janadhvani

Kannada Online News Paper

ರಂಝಾನ್ ನೀಡಿದ ಪಾವಿತ್ರ್ಯತೆಯನ್ನು ಉಳಿಸಿಕೊಂಡು ಹಬ್ಬ ಆಚರಿಸಿ-ಕೂರತ್ ತಂಙಳ್

ಮಂಗಳೂರು.ಜೂನ್,4: ರಂಝಾನ್ ತಿಂಗಳ ವೃತಾಚರಣೆ ಮುಗಿದು ಮುಸ್ಲಿಂ ಸಮುದಾಯವು ಪವಿತ್ರ ಈದುಲ್ ಫಿತ್ರ್ ಹಬ್ಬಾಚರಣೆಗೆ ಸಜ್ಜಾಗುತ್ತಿದೆ. ಈ ನಿಟ್ಟಿನಲ್ಲಿ ರಂಝಾನ್ ತಿಂಗಳಲ್ಲಿ ನಡೆಸಿದ ಆತ್ಮಶುದ್ದಿ ಮತ್ತು ಪಾವಿತ್ರ್ಯತೆಯ ಸಂದೇಶಗಳನ್ನು ಸಮಾಜದಲ್ಲಿ ಹರಡುವಂತಾಗಬೇಕೆಂದು ದಕ್ಷಿಣ ಕನ್ನಡ ಸಂಯುಕ್ತ ಖಾಝಿ ಖುರ್ರತ್ತುಸ್ಸಾದಾತ್ ಸಯ್ಯಿದ್ ಫಝಲ್ ಕೋಯಮ್ಮ ತಂಙಲ್ ಮದನಿ ಅಲ್ ಬುಖಾರಿ ಕೂರತ್ ಕರೆ ನೀಡಿದ್ದಾರೆ.

ಸಮಾಜದ ಎಲ್ಲ ವರ್ಗದ ಜನರ ಮಧ್ಯೆ ಶಾಂತಿ ಮತ್ತು ಸಾಮರಸ್ಯ ಖಾತರಿ ಪಡಿಸಲು ಈದ್ ದಿನವು ಕಾರಣವಾಗ ಬೇಕೆಂದು ಅವರು ಹೇಳಿದ್ದಾರೆ.

ನಿನ್ನೆ ರಾತ್ರಿ ಶವ್ವಾಲ್ ತಿಂಗಳ ಚಂದ್ರ ದರ್ಶನವಾಗದ ಹಿನ್ನಲೆಯಲ್ಲಿ ,ಜೂನ್ 5 ರಂದು ಬುಧವಾರ ಕರಾವಳಿ ಕರ್ನಾಟಕದ ಮುಸಲ್ಮಾನರು ಈದುಲ್ ಫಿತ್ರ್ ಹಬ್ಬವನ್ನು ಆಚರಿಸಲಿದ್ದಾರೆ ಎಂದು ಕೂರತ್ ತಂಙಳ್ ಘೋಷಿಸಿದ್ದರು.

error: Content is protected !! Not allowed copy content from janadhvani.com