janadhvani

Kannada Online News Paper

ಸೌದಿ: “ಸಾರ್ವಜನಿಕ ಮರ್ಯಾದೆ ಕಾನೂನು” ಇಂದಿನಿಂದ ಜಾರಿಗೆ- ಎಚ್ಚರಿಕೆ

ರಿಯಾದ್: ಸೌದಿ ಅರೇಬಿಯಾದಲ್ಲಿರುವವರು ಸಭ್ಯ ರೀತಿಯಲ್ಲಿ ವಸ್ತ್ರಗಳನ್ನು ಧರಿಸಬೇಕು ಮುಂತಾದ ಸಾರ್ವಜನಿಕ ಮರ್ಯಾದೆ ಕಾನೂನು ಮೇ 25 ರಿಂದ ಜಾರಿಗೊಂಡಿದೆ.

ಕಾನೂನು ಉಲ್ಲಂಘನೆಗೆ 5000 ರಿಯಾಲ್ ವರೆಗೆ ದಂಡ ವಿಧಿಸಲಾಗುವುದಲ್ಲದೆ, ಉಲ್ಲಂಘನೆಯನ್ನು ಮುಂದುವರಿಸಿದರೆ ದಂಡವು ದ್ವಿಗುಣಗೊಳ್ಳಲಿದೆ. ದೇಶದ ಸಾರ್ವಜನಿಕ ಸ್ಥಳಗಳಲ್ಲಿ ಮಾನ್ಯತೆ, ಸಭ್ಯತೆ ಪಾಲನೆಯಾಗುತ್ತಿದೆ ಎಂಬುದನ್ನು ಖಾತ್ರಿಪಡಿಸಲು ಈ ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತದೆ.

ಸಭ್ಯತೆಗೆ ಭಂಗ ತರುವ ರೀತಿಯಲ್ಲಿ ವಸ್ತ್ರ ಧರಿಸಿ, ಸಾರ್ವಜನಿಕ ಸ್ಥಳದಲ್ಲಿ ಪ್ರತ್ಯಕ್ಷ ಗೊಳ್ಳುವುದು. ಸಾರ್ವಜನಿಕ ಸ್ಥಳ ಅಥವಾ ವಾಹನದಲ್ಲಿ ಬರೆಯುವುದು, ಚಿತ್ರಬಿಡಿಸುವುದು, ಇತರರಿಗೆ ಮುಜುಗರ ಉಂಟಾಗುವ ರೀತಿಯಲ್ಲಿ ವಾಖ್ಯಗಳನ್ನು ಉಪಯೋಗಿಸುವುದು ಮುಂತಾವು ಕಾನೂನು ಉಲ್ಲಂಘನೆಯಾಗಿ ಗಣಿಸಲ್ಪಡಲಿದೆ.

ಗೃಹ ಸಚಿವಾಲಯ ಮತ್ತು ಟೂರಿಸಂ ಖಾತೆಯು ಜಂಟಿಯಾಗಿ ಈ ಕಾನೂನನ್ನು ಜಾರಿ ಮಾಡಿ, ದಂಡ ವಸೂಲು ಮಾಡುವಲ್ಲಿ ಕಾರ್ಯಾಚರಿಸಲಿದೆ. ಉತ್ತಮ ಗುಣ ಮತ್ತು ಮೌಲ್ಯಯುತ ರೀತಿಯನ್ನು ಪರಿಚಯಿಸುವುದು, ಗೆಟ್ಟ ನಡತೆಗಳನ್ನು ನಿರ್ನಾಮ ಮಾಡುವುದು ಈ ಕಾನೂನಿನ ಗುರಿಯಾಗಿದೆ.

ಈ ಕರಡಿನ ಬೈಲಾದಲ್ಲಿ 10 ಕಲಂಗಳಿದ್ದು, ದಂಡ ಪಾವತಿಸಿದಲ್ಲಿ ಏನಾದರೂ ಅಭ್ಯಂತರ ಇದ್ದಲ್ಲಿ ಸಂಬಂಧಿಸಿದ ಅಡ್ಮಿನಿಸ್ಟ್ರೇಟೀವ್ ನ್ಯಾಯಾಲಯದಲ್ಲಿ ಅಪೀಲ್ ಸಲ್ಲಿಸಬಹುದಾಗಿದೆ.

error: Content is protected !! Not allowed copy content from janadhvani.com