janadhvani

Kannada Online News Paper

ಮಕ್ಕಾ: ಜನದಟ್ಟಣೆಯನ್ನು ತಡೆಯಲು ಮಿನಾದಲ್ಲಿ ನಿರ್ಮಾಣಗೊಳ್ಳುತ್ತಿದೆ ನಡೆ ಸೇತುವೆ

ಮಕ್ಕಾ: ಹಜ್ ವೇಳೆ ಕಿಂಗ್ ಅಬ್ದುಲ್ಲಾ ಸೇತುವೆಯಲ್ಲಿ ಉಂಟಾಗುವ ಜನದಟ್ಟಣೆಯನ್ನು ತಡೆಯಲು ಮಿನಾದಲ್ಲಿ ಸಮಾಂತರವಾಗಿ ನಡೆ ಸೇತುವೆ ನಿರ್ಮಾಣವಾಗೊಳ್ಳುತ್ತಿದ್ದು, ಕಾಮಗಾರಿಯು 65 ಶೇಕಡಾ ಈಗಾಗಲೇ ಪೂರ್ಣಗೊಂಡಿದೆ.

ಮಿನಾದ ಅತ್ಯಂತ ಪ್ರಧಾನ ಸೇತುವೆಯಾದ ಕಿಂಗ್ ಅಬ್ದುಲ್ಲಾ ಮೇಲ್ಸೇತುವೆಯಲ್ಲಿನ ಸಾಂದ್ರತೆಯನ್ನು ನಿಯಂತ್ರಿಸುವ ಸಲುವಾಗಿ ನಡೆಯುವ ಹಾದಿಯನ್ನು ಸೇತುವೆಯ ಪಶ್ಚಿಮ ದಿಕ್ಕಿನಲ್ಲಿ ನಿರ್ಮಿಸಲಾಗುತ್ತಿದೆ.

ಅಝೀಝಿಯಾದಿಂದ ಮಿನಾ ಮೂಲಕ ಶರಾ ಮತ್ತು ತ್ವಾಇಫ್‌ಗೆ ತೆರಲುವ ಕಿಂಗ್ ಅಬ್ದುಲ್ಲಾ ರಸ್ತೆಯ ಸೇತುವೆಯನ್ನು ಮೂರು ತಿಂಗಳ ಹಿಂದೆ ಮುಚ್ಚಲಾಗಿತ್ತು.

ಈ ಸೇತುವೆಯಲ್ಲಿಹಜ್ ವೇಳೆಯಲ್ಲಿ ವಾಹನ ಮತ್ತು ಜನರ ದಟ್ಟಣೆ ಉಂಟಾಗುವುದು ಸರ್ವೇ ಸಾಧಾರಣವಾಗಿದ್ದು, ಹಲವು ಬಾರಿ ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಉಂಟಾಗುತ್ತದೆ. ಅದಕ್ಕಾಗಿ ಸಮಾಂತರವಾಗಿ ಮತ್ತೊಂದು ಸೇತುವೆ ನಿರ್ಮಿಸಲಾಗುತ್ತಿದೆ.