ಸೌದಿ ಅರೇಬಿಯಾ: ಅಬಹಾ ವಿಮಾನ ನಿಲ್ದಾಣದ ಮೇಲೆ ಡ್ರೋನ್ ದಾಳಿ

ರಿಯಾದ್: ಸೌದಿ ಅರೇಬಿಯಾದ ದಕ್ಷಿಣದಲ್ಲಿರುವ ಅಬಹಾ ವಿಮಾನ ನಿಲ್ದಾಣದ ಮೇಲೆ ನಡೆದ ಡ್ರೋನ್ ದಾಳಿಯಲ್ಲಿ ಒಬ್ಬರು ಮೃತಪಟ್ಟಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ. ಸೌದಿ ಅರೇಬಿಯಾದ ಅಲ್ ಅರೇಬಿಯಾ ಚಾನೆಲ್ ಈ ಬಗ್ಗೆ ವರದಿ ಮಾಡಿದೆ.

ರವಿವಾರ ರಾತ್ರಿ ನಡೆದ ಈ ದಾಳಿಯ ಹಿಂದೆ ಹೂತಿ ಬಂಡುಕೋರ ಕೈವಾಡವಿದೆ ಎಂದು ವರದಿಯಾಗಿದೆ.

ಒಂದು ತಿಂಗಳ ಹಿಂದೆ ಹೂತಿ ಬಂಡುಕೋರರು ವಿಮಾನ ನಿಲ್ದಾಣದ ಮೇಲೆ ನಡೆಸಿದ ದಾಳಿಯಲ್ಲಿ 26 ಮಂದಿ ಗಾಯಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!