ಸೌದಿ ಅರೇಬಿಯಾದಲ್ಲಿನ ಸ್ವರ್ಣ ಉತ್ಪಾದನೆಯಲ್ಲಿ ಭಾರೀ ಪ್ರಗತಿ

ರಿಯಾದ್: ಸೌದಿ ಅರೇಬಿಯಾದಲ್ಲಿನ ಸ್ವರ್ಣ ಉತ್ಪಾದನೆಯಲ್ಲಿ ಭಾರೀ ಪ್ರಗತಿ ಕಂಡು ಬಂದಿದೆ. ಕಳೆದ ವರ್ಷ ಇಪ್ಪತ್ತೈದು ಶೇಕಡಾ ಪ್ರಗತಿ ಸಾಧಿಸಲು ಸಾಧ್ಯವಾಗಿರುವುದಾಗಿ ವರದಿಯೊಂದು ತಿಳಿಸಿದೆ. ವಿಶ್ವದಾದ್ಯಂತ ಒಟ್ಟು ಬಂಗಾರ ಶೇಖರಣೆಯು 33,640 ಟನ್ ಆಗಿದ್ದು, ಆ ಪೈಕಿ ಅರಬ್ ದೇಶಗಳಲ್ಲಿನ ಶೇಖರಣೆಯು 1,300 ಟನ್‌ಗಳಷ್ಟು ಇದೆ. ಇದರಲ್ಲಿ ಒಂದು ಶೇಕಡಾ ಸೌದಿ ಅರೇಬಿಯಾದಲ್ಲಿದೆ ಎನ್ನಲಾಗಿದೆ.

2016ರಲ್ಲಿ ಸೌದಿ ಅರೇಬಿಯಾದ ಸ್ವರ್ಣ ಉದ್ಪಾದನೆಯು 5080 ಕಿ.ಗ್ರಾಂ ಆಗಿತ್ತು. ಕಳೆದ ವರ್ಷ ಇದರಲ್ಲಿ ಭಾರೀ ಏರಿಕೆ ಕಂಡುಬಂದಿದ್ದು, 12,910 ಕಿ.ಗ್ರಾಂ ಆಗಿ ಏರಿಕೆಯಾಗಿದೆ. ಮೂರು ವರ್ಷಗಳಲ್ಲಿ ಸ್ವರ್ಣ ಉತ್ಪಾದನೆಯಲ್ಲಿ ಸೌದಿಗೆ 7800 ಕಿ.ಗ್ರಾಂ.ಗಳ ಪ್ರಗತಿ ಸಾಧಿಸಲು ಸಾಧ್ಯವಾಗಿದೆ.

ವಿಶ್ವದ ಅತೀ ಹೆಚ್ಚು ಬಂಗಾರ ಶೇಖರಣೆ ಇರುವ ದೇಶಗಳ ಪೈಕಿ ಸೌದಿ ಅರೇಬಿಯಾ 14ನೇ ಸ್ಥಾನದಲ್ಲಿದೆ. ಆದರೆ, ಅರಬ್ ದೇಶಗಳ ಪೈಕಿ ಅತೀ ಹೆಚ್ಚು ಬಂಗಾರ ಶೇಖರಣೆ ಇರುವ ದೇಶ ಸೌದಿ ಅರೇಬಿಯಾ ಆಗಿದ್ದು, ಕಳದ ಮೂರು ವರ್ಷಗಳ ಅವಧಿಯಲ್ಲಿನ ಸ್ವರ್ಣ ಉತ್ಪಾದನೆಯಲ್ಲಿ ನೂರ ಐವತ್ತನಾಲ್ಕು ಶೇಕಡಾ ಪ್ರಗತಿ ಕಂಡಿದೆ.

Leave a Reply

Your email address will not be published. Required fields are marked *

error: Content is protected !!