janadhvani

Kannada Online News Paper

ಜಲ ಪ್ರಳಯ: ಮದೀನಾದಲ್ಲಿ KCF-HVC ಕಾರ್ಯಕರ್ತರಿಂದ ವಿಶೇಷ ಪ್ರಾರ್ಥನೆ

ಮದೀನಾ ಮುನವ್ವರ: ಹಜ್ಜಾಜಿಗಳ ಸೇವೆಗಾಗಿ ಮಿನಾ (ಮಕ್ಕಾ) ಕಡೆ ಹೊರಡಲು ಸಿದ್ಧರಾದ ಕೆಸಿಎಫ್‌‌ ಮದೀನಾ ಮುನವ್ವರ ಝೋನಲ್‌ನ ಸ್ವಯಂ ಸೇವಕರ ಸಮ್ಮುಖದಲ್ಲಿ ಕರ್ನಾಟಕ ಮತ್ತು ಕೇರಳದ ಹಲವು ಕಡೆಗಳಲ್ಲಿ ತಲೆದೋರಿರುವ ಜಲ ಪ್ರಳಯದ ನಿಯಂತ್ರಣಕ್ಕಾಗಿ ವಿಶೇಷ ಪ್ರಾರ್ಥನೆಯನ್ನು ಕೆ.ಸಿ.ಎಫ್ ಮದೀನಾ ಸೆಕ್ಟರ್ ಅದ್ಯಕ್ಷರಾದ ಅಶ್ರಫ್ ಸಖಾಫಿ ನೂಜಿ ಅವರ ನೇತ್ರತ್ವದಲ್ಲಿ ಮದೀನಾದ ಕೆ.ಸಿ.ಎಫ್ ಭವನದಲ್ಲಿ ನಡೆಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಊರಿನ ಹಲವಾರು ಗ್ರಾಮ, ನಗರಗಳು ಪ್ರಕೃತಿ ವಿಕೋಪಕ್ಕೆ ತುತ್ತಾಗಿ ನಾಶವಾಗುತ್ತಿದೆ. ಇಂತಹ ಸಂದರ್ಭದಲ್ಲಿ ನಮ್ಮ ರಕ್ಷಣೆಗಾಗಿ ಅಲ್ಲಾಹನಲ್ಲಿ ಪಾಪಮೋಚನೆ ನಡೆಸಿ ದುವಾ ನಡೆಸುವ ಮೂಲಕ ರಕ್ಷೆ ಹೊಂದಬಹುದು ಎಂದು ಅವರು ಹೇಳಿದರು.

ಕೆ.ಸಿ.ಎಫ್ HVC ಯ ಹಲವಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

📝ಕೆ.ಸಿ‌.ಎಫ್ ಮದೀನಾ ಮುನವ್ವರ ಸೆಕ್ಟರ್