ಸ್ಥಳೀಯರಿಗೆ ಶುಭ ಸುದ್ದಿ- ಮತ್ತೊಮ್ಮೆ ಹಜ್ ನಿರ್ವಹಿಸಲು ಐದು ವರ್ಷ ಕಾಯಬೇಕೆಂದಿಲ್ಲ

ರಿಯಾದ್: ಸ್ವದೇಶೀಯರು ಹಜ್ ನಿರ್ವಹಿಸಲು ಐದು ವರ್ಷ ಪೂರೈಸಬೇಕು ಎನ್ನುವ ನಿಯಮದಲ್ಲಿ ಕೆಲವು ನಿಬಂಧನೆಗಳೊಂದಿಗೆ ವಿನಾಯಿತಿ ಅನುಮತಿಸಲಾಗಿದೆ.

ಒಮ್ಮೆ ಹಜ್ ನಿರ್ಹಿಸಿರುವವರು ಮತ್ತೊಮ್ಮೆ ಹಜ್ ನಿರ್ವಹಿಸಲು ಐದು ವರ್ಷಗಳನ್ನು ಪೂರೈಸಬೇಕು ಎಂಬುದು ಪ್ರಸ್ತುತ ಜಾರಿಯಲ್ಲಿರುವ ನಿಬಂಧನೆಯಾಗಿದೆ. ಹೊಸ ವಿನಾಯಿತಿಯು ಸ್ವದೇಶೀಗಳು ಮತ್ತು ವಿದೇಶೀಯರಿಗೂ ಆಶಾದಾಯಕವಾಗಿದೆ.

ವಿವಿಧ ವಿಭಾಗಗಳಿಗೆ ಒಳಪಟ್ಟವರಿಗೆ ವಿನಾಯಿತಿ ನೀಡಲಿರುವುದಾಗಿ ಹಜ್-ಉಮ್ರಾ ಸಚಿವಾಲಯ ತಿಳಿಸಿದೆ. ಆಶ್ರಿತರಾಗಿರುವ ಹೆಂಡತಿ, ಮಕ್ಕಳು, ಸಹೋದರಿ, ತಾಯಿ ಮುಂತಾದವರಿಗೆ ಮಹರಮಾಗಿ ಹಜ್ ನಿರ್ವಹಿಸಲು ಐದು ವರ್ಷಗಳನ್ನು ಪೂರೈಸಬೇಕಾಗಿಲ್ಲ. ಅಲ್ಲದೆ ಮರಣಹೊಂದಿದ ಮಕ್ಕಳು, ಮಾತಾಪಿತರು, ಹೆಂಡತಿ, ಸಹೋದರಿ, ಸಹೋದರರಿಗಾಗಿ ಹಜ್ ನಿರವಹಣೆ ಮಾಡುವುದಕ್ಕೂ ವಿನಾಯಿತಿ ದೊರೆಯಲಿದೆ.

ಇವರಿಗೆ ಇ-ಟ್ರಾಕ್ ಮೂಲಕ ವಿನಾಯಿತಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಇತರ ಕಾರಣಗಳ ಮೂಲಕ ವಿನಾಯಿತಿ ಪಡೆಯಲಿಚ್ಚಿಸುವ ಸ್ವದೇಶೀಯರು ಸಿವಿಲ್ ಅಫೇರ್ಸ್ ವಿಭಾಗ ಮತ್ತು ವಿದೇಶೀಯರು ಜವಾಝಾತ್ ಡೈರೆಕ್ಟರೇಟನ್ನು ಮುಖತ ಸಂಪರ್ಕಿಸಿ ವಿನಾಯಿತಿ ಪಡೆದ ನಂತರ ಇ-ಟ್ರಾಕ್ ಮುಖಾಂತರ ನೋಂದಣಿ ಮಾಡಬೇಕು ಎಂದು ತಿಳಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!