ನಿಪಾಹ್ ವೈರಸ್: ಕೇರಳದಲ್ಲಿ ಹೊಸ ಪ್ರಕರಣ ಕಂಡು ಬಂದಿಲ್ಲ- ಕೇಂದ್ರ ಆರೋಗ್ಯ ಸಚಿವ

ನವದೆಹಲಿ: ಕೇರಳದಲ್ಲಿ ಹೊಸದಾಗಿ ನಿಫಾ ವೈರಸ್ ಪ್ರಕರಣ ಕಂಡುಬಂದಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷ ವರ್ಧನ್ ಹೇಳಿದ್ದಾರೆ.

ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿ ಜೂನ್ 3 ರಂದು ನಿಫಾ ವೈರಸ್ ಪ್ರಕರಣ ಪತ್ತೆಯಾಗಿತ್ತು. ಈ ಸೋಂಕು ಪತ್ತೆಯಾಗಿದ್ದ ಕಾಲೇಜ್ ವಿದ್ಯಾರ್ಥಿ ಆರೋಗ್ಯ ಪರಿಸ್ಥಿತಿ ಸುಧಾರಿಸಿದೆ. 318 ಜನರು ವಿದ್ಯಾರ್ಥಿಗಳ ಜೊತೆ ಸಂಪರ್ಕದಲ್ಲಿದ್ದಾರೆ. ಅವರ ಬಗ್ಗೆ ನಿಗಾ ವಹಿಸಲಾಗಿದೆ. 52 ಮಂದಿಯನ್ನು ಹೆಚ್ಚಿನ ಅಪಾಯದ ವರ್ಗ ಎಂದು ಗುರುತಿಸಲಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.

ಕೇರಳದಲ್ಲಿನ ಆರೋಗ್ಯ ಮುನ್ನೆಚ್ಟರಿಕಾ ಕ್ರಮವನ್ನು ನಿರಂತರವಾಗಿ ಪರಾಮರ್ಶೆ ನಡೆಸುತ್ತಿರುವ ಹರ್ಷವರ್ಧನ್, ಈ ಸೋಂಕು ತಡೆಗಾಗಿ ಕೇರಳ ಆರೋಗ್ಯ ಸಚಿವೆ ಕೆಕೆ ಶೈಲಜಾ ಅವರಿಗೆ ಕೇಂದ್ರದಿಂದ ಎಲ್ಲಾ ರೀತಿಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.

ಈ ಮಧ್ಯೆ ಭೂಪಾಲ್ ನ ಪ್ರಾಣಿಗಳ ರೋಗಳ ಅತ್ಯುನ್ನತ ಸುರಕ್ಷತೆ ರಾಷ್ಟ್ರೀಯ ಸಂಸ್ಥೆ – ಎನ್ ಐಹೆಚ್ ಎಸ್ ಎಡಿಯ ತಜ್ಞರು ಕೇರಳದ ಪಶುಪಾಲನಾ ಇಲಾಖೆಗೆ ಬೆಂಬಲ ನೀಡುತ್ತಿದ್ದಾರೆ. ಈ ತಜ್ಞರ ತಂಡ ಮಾದರಿಗಳನ್ನು ಸಂಗ್ರಹಿಸಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಎನ್ ಸಿಡಿಸಿ, ಎಐಐಎಂಎಸ್, ಮತ್ತು ಐಸಿಎಂಆರ್ ತಜ್ಞರು ಸೇರಿದಂತೆ ಬಹು ಹಂತಗಳ ಕೇಂದ್ರ ತಂಡವನ್ನು ನಿಯೋಜಿಸಲಾಗಿದ್ದು, ತನಿಖೆಯಲ್ಲಿ ಕೇರಳ ರಾಜ್ಯಕ್ಕೆ ಸಹಕಾರ ನೀಡಲಾಗುತ್ತಿದೆ.

Leave a Reply

Your email address will not be published. Required fields are marked *

error: Content is protected !!