janadhvani

Kannada Online News Paper

ಅತೃಪ್ತ ಶಾಸಕರ ರಾಜೀನಾಮೆ ಅಂಗೀಕರಿಸಲು ಸಾಧ್ಯವಿಲ್ಲ- ಸ್ಪೀಕರ್

ಬೆಂಗಳೂರು: ‘ಅತೃಪ್ತ ಶಾಸಕರು ಖುದ್ದು ಭೇಟಿಯಾಗದಿದ್ದರೆ, ಅವರ ರಾಜೀನಾಮೆ ಅಂಗೀಕರಿಸಲು ಸಾಧ್ಯವಿಲ್ಲ’ ಎಂದು ವಿಧಾನ ಸಭಾಧ್ಯಕ್ಷ ರಮೇಶ್‌ ಕುಮಾರ್ ಸ್ಪಷ್ಟಪಡಿಸಿದರು.

ಮಂಗಳವಾರ ವಿಧಾನಸೌಧದ ತಮ್ಮ ಕಚೇರಿಯಲ್ಲಿ ಶಾಸಕರು ನೀಡಿರುವ ರಾಜೀನಾಮೆ ಪರಿಶೀಲಿಸಿ ಮಾತನಾಡಿದ ಅವರು, ‘ಯಾವ ಶಾಸಕರು ರಾಜೀನಾಮೆ ಕೊಡುವ ಮೊದಲು ಪೂರ್ವಾನುಮತಿ ಪಡೆದಿರಲಿಲ್ಲ. ಅವರು ರಾಜೀನಾಮೆ ಕೊಡಲು ಬರುವ ವಿಷಯವೇ ನನಗೆ ತಿಳಿದಿರಲಿಲ್ಲ. ಹಾಗಾಗಿ ಕಚೇರಿ ಕೆಲಸದ ಮೇಲೆ ನಾನು ಹೊರಗೆ ತೆರಳಿದ್ದೆ’ ಎಂದು ಹೇಳಿದರು.

‘ನನ್ನ ಅನುಪಸ್ಥಿತಿಯಲ್ಲಿ ನೀಡಿರುವ ರಾಜೀನಾಮೆಗೆ ನಾನು ಹೊಣೆಯಲ್ಲ. ನಿಯಮದ ಪ್ರಕಾರವೇ ನಾನು ನಡೆದುಕೊಳ್ಳಬೇಕಾಗುತ್ತದೆ. ಹಾಗಾಗಿ ಅವರನ್ನು ವೈಯಕ್ತಿಕವಾಗಿ ಕರೆದು ಮಾತನಾಡಿಸಿದ ನಂತರವೇ ರಾಜೀನಾಮೆ ಅಂಗೀಕರಿಸಲಾಗುವುದು’ ಎಂದು ವಿವರಿಸಿದರು.

ಕಾಂಗ್ರೆಸ್ ಪರ ವಕೀಲರು ಸ್ಪೀಕರ್‌ ರಮೇಶ್‌ ಕುಮಾರ್ ಅವರನ್ನು ಭೇಟಿಯಾದರು.

error: Content is protected !! Not allowed copy content from janadhvani.com