ಬಿಜೆಪಿ ಈ ಬಾರಿ ಅತೀ ಹೆಚ್ಚು ಸ್ಥಾನ ಪಡೆಯುತ್ತೆ- ಖ್ಯಾತ ಚುನಾವಣಾ ತಜ್ಞ

ನವದೆಹಲಿ: ಬಿಜೆಪಿ ಈ ಬಾರಿ ಅತೀ ಹೆಚ್ಚು ಸ್ಥಾನ ಪಡೆಯುತ್ತೆ ಅಂತಾ ಖ್ಯಾತ ಚುನಾವಣಾ ತಜ್ಞ, Centre for the Study of Developing Societies ನಿರ್ದೇಶಕ ಸಂಜಯ್ ಕುಮಾರ್ ಹೇಳಿದ್ದಾರೆ.

ಬಿಜೆಪಿ ಅತೀ ಹೆಚ್ಚು ಸ್ಥಾನ ಪಡೆಯಲಿದೆ. ಜೊತೆಗೆ ಬಿಜೆಪಿ ನೇತೃತ್ವದ ಎನ್ಡಿಎ ಬಹುಮತ ಗಳಿಸುವತ್ತ ಸಾಗುತ್ತದೆ. ಆದ್ರೆ ಕಾಂಗ್ರೆಸ್ 100 ಸ್ಥಾನ ಗಳಿಸುವುದು ಸಹ ಡೌಟ್. 75 ರಿಂದ 80 ಸ್ಥಾನ ಮಾತ್ರ ‘ಕೈ’ ಪಕ್ಷದ ಪಾಲಾಗಲಿದೆ ಅಂತಾ ಇವರು ಅಭಿಪ್ರಾಯಪಟ್ಟಿದ್ದಾರೆ. ಜೊತೆಗೆ ಈ ಬಾರಿ ಬಿಜೆಪಿ ಪಶ್ಚಿಮ ಬಂಗಾಳ ಹಾಗೂ ಒಡಿಶಾದಲ್ಲಿ ಉತ್ತಮ ಫಲಿತಾಂಶ ಪಡೆಯುತ್ತೆ. ಆದ್ರೆ ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್ಗಢ, ಹಿಮಾಚಲ ಪ್ರದೇಶ, ಉತ್ತರಾಖಂಡ್ ಹಾಗೂ ದೆಹಲಿಯಲ್ಲಿ 2014ರಲ್ಲಿ ಗಳಿಸಿದ್ದಷ್ಟು ಸ್ಥಾನವನ್ನು 2019ರಲ್ಲಿ ಪಡೆಯಲ್ಲ ಎಂದಿದ್ದಾರೆ.

ಈ ಚುನಾವಣೆಯಲ್ಲಿ ಮೋದಿ ಪ್ರಚಾರದ ವೈಖರಿ ಬಗ್ಗೆಯೂ ಸಂಜಯ್ ಕುಮಾರ್ ಮಾತನಾಡಿದ್ದಾರೆ. ಒಂದು ಕ್ಷೇತ್ರದಲ್ಲಿ ಮೋದಿ ಜಾತಿ ವಿಚಾರವಿಟ್ಟು ಜನರ ವೋಟ್ ಸೆಳೆಯಲು ಯತ್ನಿಸುತ್ತಾರೆ. ಇನ್ನೊಂದೆಡೆ ಕಾಂಗ್ರೆಸ್ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡ್ತಾರೆ. ಮತ್ತೊಂದೆಡೆ ರಾಜೀವ್ ಗಾಂಧಿ ನಂಬರ್ 1 ಭ್ರಷ್ಟಾಚಾರಿ ಎನ್ನುತ್ತಾರೆ. ಇನ್ನೂ ಕೆಲವೆಡೆ ಬಾಲಕೋಟ್ ಏರ್ಸ್ಟ್ರೈಕ್, ಪುಲ್ವಾಮಾದಲ್ಲಿ ಉಗ್ರರ ದಾಳಿ, ರಾಷ್ಟ್ರೀಯ ಭದ್ರತೆಯ ವಿಚಾರದ ಬಗ್ಗೆ ಭಾಷಣ ಮಾಡುತ್ತಾರೆ. ಮತ್ತೆ ಕೆಲವೆಡೆ ಮಹಾಘಟಬಂಧನ್ ಹಾಗೂ ಪ್ರಾದೇಶಿಕ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸ್ತಾರೆ. ಹೀಗೆ ಒಂದೊಂದು ಕಡೆ ಒಂದೊಂದು ರೀತಿಯ ಅಸ್ತ್ರವನ್ನು ಪ್ರಯೋಗಿಸ್ತಿರುವುದು ಅವರ ರಣತಂತ್ರದ ಒಂದು ಭಾಗವಾಗಿದೆ ಅಂತಾ ಸಂಜಯ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

Leave a Reply

Your email address will not be published. Required fields are marked *

error: Content is protected !!