ಕುವೈತ್: ವಿದೇಶೀಯರ ಸಿವಿಲ್ ‘ಐಡಿ’ ಸೇವೆಗಳಿಗಾಗಿ ಪ್ರತ್ಯೇಕ ಸೇವಾ ಕೇಂದ್ರಗಳು

ಕುವೈತ್ ಸಿಟಿ: ವಿದೇಶೀಯರ ಸಿವಿಲ್ ಐಡಿ ಕಾರ್ಡ್‌ಗಳಿಗೆ ಸಂಬಂಧಿಸಿದ ಸೇವೆಗಳಿಗೆ ಅತ್ಯಾಧುನಿಕ ತಂತ್ರಜ್ಞಾನವನ್ನು ಏರ್ಪಡಿಸಲಾಗುತ್ತಿದೆ. ಎಲ್ಲಾ ಗವರ್ನರೇಟ್‌ಗಳಲ್ಲೂ ವಿದೇಶೀಯರಿಗಾಗಿ ಮಾತ್ರ ಕಾರ್ಯಾಚರಿಸುವ ಪ್ರತ್ಯೇಕ ಸೇವಾ ಕೇಂದ್ರಗಳನ್ನು ಸ್ಥಾಪಿಸಲು ಸಿವಿಲ್ ಇನ್ಫಾರ್ಮೇಶನ್ ಅಥಾರಿಟಿ ತೀರ್ಮಾನ ಕೈಗೊಂಡಿದೆ. ಈ ಕುರಿತ ನಿರ್ದೇಶನವನ್ನು ಅದು ವಿತ್ತ ಸಚಿವಾಲಯಕ್ಕೆ ಹಸ್ತಾಂತರ ಮಾಡಿದೆ.

ದೇಶದಲ್ಲಿರುವ 33 ಲಕ್ಷ ವಿದೇಶೀಯರ ವಿವರಗಳನ್ನು ದಾಖಲಿಸಲು ಮತ್ತು ಸಿವಿಲ್ ಐಡಿ ವಿತರಿಸಲು ಪ್ರಸಕ್ತ ಚಲಾವಣೆಯಲ್ಲಿರುವ ಸೌಕರ್ಯ ಪರ್ಯಾಪ್ತವಲ್ಲದ ಹಿನ್ನೆಲೆಯಲ್ಲಿ ಈ ನಡೆ ಎನ್ನಲಾಗಿದೆ. ಸ್ವದೇಶೀಯರ ಸೇವೆಗಾಗಿ ಸ್ಥಾಪಿಸಲಾದ ಸೇವಾ ಕೇಂದ್ರಗಳ ಮಾದರಿಯಲ್ಲಿ ಈ ವಲಯದಲ್ಲಿ ಕಾರ್ಯಾಚರಿಸಲು ಪ್ರಾಪ್ತರಾದ ಖಾಸಗಿ ಸ್ಥಾಪನೆಗಳನ್ನು ಹೊರ ಕೆಲಸಗಳಿಗಾಗಿ ಒಪ್ಪಂದದ ಆಧಾರದಲ್ಲಿ ನೇಮಕಗೊಳಿಸಲಾಗುವುದು.

ಸಿವಿಲ್ ಇನ್ಫಾರ್ಮೇಶನ್ ಅಥಾರಿಟಿಯ ಕಂಪ್ಯೂಟರ್ ಮೂಲಕ ಈ ಕೇಂದ್ರಗಳನ್ನು ಬಂಧಿಸಲಾಗುವುದು. ವ್ಯಕ್ತಿಗಳ ಖಾಸಗಿ ವಿವರಗಳನ್ನು ಕಾಪಾಡುವ ರೀತಿಯಲ್ಲಿ ಇದು ಕಾರ್ಯಾಚರಿಸಲಿದೆ. ಅದೇ ಸಮಯ ಸಿವಿಲ್ ಐಡಿ ಕಾರ್ಡ್‌ಗಳಿಗೆ ಸಾಧಾರಣವಾಗಿ ಪಡೆಯಲಾಗುತ್ತಿದ್ದ ಶುಲ್ಕದ ಹೊರತಾಗಿ ಹೆಚ್ಚುವರಿ ಸೇವಾ ಶುಲ್ಕ ಪಡೆಯಲಾಗುವುದು.

Leave a Reply

Your email address will not be published. Required fields are marked *

error: Content is protected !!