janadhvani

Kannada Online News Paper

ಅಸಹಿಷ್ಣುತೆಯನ್ನು ಕಠಿಣವಾಗಿ ವಿರೋಧಿಸಿದ ಧರ್ಮವಾಗಿದೆ ಇಸ್ಲಾಮ್- ಇಂಡಿಯನ್ ಗ್ರ್ಯಾಂಡ್ ಮುಫ್ತಿ

ದುಬೈ : ಎಲ್ಲಾ ವಿಧ ಭಯೋತ್ಪಾದನೆಗಳನ್ನು ಹಾಗೂ ಅಸಹಿಷ್ಣುತೆಯನ್ನು ಕಠಿಣವಾಗಿ ವಿರೋಧಿಸಿದ ಧರ್ಮವಾಗಿದೆ ಇಸ್ಲಾಮ್, ಶಾಂತಿ ಮತ್ತು ಸಮಾಧಾನವು ಇಸ್ಲಾಮಿನ ಮುದ್ರೆಯಾಗಿದೆ ಎಂದು ಇಂಡಿಯನ್ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ಹೇಳಿದರು.

ಭಯೋತ್ಪಾದನೆ ವಿರುದ್ಧ ಕಠಿಣ ನಿರ್ಣಯ ಕೈಗೊಳ್ಳವ ಸಲುವಾಗಿ ಯುಎಇ ಗ್ರಹ ಮಂತ್ರಿ ಹಾಗೂ ಉಪ ಪ್ರಧಾನಿ ಶೈಖ್ ಸೈಫ್ ಬಿನ್ ಝಾಯಿದ್ ಅವರ ಆಹ್ವಾನದ ಮೇರೆಗೆ ದುಬೈ ಪೊಲೀಸ್ ಮಹಾನಿರ್ದೇಶಕ ಲೆಫ್ಟಿನೆಂಟ್ ಜನರಲ್. ದಾಹಿ ಖಲ್ಪಾನ್ ತಮೀಮ್ ಅವರ ನಿವಾಸದಲ್ಲಿ ನಡೆದ ಪ್ರಮುಖ ಗಣ್ಯರ ಸಮ್ಮಿಲನದಲ್ಲಿ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಮುಖ್ಯ ಅತಿಥಿಯಾಗಿ ಭಾಗವಹಿಸಿದರು.

ಯುಎಇ ಸರಕಾರದ ಮೇಲ್ದರ್ಜೆಯ ಅಧಿಕಾರಿಗಳು, ಪ್ರಮುಖ ನೇತಾರರು, ರಾಜ ಕುಟುಂಬದ ಪ್ರತಿನಿಧಿಗಳು ಹಾಗೂ ರಾಜತಾಂತ್ರಿಕರು ಭಾಗವಹಿಸಿದ ಕಾರ್ಯಕ್ರಮದಲ್ಲಿ,ಭಯೋತ್ಪಾದನೆ ವಿರುದ್ಧ ಇಸ್ಲಾಮಿನ ನಿಲುವು ಎಂಬ ವಿಷಯದ ಬಗ್ಗೆ ಭಾರತದ ಗ್ರಾಂಡ್ ಮುಫ್ತಿ ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್ ಮಾತಾಡಿದರು.

ಶಾಂತಿಯುತವಾದ ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳುವ ಯುಎಇ ಸರಕಾರ ಕ್ರಮವನ್ನು ಗ್ರಾಂಡ್ ಮುಫ್ತಿಯವರು ಮುಕ್ತಕಂಠದಿಂದ ಶ್ಲಾಘಿಸಿದರು. ರಮಳಾನಿನ ಆಧ್ಯಾತ್ಮಿಕತೆಯನ್ನು ವಿಶ್ವಾಸಿಗಳಿಗೆ ಧನಾತ್ಮಕವಾಗಿ ತಲುಪಿಸಲು ಯುಎಇ ಸರಕಾರವು ಕೈಗೊಳ್ಳುತ್ತಿರುವ ಕ್ರಮಗಳು ಪ್ರಶಂಸನೀಯವಾಗಿದೆ ಎಂದು ಗ್ರಾಂಡ್ ಮುಫ್ತಿ ಹೇಳಿದರು.

ಇದೇ ವೇಳೆ ಇಂಡಿಯನ್ ಗ್ರಾಂಡ್ ಮುಫ್ತಿಯಾಗಿ ನೇಮಕಗೊಂಡ ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್ ಅವರನ್ನು ದುಬೈ ಪೊಲೀಸ್ ಮಹಾನಿರ್ದೇಶಕ ಲೆಫ್ಟಿನೆಂಟ್ ಜನರಲ್. ದಾಹಿ ಖಲ್ಪಾನ್ ತಮೀಮ್ ಅವರು ಅಭಿನಂದಿಸಿದರು.

ಮೂಲ : ಸಿರಾಜ್ ಡೈಲಿ
ಕನ್ನಡಕ್ಕೆ : ಡಿ.ಎ.ಮುಹಮ್ಮದ್ ಅಶ್ರಫ್ ಕೊಡಂಗಾಯಿ

error: Content is protected !! Not allowed copy content from janadhvani.com