ರಿಯಾದ್: ಸೌದಿಯಲ್ಲಿ ಸಣ್ಣಪುಟ್ಟ ಉದ್ಯಮಗಳಿಗೆ ಏರ್ಪಡಿಸಲಾಗಿದ್ದ ಲೆವಿ ವಿನಾಯಿತಿಯ ಕಾಲಾವಧಿಯು ಮುಕ್ತಾಯಗೊಂಡಿದ್ದು, ಇನ್ನು ಮುಂದೆ ನಾಲ್ಕು ಅಥವಾ ಅದಕ್ಕಿಂತ ಕಡಿಮೆ ವಿದೇಶೀ ಕಾರ್ಮಿಕರಿರುವ ಕಂಪನಿಗಳು ಲೆವಿ ಪಾವತಿಸಬೇಕಾಗುತ್ತದೆ. ಈ ಮೂಲಕ ಸಂಸ್ಥೆಗಳು ಆತಂಕಕ್ಕೀಡಾಗಿದ್ದು, ಈ ಹಿಂದೆ ನಾಲ್ಕಕ್ಕಿಂದ ಮೇಲ್ಪಟ್ಟು ವಿದೇಶೀ ಕಾರ್ಮಿಕರಿರುವ ಕಂಪೆನಿಗಳಿಗೆ ಮಾತ್ರ ಲೆವಿ ಬಾಧಕವಾಗಿತ್ತು.
ಇಖಾಮಾ ನವೀಕರಿಸುವ ಮುನ್ನ ವರ್ಕ್ ಪರ್ಮಿಟ್ ನವೀಕರಿಸಲು ಇತ್ತೀಚೆಗೆ ತೆರಲಿದ ಸಣ್ಣಪುಟ್ಟ ಸಂಸ್ಥೆಗಳ ಮಾಲಕರಿಗೆ ಲೆವಿ ಪಾವತಿಸುವಂತೆ ಕಾರ್ಮಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವಾಲಯ ತಿಳಿಸಿದೆ.
ಅನಿರೀಕ್ಷಿತವಾಗಿ ಭಾರೀ ಮೊತ್ತದ ಲೆವಿ ಪಾವತಿಸುವಂತೆ ಸಚಿವಾಲಯ ತಿಳಿಸಿದ್ದು, ಹಿಂದೆ ಸಣ್ಣ ಸಂಸ್ಥಗೆಳು ನೂರು ರಿಯಾಲ್ ಕೆಲಸದ ಪರವಾನಗಿಗೆ ಪಾವತಿಸ ಬೇಕಾಗುತ್ತಿದ್ದವು. ಇದೀಗ ಪ್ರತೀ ಕಾರ್ಮಿಕನಿಗೆ 7 ಸಾವಿರಕ್ಕೂ ಹೆಚ್ಚು ರಿಯಾಲ್ ಪಾವತಿಸ ಬೇಕಾಗುತ್ತದೆ ಎನ್ನಲಾಗಿದೆ.
ಇನ್ನಷ್ಟು ಸುದ್ದಿಗಳು
ದುಬೈನಲ್ಲಿ ಕೋವಿಡ್ ಹೆಚ್ಚಳ: ಪ್ರವಾಸೋದ್ಯಮ,ಮನರಂಜನೆಗೆ ನಿರ್ಬಂಧ
ಬಸ್ ನಲ್ಲಿ ಕಿರುಕುಳ: ಆರೋಪಿಯ ಬಂಧನ- ಯುವತಿಯಿಂದ ಕಪಾಳಮೋಕ್ಷ
ಅಮೆರಿಕಾದ 46 ನೇ ಅಧ್ಯಕ್ಷರಾಗಿ ಜೋ ಬಿಡೆನ್ ಪ್ರಮಾಣ ವಚನ ಸ್ವೀಕಾರ
ಭಾರತೀಯ ಮಣ್ಣಲ್ಲಿ ಹಳ್ಳಿ ನಿರ್ಮಿಸಿದ ಚೀನಾ- ಪ್ರಧಾನಿ ಮೌನವೇಕೆ?
ಟ್ರಂಪ್ ವಿದಾಯ ಭಾಷಣ- ಹೊಸ ಸರ್ಕಾರಕ್ಕೆ ಶುಭ ಹಾರೈಕೆ
ಗೋರಕ್ಷಕರ ಮೇಲಿನ ಎಲ್ಲಾ ಪ್ರಕರಣಗಳು ವಾಪಸ್- ಪಶು ಸಂಗೋಪನೆ ಸಚಿವ