ಯುಎಇಯಲ್ಲಿ ಅನಿವಾಸಿಯರಿಗೆ ಸೇವಾನಂತರ ಪೆನ್ಷನ್

ದುಬೈ: ಯುಎಇಯಲ್ಲಿ ಅನಿವಾಸಿಯರಿಗೆ ಪ್ರಸಕ್ತ ಜಾರಿಯಲ್ಲಿರುವ ಸೇವಾನಂತರದ ಸವಲತ್ತುಗಳ ಬದಲಾಗಿ, ಸಹಭಾಗಿತ್ವ ಪೆನ್ಷನ್ ಯೋಜನೆ ಜಾರಿಗೊಳಿಸುವ ಬಗ್ಗೆ ಯೋಚನೆಯಲ್ಲಿದೆ. ಕೆಲಸಕ್ಕೆ ವಿರಾಮ ಕೋರಿದ ನಂತರವೂ ನಿಶ್ಚಿತ ವರಮಾನ ಲಭಿಸುವ ರೂಪದಲ್ಲಿ ಯೋಜನೆ ಇರಲಿದೆ ಎಂದು ಫೆಡರಲ್ ಅಥಾರಿಟಿ ಫಾರ್ ಗವರ್ನಮೆಂಟ್ ಹ್ಯೂಮನ್ ರಿಸರ್ಸಸ್ ತಿಳಿಸಿದೆ.

ಅನಿವಾಸಿಯರಿಗೆ ಸಹಭಾಗಿತ್ವ ಪೆನ್ಷನ್ ನೀಡುವುದಕ್ಕಾಗಿ ಪ್ರತ್ಯೇಕ ಹೂಡಿಕೆ ನಿಧಿ ರೂಪೀಕರಿಸಲಾಗುವುದು. ಕಂಪೆನಿಯ ಮಾಲೀಕ ಮತ್ತು ಸಿಬ್ಬಂದಿ ತಮ್ಮ ಪಾಲನ್ನು ನೀಡಬೇಕು. ಹೀಗೆ ಸಂಗ್ರಹಿಸಲಾಗುವ ಮೊತ್ತವನ್ನು ವಿವಿಧ ವಲಯಗಳಲ್ಲಿ ಹೂಡಿಕೆ ಮಾಡಿ ಆ ಮೂಲಕ ಲಭಿಸುವ ಲಾಭವನ್ನು ಪೆನ್ಷನ್ ವಿತರಣೆಗೆ ಉಪಯೋಗಿಸಲಾಗುವುದು. ಸಿಬ್ಬಂದಿಯ ಪಾಲಿನ ಅನುಸಾರವಾಗಿ ಪೆನ್ಷನ್ ಲಭಿಸಲಿದೆ.

ಪೆನ್ಷನ್ ಬೇಡದವರಿಗೂ ಸೇವಾ ನಂತರದ ಸೌಲಭ್ಯಗಳನ್ನು ನೀಡಲಾಗುವುದು. ಹೊಸ ಯೋಜನೆಯ ಮೂಲಕ ಆಶ್ರಿತರಿಗೆ ಕೆಲಸದ ಮೀಸಲಾತಿ ಖಾತರಿಪಡಿಸಲಾಗುವುದು ಎಂದು ಅಥಾರಿಟಿ ಡೈರೆಕ್ಟರ್ ಜನರಲ್ ಅಬ್ದುರ್ರಹ್ಮಾನ್ ಅಲ್ ಆವಾರ್ ಹೇಳಿದ್ದಾರೆ. ಪ್ರಸಕ್ತ ಕಾನೂನಿನ ಅನುಸಾರ ಯುಎಇಯಲ್ಲಿ ಕಡಿಮೆ ಪಕ್ಷ ಒಂದು ವರ್ಷ ಕೆಲಸ ಮಾಡಿ ರಾಜಿನಾಮೆ ನೀಡಿದವರಿಗೆ ಗ್ರಾಟ್ವಿಟಿಗೆ ಅರ್ಹತೆ ಇದೆ.

ಸ್ಥಿರ ಸಂಬಳದ ನಿಶ್ಚಿತ ಮೊತ್ತವನ್ನು ಗ್ರಾಟ್ವಿಟಿಯಾಗಿ ನೀಡಲಾಗುವುದು. ವರ್ಷಗಳು ಹೆಚ್ಚಾದಂತೆ ಗ್ರಾಟ್ವಿಟಿಯ ಮೊತ್ತವು ಹೆಚ್ಚಾಗಲಿದ್ದು, ಗ್ರಾಟ್ವಿಟಿ ನಿಲ್ಲಿಸಿದರೂ, ಸಂಪಾದನೆ ಖಾತರಿಪಡಿಸುವ 12 ಯೋಜನೆಗಳ ಪೈಕಿ ಅನಿವಾಸಿಯರಿಗೆ ಬೇಕಾಗಿರುವುದನ್ನು ತಮ್ಮದಾಗಿಸುವ ರೀತಿಯಲ್ಲಿ ಕ್ರಮೀಕರಿಸಲಾಗಿದೆ ಎಂಬುದಾಗಿ ತಿಳಿದು ಬಂದಿದೆ. ಅಂತರ್ರಾಷ್ಟ್ರೀಯ ಮಾನದಂಡಗಳ ಅನುಸಾರವಾಗಿ ಈ ಯೋಜನೆ ಜಾರಿಯಾಗಲಿದೆ.

Leave a Reply

Your email address will not be published. Required fields are marked *

error: Content is protected !!