janadhvani

Kannada Online News Paper

200 ಕ್ಕಿಂತಲೂ ಹೆಚ್ಚು ಬಂಧಿತರನ್ನು ಮೋಚಿಸಿದ ಒಮಾನ್ ಸುಲ್ತಾನ್

ಮಸ್ಕತ್: ಬಕ್ರೀದ್ ಪ್ರಯುಕ್ತ ಇನ್ನೂರಕ್ಕಿಂತಲೂ ಹೆಚ್ಚಿನ ಬಂಧಿತರಿಗೆ ಆಡಳಿತಾಧಿಕಾರಿ ಸುಲ್ತಾನ್ ಖಾಬೂಸ್ ಬಿನ್ ಸೈದ್ ಕ್ಷಮಾಪಣೆ ನೀಡಿದ್ದು, ಆ ಪೈಕಿ ಅರ್ಧದಷ್ಟು ಅನಿವಾಸಿಗಳಾಗಿದ್ದಾರೆ ಎಂದು ರಾಯಲ್ ಒಮಾನ್ ಪೊಲೀಸರು ತಿಳಿಸಿದ್ದಾರೆ.

ಪ್ರೀತಿ ಪಾತ್ರರಿಲ್ಲದೆ ಬಕ್ರೀದ್ ಆಚರಣೆಯು ಕಳೆಗುಂದದಿರಲಿ ಎನ್ನುವ ಉದ್ದೇಶದಿಂದ ಈ ಕ್ರಮ ಎನ್ನಲಾಗಿದ್ದು, ವಿವಿಧ ಅಪರಾಧಗಳಿಗಾಗಿ ಬಂಧಿತರಾದವರನ್ನು ಅವರ ಬಂಧುಗಳ ಅವಸ್ಥೆಯನ್ನು ಪರಿಗಣಿಸಿ ಸೇನಾ ಸುಪ್ರಿಂ ಕಮಾಂಡರರೂ ಆದ ಸುಲ್ತಾನ್ ಬಂಧ ಮುಕ್ತಗೊಳಿಸಿದ್ದಾರೆ. ಒಟ್ಟು 202 ಅಪರಾಧಿಗಳನ್ನು ಬಂಧ ಮುಕ್ತಗೊಳಿಸಲಾಗಿದ್ದು, ಆ ಪೈಕಿ 89 ಮಂದಿ ಅನಿವಾಸಿಗಳು ಎಂದು ಬಲ್ಲ ಮೂಲಗಳು ತಿಳಿಸಿವೆ.

ಜನಧ್ವನಿಗೆ ವಾಟ್ಸಾಪ್ ಮಾಡಿ whatsapp
error: Content is protected !!