ರಿಯಾದ್: ಸೌದಿ ಅರೇಬಿಯಾದಲ್ಲಿ ನಮಾಝ್ ವೇಳೆ ವ್ಯಾಪಾರ ಕೇಂದ್ರಗಳನ್ನು ತೆರೆದು ಕಾರ್ಯಾಚರಿಸಲು ಅನುಮತಿ ನೀಡಲಾಗಿಲ್ಲ ಎಂದು ಸಂಬಂಧಿಸಿದ ಸಚಿವಾಲಯ ವ್ಯಕ್ತಪಡಿಸಿದೆ.
ದೇಶದಲ್ಲಿನ ವ್ಯಾಪಾರ ಕೇಂದ್ರಗಳು 24 ಗಂಟೆಯೂ ಕಾರ್ಯಾಚರಿಸಲು ಅನುಮತಿ ನೀಡಿರುವುದರ ಭಾಗವಾಗಿ ನಮಾಝ್ ಸಮಯದಲ್ಲೂ ಬಂದ್ ಮಾಡಬೇಕಿಲ್ಲ ಎನ್ನುವ ವದಂತಿಯನ್ನು ಹರಡಲಾಗಿತ್ತು.
ನಮಾಝ್ ವೇಳೆ ಬಂದ್ ಮಾಡುವುದು ಶರತ್ತುಗಳ ಅಧಾರಿತವಾಗಿದ್ದು, ಸಚಿವಾಲಯದ ಆದೇಶಕ್ಕೂ ಆ ಶರತ್ತುಗಳಿಗೂ ಸಂಬಂಧವಿಲ್ಲ ಎಂದು ಮುನಿಸಿಪಲ್, ವಿತ್ತ ಸಚಿವಾಲಯದ ಅಂಡರ್ ಸೆಕ್ರೆಟರಿ ಇಂಜಿನಿಯರ್ ಖಾಲಿದ್ ಅಲ್ ದುಗೈಥಿರ್ ತಿಳಿಸಿದ್ದಾರೆ.






