janadhvani

Kannada Online News Paper

ಹೊಸ ಸಾಲಿಕ್ ಟೋಲ್ ಗೇಟ್‌ಗಳು ಅಬುಧಾಬಿಯಲ್ಲಿ ಮಾತ್ರ

ಅಬುಧಾಬಿ: ಸಾಲಿಕ್ ಟೋಲ್ ಗೇಟ್‌ಗಳು ಅಬುಧಾಬಿಯಲ್ಲಿ ಮಾತ್ರ ಜಾರಿಗೆ ಬರಲಿದೆ ಎಂದು ಸಾರಿಗೆ ಇಲಾಖೆ ವ್ಯಕ್ತಪಡಿಸಿದೆ. ಅಲ್ ಐನ್, ಅಲ್ ದಫ್ರಾ ಮುಂತಾದೆಡೆಗಳಲ್ಲೂ ಸಾಲಿಕ್ ಜಾರಿಗೆ ಬರಲಿದೆ ಎನ್ನುವ ರೀತಿಯಲ್ಲಿ ಪ್ರಚರಿಸಲಾಗುತ್ತಿದ್ದು, ಅದರಲ್ಲಿ‌ ಯಾವುದೇ ಹುರುಳಿಲ್ಲ ಎಂದು ಖಾತೆ ತಿಳಿಸಿದೆ.

ಆ ರೀತಿ ಟೋಲ್ ಏರ್ಪಡಿಸುವ ದಟ್ಟಣೆ ಅಲ್ಲಿ ಕಂಡು ಬಂದಿಲ್ಲ. ಆ ಕಾರಣಕ್ಕಾಗಿಯೇ ಅಲ್ಲಿ ಸಾಲಿಕ್ ಟೋಲ್ ಜಾರಿಗೆ ತರಲಾಗಿಲ್ಲ ಎಂದು ಸಂಬಧಿಸಿದ ವಿಭಾಗದ ಆಕ್ಟಿಂಗ್ ಎಕ್ಸಿಕ್ಯುಟಿವ್ ಡೈರೆಕ್ಟರ್ ಇಬ್ರಾಹಿಂ ಸರ್ಹಾನ್ ಅಲ್ ಹಮೌದಿ ತಿಳಿಸಿದ್ದಾರೆ.

ಅಬುಧಾಬಿ ಟೋಲ್ ಜಾರಿಗೆ ಬಂದಿರುವ ಕಾರಣ ಅಲ್ಲಿನ ಬೀದಿಗಳಿಂದ ನಾಲ್ಕು ಸಾವಿರ ವಾಹನಗಳನ್ನು ತೆರವು ಗೊಳಿಸಲು ಸಾಧ್ಯವಾಗಲಿದೆ. ಇಂತಹ ಪರಿಸ್ಥಿತಿ ಈಗ ಅಲ್ ಐನ್ ಅಥವಾ ದಫ್ರಾದಲ್ಲೋ ಇಲ್ಲ. ಅವಶ್ಯ ಎಣಿಸಿದರೆ ಅಲ್ಲೂ ಟೋಲ್ ಏರ್ಪಡಿಸಲಾಗುವುದು ಎಂದವರು ತಿಳಿಸಿದ್ದಾರೆ.