janadhvani

Kannada Online News Paper

75 ಶೇಕಡಾ ದರ ಕಡಿತ -ಶಾರ್ಜಾ ಸಮ್ಮರ್ ಪ್ರೊಮೋಷನ್‌ ಆರಂಭ

ಶಾರ್ಜಾ: ಗ್ರಾಹಕರಿಗೆ 75 ಶೇಕಡಾ ದರ ಕಡಿತ ನೀಡಲಾಗುವ ಶಾರ್ಜಾ ಸಮ್ಮರ್ ಪ್ರೊಮೋಷನ್‌ ರವಿವಾರ ಆರಂಭಗೊಂಡಿದೆ. ಶಾರ್ಜಾ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ ಮತ್ತು ಶಾರ್ಜಾ ಕಾಮರ್ಸ್ ಆ್ಯಂಡ್ ಟೂರಿಸಂ ಡೆವಲಪ್ಮೆಂಟ್ ಅಥಾರಿಟಿ (ಎಸ್‌ಸಿಸಿಎ) ಸಂಯುಕ್ತವಾಗಿ 49 ದಿನಗಳ ಈ ವ್ಯಾಪಾರ ಮೇಳವನ್ನು ಸಂಘಟಿಸಲಿದೆ.

ಟೂರಿಸಂ, ಶಾಪಿಂಗ್ ವಲಯದಲ್ಲಿ ಅತ್ಯುತ್ತಮ ಅನುಭವವನ್ನು ನೀಡಲು ಮತ್ತು ಶಾರ್ಜಾ ವನ್ನು ಶಾಪಿಂಗ್ ಕೇಂದ್ರವಾಗಿ ಮಾರ್ಪಡಿಸಲು ಸಮ್ಮರ್ ಪ್ರೊಮೋಷನ್ಸ್ ಸಂಘಟಿಸಲಾಗುತ್ತಿದೆ ಎಂದು ಕಾಮರ್ಸ್ ಆ್ಯಂಡ್ ಟೂರೀಸಂ ಡೆವಲಪ್ಮೆಂಟ್ ಅಥಾರಿಟಿ ಡೈರೆಕ್ಟರ್ ಜನರಲ್ ಮುಹಮ್ಮದ್ ಅಹ್ಮದ್ ಅಮೀನ್ ಅಲ್ ಅವಾದಿ ತಿಳಿಸಿದ್ದಾರೆ.

ಟೂರಿಸಂ, ವ್ಯಾಪಾರ, ಹೋಟೆಲ್ ವಲಯದಲ್ಲಿ ಶಾರ್ಜಾಗೆ ಉತ್ತೇಜನ ನೀಡಲು ವ್ಯಾಪಾರ ಮೇಳ ಸಹಾಯಕವಾಗಲಿದೆ ಎಂದು ಅಂದಾಜಿಸಲಾಗಿದೆ. ಸೋಶಿಯಲ್ ಮೀಡಿಯಾ ಮುಖಾಂತರ ಹಲವು ಸ್ಪರ್ಧೆಗಳು, ಬಹುಮಾನಗಳನ್ನು ಮೇಳದ ಭಾಗವಾಗಿ ಘೋಷಿಸಲಾಗಿದೆ.