ಮಲ್ಜಅ್ ಮಾಸಿಕ ದ್ಸಿಕ್ರ್ ಮಜ್ಲಿಸ್ ಹಾಗೂ ರಿಲೀಫ್ ವಿತರಣೆ

ಉಜಿರೆ: ಮಲ್ಜಅ್ ದಅ್ ವಾ ಮತ್ತು ರಿಲೀಫ್ ಸೆಂಟರ್ ಕಾಶಿಬೆಟ್ಟು ,ಉಜಿರೆ ಮಾಸಿಕ ದ್ಸಿಕ್ರ್ ಮಜ್ಲಿಸ್ ಹಾಗೂ ರಿಲೀಫ್ ವಿತರಣಾ ಕಾರ್ಯಕ್ರಮವು ದಿನಾಂಕ 18 ಗುರುವಾರದಂದು ಮಗ್ರಿಬ್ ನಮಾಝಿನ‌ ಬಳಿಕ ಸಯ್ಯಿದ್ ಆಲವಿ ಜಲಾಲುದ್ದೀನ್ ಮದನಿ ಅಲ್ ಹಾದಿ ತಂಙಳ್ ಉಜಿರೆ ಇವರ ನೇತೃತ್ವದಲ್ಲಿ ಮಲ್ಜಅ್ ಕ್ಯಾಂಪಸ್‌ನಲ್ಲಿ ನಡೆಯಿತು.

ಈ ಕಾರ್ಯಕ್ರಮದಲ್ಲಿ ಸುಮಾರು 13 ಬಗೆಯ ರಿಲೀಫ್ ಗಳನ್ನು ವಿತರಿಸಲಾಯಿತು ಹಾಗೂ ನಮ್ಮನ್ನಗಲಿದ ಸುನ್ನಿ ನಾಯಕರಿಗೆ ಮತ್ತು ಕಾರ್ಯಕರ್ತರಿಗೆ ತಹ್ಲೀಲ್ ಸಮರ್ಪಣಾ ಕಾರ್ಯಕ್ರಮವು ನಡೆಯಿತು.

ಈ ಕಾರ್ಯಕ್ರಮದಲ್ಲಿ ಸಯ್ಯದ್ ಸಾದಾತ್ ತಂಙಳ್ ಕರ್ವೇಲ್,ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮದಕ, ಹಾಜಿ ಅಬ್ದುಲ್ ಹಮೀದ್ ಕೊಡುಂಗೈ ಮುಹಿಯುದ್ದೀನ್ ಜುಮಾ ಮಸ್ಜಿದ್ ಉಜಿರೆ ಇದರ ಕೋಶಾಧಿಕಾರಿಯಾದ ಇಬ್ರಾಹಿಂ,ಇಸ್ಮಾಯಿಲ್ ಮಾಸ್ಟರ್ ಮಂಗಳಪದವು, ಅಶ್ರಫ್ ಸಖಾಫಿ, ಅಲ್-ಅಮೀನ್ ಯಂಗ್’ಮೆನ್ಸ್ ಉಜಿರೆ ಅಧ್ಯಕ್ಷರಾದ ಸಿದ್ದೀಕ್ ವಾಫೀರ್, SSF ಉಜಿರೆ ಸೆಕ್ಟರ್ ಅಧ್ಯಕ್ಷರಾದ ಇಕ್ಬಾಲ್ ಮಾಚಾರು, ಖಲೀಲ್ ಸಅದಿ, ಪತ್ರಕರ್ತ ಅಶ್ರಫ್ ಅಲಿಕುಂಞಿ, ಯುಎಇ ಪ್ರತಿನಿಧಿಗಳಾದ ಇಬ್ರಾಹಿಂ ಬ್ರೈಟ್ ಮಾರ್ಬಲ್, ಅಬ್ದುಲ್ ಕರೀಂ ಮುಸ್ಲಿಯಾರ್, ಇಕ್ಬಾಲ್ ಕಾಜೂರು,ಮುಹಮ್ಮದ್ ಶರೀಫ್ ಸಾಲೆತ್ತೂರು, ಖಲಂದರ್ ಕಬಕ ಬಹರೈನ್ ಪ್ರತಿನಿಧಿಗಳಾದ ಜಮಾಲುದ್ದೀನ್ ವಿಟ್ಲ,ಖಲಂದರ್ ಮುಸ್ಲಿಯಾರ್, ಮುಹಮ್ಮದ್ ಹನೀಫ್ ಕಿನ್ಯ,ಫಝಲ್ ಸುರತ್ಕಲ್, ಮುಹಮ್ಮದ್ ಅಶ್ರಫ್ ಕಿನ್ಯ, ಮುಹಮ್ಮದ್ ಅಲಿ ಮುಸ್ಲಿಯಾರ್, ಸೌದಿಅರೇಬಿಯಾ ಪ್ರತಿನಿಧಿಗಳಾದ
ಮುಹಮ್ಮದ್ ಅಶ್ರಫ್ ಜಯಪುರ ಉಮರ್ ತಲಕ್ಕಿ, ಶಂಸುದ್ದೀನ್ ಪುತ್ರಬೈಲ್,ಅಬ್ಬೋನು ಮದ್ದಡ್ಕ, ಅಬೂಬಕ್ಕರ್ ಮುಗುಲಿ, ಮುಹಮ್ಮದ್ ರಫಿ ಬೆಳ್ತಂಗಡಿ ಮೊದಲಾದವರು ಉಪಸ್ಥಿತರಿದ್ದರು.

ಸಂಸ್ಥೆಯ ಜನರಲ್ ಮ್ಯಾನೇಜರ್ ಮೆಹಬೂಬ್ ರಹ್ಮಾನ್ ಸಖಾಫಿ ಕಿನ್ಯಾ ಸ್ವಾಗತಿಸಿದರು, ಕೊನೆಯಲ್ಲಿ ಸಂಪರ್ಕ ಅಧಿಕಾರಿ ಶರೀಫ್ ಬೆರ್ಕಳ ವಂದಿಸಿದರು.

ವರದಿ: ಎಂ.ಎಂ.ಉಜಿರೆ

Leave a Reply

Your email address will not be published. Required fields are marked *

error: Content is protected !!