janadhvani

Kannada Online News Paper

ವಾಹನ ಮಾರಾಟದಲ್ಲಿ ಭಾರೀ ಕುಸಿತ- ಜಿಎಸ್‌ಟಿ ಪ್ರಮುಖ ಕಾರಣ

ನವದೆಹಲಿ: ದೇಶದಲ್ಲಿ ವಾಹನ ಮಾರಾಟವು ಜುಲೈ ತಿಂಗಳಲ್ಲಿ ಭಾರಿ ಕುಸಿತ ಕಂಡಿದೆ. ಇದು 19 ವರ್ಷದಲ್ಲೇ ಅತ್ಯಧಿಕ ಕುಸಿತ. ವಾಹನ ತಯಾರಿಕೆ ಕಂಪನಿಗಳು ತಯಾರಿಕೆಯನ್ನು ಭಾರಿ ಪ್ರಮಾಣದಲ್ಲಿ ಕಡಿತ ಮಾಡಿವೆ ಎಂದು ಭಾರತೀಯ ವಾಹನ ತಯಾರಕರ ಸೊಸೈಟಿ (ಎಸ್‌ಐಎಎಂ) ಹೇಳಿದೆ.

22.45 ಲಕ್ಷ ವಾಹನಗಳು 2018 ರಲ್ಲಿ ಮಾರಾಟವಾದರೆ , 2019 ಜುಲೈ ನಲ್ಲಿ ಮಾರಾಟ ಪ್ರಮಾಣವು 18.25 ಲಕ್ಷಕ್ಕೆ ಇಳಿದಿದೆ.ಅಂದರೆ 18.71 ಲಕ್ಷ ವಾಹನಗಳ ಮಾರಾಟದಲ್ಲಿ ಕುಸಿತ ಕಂಡಿದೆ.

ಉದ್ಯೋಗ ನಷ್ಟ: ವಾಹನ ಮಾರಾಟ ಕ್ಷೇತ್ರದಲ್ಲಿ 2 ಲಕ್ಷ ಉದ್ಯೋಗ ನಷ್ಟ ಹೊಂದಿದರೆ, ವಾಹನಗಳ ಬಿಡಿಬಾಗಗಳ ಮಾರಾಟ ವಲಯದಲ್ಲಿ 10 ಲಕ್ಷ ಉದ್ಯೋಗ ನಷ್ಟ ಉಂಟಾಗಿದೆ. ಇನ್ನೂ ವಾಹನ ತಯಾರಿಕಾ ಕ್ಷೇತ್ರದಲ್ಲಿ 15 ಸಾವಿರ ಉದ್ಯೋಗ ನಷ್ಟ ಕಂಡಿದೆ.

ವಾಹನ ತಯಾರಕರ ಬೇಡಿಕೆಗಳು:

  • ವಾಹನಗಳ ಮೇಲಿನ ಜಿಎಸ್‌ಟಿ ಇಳಿಸಬೇಕು
  • ಹಳೆಯ ವಾಹನಗಳ ವಿಲೇವಾರಿ (ಗುಜರಿ) ಯೋಜನೆ ಜಾರಿ
  • ವಾಹನಗಳ ಖರೀದಿಗೆ ಸಾಲ ನೀಡುತ್ತಿರುವುದು ಬ್ಯಾಂಕೇತರ ಹಣಕಾಸು ಸಂಸ್ಥೆಗಳೇ ಆಗಿವೆ. ಈ ಕ್ಷೇತ್ರವು ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆ. ಈ ಬಿಕ್ಕಟ್ಟನ್ನು ಪರಿಹರಿಸಬೇಕು

error: Content is protected !! Not allowed copy content from janadhvani.com