janadhvani

Kannada Online News Paper

ಯುಎಇ: ಆರು ತಿಂಗಳ ಮಲ್ಟಿಪಲ್ ಎಂಟ್ರಿ ವಿಸಾ ಜಾರಿ

ದುಬೈ: ಯುಎಇಯ ಹೂಡಿಕೆದಾರರು, ಪ್ರತಿಭೆಗಳು, ಉನ್ನತ ಮಟ್ಟದ ವಿಧ್ಯಾರ್ಥಿಗಳು ಮುಂತಾದವರಿಗೆ ಆರು ತಿಂಗಳ ಮಲ್ಟಿಪಲ್ ಎಂಟ್ರಿ ವಿಸಾವನ್ನು ಅನುಮತಿಸಲಾಗಿದೆ. ದೀರ್ಘ ಅವಧಿಗೆ ವಾಸವಿರಲು ಅವಕಾಶ ಲಭಿಸುವ ಮೂಲಕ ಇವರಿಗೆ ವ್ಯವಹಾರ ವಲಯವನ್ನು ಅಭಿವೃದ್ಧಿ ಪಡಿಸಲು ಸಾಧ್ಯವಾಗಲಿದೆ ಎನ್ನುವುದು ಈ ವಿಸಾದ ವಿಷೇಶವಾಗಿದೆ.

ಫೆಡರಲ್ ಅಥಾರಿಟಿ ಫಾರ್ ಐಡೆನ್ಟಿಟಿ ಆ್ಯಂಡ್ ಸಿಟಿಝನ್‌ಶಿಪ್ ಮೂರು ಹೊಸ ಸೇವೆಗಳನ್ನು ಪರಿಚಯಿಸಿದೆ. ಒಂದಕ್ಕಿಂತ ಹೆಚ್ಚುಬಾರಿ ದೇಶಕ್ಕೆ ಪ್ರವೇಶಗೈಯ್ಯಲು ಆರು ತಿಂಗಳ ವಿಸಾ, ವಿಧ್ಯಾರ್ಥಿಗಳು, ಹೂಡಿಕೆದಾರರಿಗೆ ಆರು ತಿಂಗಳ ವಿಸಾ, ಒಂದು ಬಾರಿ ಮಾತ್ರ ಪ್ರವೇಶ ಗೈಯ್ಯಲು ಸಾಧ್ಯವಿರುವ ಆರು ತಿಂಗಳ ವಿಸಾ ಹೀಗೆ ಮೂರು ನಮೂನೆಯ ವೀಸಾಗಳನ್ನು ಆಯ್ಕೆ ಮಾಡಬಹುದಾಗಿದೆ.

ಇಂತಹ ವಿಸಾಗಳಿಗೆ ವಿವಿಧ ಕಡೆಗಳಿಂದ ಬೇಡಿಕೆ ಕೇಳಿಬಂದ ಕಾರಣಕ್ಕಾಗಿ ವೀಸಾಗಳನ್ನು ಅನುಮತಿಸಲಾಗಿದೆ ಎಂದು ಫಾರಿನ್ ಅಫೇರ್ಸ್ ಡೈರೆಕ್ಟರ್ ಜನರಲ್ ಮೇಜರ್ ಸ‌ಈದ್ ರಕನ್ ಅಲ್ ರಾಶಿದಿ ಹೇಳಿದ್ದಾರೆ.