ರಿಯಾದ್: ಸೌದಿ ಅರೇಬಿಯಾದಲ್ಲಿ ಪ್ರಾಯೋಜಕತ್ವ ವ್ಯವಸ್ಥೆಯನ್ನು ಕೊನೆಗೊಳಿಸಬೇಕು ಎಂದು ಶೂರಾ ಕೌನ್ಸಿಲ್ ಸದಸ್ಯ ಫಹದ್ ಬಿನ್ ಜುಮುಅ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬಿನಾಮಿ ವ್ಯವಹಾರ ಮತ್ತು ಹಿಂಬದಿಯ ಆರ್ಥಿಕ ವಿನಿಮಯವನ್ನು ಈ ಮೂಲಕ ಕೊನೆಗಾಣಿಸ ಬಹುದೆಂದು ಅವರು ತಿಳಿಸಿದರು.
ವಿದೇಶೀ ಕೆಲಸಗಾರರು ತಮ್ಮ ವ್ಯವಹಾರಗಳು, ಸ್ವಭಾವಗಳು ಮುಂತಾದವುಗಳಿಗೆ ತಾವೇ ಸಂಪೂರ್ಣ ಹೊಣೆಗಾರರಾಗುವ ಕಾರಣ ಹೆಚ್ಚಿನ ಮುತುವರ್ಜಿಯಿಂದ ಕಾರ್ಯಾಚರಿಸುವರು. ಪ್ರಾಯೋಜಕರ ಅಡಿಯಲ್ಲಿ ಇರುವ ಕೆಲಸಗಾರರ ಸಂಪೂರ್ಣ ಹೊಣೆಗಾರಿಕೆಯು ಪ್ರಾಯೋಜಕನ ಮೇಲಿರುತ್ತದೆ. ಅದು ವಿದೇಶೀಯರಿಗೆ ಕಾನೂನಿನ ಉಲ್ಲಂಘನೆಗೆ ಪ್ರೇರಣೆಯಾಗುತ್ತಿದೆ. ಬೇನಾಮಿ ವ್ಯವಹಾರ ಹೆಚ್ಚುವುದಕ್ಕೆ ಕಾರಣವೂ ಪ್ರಾಯೋಜಕತ್ವವಾಗಿದೆ.
ಝಕಾತ್, ತೆರಿಗೆ, ಸರಕಾರಿ ಶುಲ್ಕ ಮುಂತಾದವುಗಳ ಉಲ್ಲಂಘನೆಗೆ ಬೇನಾಮಿ ವ್ಯವಹಾರ, ಪ್ರಾಯೋಜಕತ್ವ ಮುಂತಾದವು ಕಾರಣವಾಗಿತ್ತಿದೆ ಎಂದು ತನ್ನ ಟ್ವಿಟರ್ ಖಾತೆಯಲ್ಲಿ ಜುಮುಅ ಅಭಿಪ್ರಾಯ ಪಟ್ಟಿದ್ದಾರೆ. ಸ್ವದೇಶೀಕರಣನನ್ನು ಇನ್ನಷ್ಟು ಪರಿಣಾಮ ಕಾರಿಯಾಗಿ ಜಾರಿಗೆ ತರುವುದು ಈ ಮೂಲಕ ಸಾಧ್ಯವಿದೆ. ಬೇನಾಮೀ ವ್ಯವಹಾರ ಸ್ಥಿಗಿತಗೊಳ್ಳುವ ಮೂಲಕ ಸಣ್ಣಪುಟ್ಟ ವ್ಯವಹಾರಗಳತ್ತ ಸ್ವದೇಶೀಯರು ಆಕರ್ಷಿತರಾಗಲಿದ್ದಾರೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.