಿದ್ದಿದ್ದು ಅಲ್ಲಾಹುವಿನ ಅನುಗ್ರಹವಾಗಿದೆ ಈ ಮನೆ ಇವತ್ತು ನೀರಿನಲ್ಲಿ ಕೊಚ್ಚಿ ಹೋದ್ದರಿಂದ ಹಲವಾರು ಉಲಮಾಗಳು ಆಲಿಮ್ ಗಳು ನಮ್ಮ ಬಿದ್ದು ಹೋದ ಮನೆಗೆ ಬಂದು ದುಆ ನಡೆಸಿದರು ಇದನ್ನು ಹೇಳುವಾಗ ನನ್ನ ತಂದೆ ತಾಯಿ ಇವತ್ತು ಸಂತೋಷದಿಂದ ಕಣ್ಣೀರಿಡುತಿದ್ದರು . ಅವರ ದುಆ ಒಂದೇ ಆಗಿತ್ತು ನನ್ನ ಸಂಪತ್ತು.
ಯಾ ಅಲ್ಲಾ ಈ ನಮ್ಮ ನಾಯಕರುಗಳಿಗೆ ಆಲಿಂಗಳಿಗೆ ನೀನು ಆಫೀಯತನ್ನು ನೀಡು ಯಾ ಅಲ್ಲಾಹ್ …,
ಈ ಎಲ್ಲಾ ಸೌಭಾಗ್ಯ ನನಗೆ ಸಿಕ್ಕಿದ್ದು ನಾನು ನನ್ನ ಸಂಘಟನೆಯ ಚಿಕ್ಕ ಒಂದು ಕಾರ್ಯಕರ್ತ ಅನ್ನುವ ಕಾರಣಕ್ಕಾಗಿದೆ ಅಲ್ ಹಂದುಲಿಲ್ಲಾಹ್ .