janadhvani

Kannada Online News Paper

ಮದೀನಾ ತಲುಪಿದ ಭಾರತೀಯ ಹಜ್ ಯಾತ್ರಿಕರು- ಕೆಸಿಎಫ್ ಸಹಿತ ವಿವಿಧ ಸಂಘಟನೆಗಳಿಂದ ಸ್ವಾಗತ

ಮದೀನಾ: ಪ್ರಸಕ್ತ ವರ್ಷದ ಹಜ್ ನಿರ್ವಹಣೆಗಾಗಿ ವಿಶ್ವದ ವಿವಿಧ ಭಾಗದ ಜನರು ಸೌದಿ ಅರೇಬಿಯಾ ತಲುಪತೊಡಗಿದ್ದಾರೆ. ಪ್ರಥಮ ಹಜ್ ವಿಮಾನವು ಜಿದ್ದಾಗೆ ತಲುಪಿದ್ದು, ಬಾಂಗ್ಲಾದೇಶದ ಹಜ್ಜಾಜ್‌ಗಳು ಆ ವಿಮಾನದ ಮೂಲಕ ಬಂದಿಳಿದ್ದಾರೆ. ಭಾರತೀಯರ ಪ್ರಥಮ ಹಜ್ ವಿಮಾನವು ಮದೀನಾ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದು, ಸೌದಿ ಸಮಯ ಮುಂಜಾನೆ 3:15ಕ್ಕೆ ಇಳಿದ ವಿಮಾನದಲ್ಲಿ ದೆಹಲಿಯಿಂದ 420 ಹಜ್ಜಾಜ್‌ಗಳು ಮದೀನಾ ತಲುಪಿದ್ದಾರೆ.

ಭಾರತೀಯ ಅಂಬಾಸಿಡರ್ ಔಸಾಫ್ ಸ‌ಈದ್, ಕೌನ್ಸಿಲ್ ಜನರಲ್ ಮುಹಮ್ಮದ್ ನೂರ್ ರಹ್ಮಾನ್ ಶೈಖ್, ಹಜ್ ಕೌನ್ಸಿಲ್‌ನ ಸಾಬಿರ್, ಭಾರತೀಯ ಹಜ್ ಮಿಷನ್‌ನ ಮದೀನಾ ಇನ್ ಚಾರ್ಜ್ ಶಿಹಾಬುದ್ದೀನ್ ಮುಂತಾದವರು ಭಾರತೀಯ ಹಜ್ಜಾಜ್‌ಗಳನ್ನು ಬರಮಾಡಿಕೊಂಡರು.

ಮದೀನಾದ ಕರ್ನಾಟಕ ಕಲ್ಚರಲ್ ಫೌಂಡೇಷನ್(ಕೆಸಿಎಫ್) ಸೇರಿದಂತೆ ವಿವಿಧ ಸಂಘಟನೆಗಳ ಸಾರಥಿಗಳೂ ಈ ಸಂದರ್ಭದಲ್ಲಿ ಹಾಜರಿದ್ದರು.

ಮಸ್ಜಿದುನ್ನಬವೀಯ ಹತ್ತಿರದಲ್ಲಿರುವ ಮರ್ಕಝೀಯಾದ ವಿವಿಧ ಹೊಟೇಲ್‌ಗಳಲ್ಲಿ ಭಾರತೀಯ ಹಜ್ಜಾಜ್‌ಗಳಿಗೆ ಸೌಕರ್ಯ ಕಲ್ಪಿಸಲಾಗಿದೆ.

ಭಾರತದ ವಿವಿಧ ಕಡೆಯಿಂದ ಹತ್ತು ವಿಮಾನಗಳು ಗುರುವಾರ ಬಂದಿಳಿದಿದ್ದವು. ದೆಹಲಿ, ಗಯಾ, ಶ್ರೀನಗರ, ಗುವಾಹಟಿ ಮುಂತಾದ ಕಡೆಯಿಂದಲೂ ಹಜ್ಜಾಜ್‌ಗಳು ಆಗಮಿಸತೊಡಗಿದ್ದಾರೆ.

error: Content is protected !! Not allowed copy content from janadhvani.com