janadhvani

Kannada Online News Paper

ಬೆಂಗಳೂರಿನ ಅಪೋಲೋ ಆಸ್ಪತ್ರೆಯ ವೈದ್ಯರ ನಿರ್ಲಕ್ಷ-ಈಜಿಪ್ಟ್ ಯುವತಿಯ ಜೀವ ಅಪಾಯದಲ್ಲಿ

ಈ ವರದಿಯ ಧ್ವನಿಯನ್ನು ಆಲಿಸಿ


ಬೆಂಗಳೂರು:ಇಲ್ಲಿನ ಶೇಷಾದ್ರಿಪುರಂ ನಲ್ಲಿರುವ ಅಪೋಲೊ ಆಸ್ಪತ್ರೆಯ ವೈದ್ಯಕೀಯ ನಿರ್ಲಕ್ಷದ ಅಪರಾಧದಿಂದಾಗಿ ಈಜಿಪ್ಟ್ ದೇಶದ ಪ್ರಜೆಯೊಬ್ಬರ ಜೀವವೇ ಅಪಾಯದಲ್ಲಿ ಸಿಲುಕಿದೆ.

ಕೇವಲ ಹಣ ಮಾಡುವ ದುರುದ್ದೇಶದಿಂದ ಅಪೋಲೊ ಆಸ್ಪತ್ರೆಯ ವೈದ್ಯರು ಈಜಿಪ್ಟ್ ನ ಮಹಿಳೆಯ ಜೀವವನ್ನೇ ಗಂಭೀರ ಅಪಾಯದಲ್ಲಿ ಸಿಲುಕಿಸಿದ್ದು ಬೆಳಕಿಗೆ ಬಂದಿದೆ. ಇದೊಂದು ವೈದ್ಯಕೀಯ ನಿರ್ಲಕ್ಷ ಅಪರಾಧದ ಗಂಭೀರ ಪ್ರಕರಣ.

ಜ್ವರದಿಂದ ಬಳಲುತ್ತಿದ್ದ ಆ ಮಹಿಳೆ ವೈದ್ಯಕೀಯ ತಪಾಸಣೆಗೆಂದು ಅಪೋಲೊ ಆಸ್ಪತ್ರೆಗೆ ಬಂದಾಗ ಆಕೆಗೆ ಕ್ಯಾನ್ಸರ್ ಇದೆ ಎಂದು ಸುಳ್ಳು ಹೇಳಿ, ಕ್ಯಾನ್ಸರ್ ನ ಔಷಧಿಗಳನ್ನು ನೀಡಲಾಗಿದೆ. ಹಾಗೂ ಕ್ಯಾನ್ಸರ್ ಗೆ ಸಂಬಂಧ ಪಟ್ಟಂತೆ ತುಂಬಾ ನೋವು ತರುವ ರೋಗನಿರೋಧಕ ಮತ್ತು ಇಂಪ್ಲಾಂಟಿಂಗ್ ಅನ್ನು ಸಹ ಆಕೆಯ ದೇಹದಲ್ಲಿ ಬಿಡಲಾಗಿದೆ. ಹಾಗೂ ಇದೆಲ್ಲದರ ನೆಪ ಹೇಳಿ ಲಕ್ಷ ಲಕ್ಷ ಹಣವನ್ನು ಸಹ ಆಕೆಯಿಂದ ಸುಲಿಯಲಾಗಿದೆ.

ಹಿನ್ನಲೆ: ಮಗ್ದ ಹರೌನ್ ಅಲಿ ಎಂಬ 31 ವರ್ಷದ ಮಹಿಳೆ ಈಜಿಪ್ಟ್ ಮೂಲದವರಾಗಿದ್ದು, ಬಿ.ಎಸ್ಸಿ (ಕೆಮಿಸ್ಟ್) ಪಧವೀಧರೆ. ಸೇಂಟ್ ಗೋಬೆನ್ ಎಂಬ ಪ್ರತಿಷ್ಠಿತ ಕಂಪೆನಿ ಯಲ್ಲಿ ಆಕೆಗೆ ಉದ್ಯೋಗವು ಸಿಕ್ಕಿರುತ್ತದೆ.
2014 ರಲ್ಲಿ ಎಮನ್ ದೇಶದ ಡಾ. ವಾಲಿದ್ ಅಲ್ಬಕಲಿ ಎನ್ನುವವರ ಪರಿಚಯ ವಾಗುತ್ತದೆ. ಹಾಗೂ ಅವರು ತಾನು ಅರಬ್ ಪ್ರಾಂತ್ಯದ ಅಪೋಲೊ ಆಸ್ಪತ್ರೆಯ ಇನ್ ಚಾರ್ಜ್ ಎಂದು ಹೇಳಿಕೊಳ್ಳುತ್ತಾರೆ. ಹಾಗೂ ಡಾ.ವಾಲಿದ್ ಅಲ್ಬಕಲಿ ತಾನು MEDPRO ಎನ್ನುವ ಕಂಪನಿಯ ಮಾಲೀಕ ಎಂದು ಸಹ ಪರಿಚಯಿಸಿಕೊಳ್ಳುತ್ತಾರೆ ಮತ್ತು ಆಕೆಗೆ ಅಪೋಲೊ ಸಂಸ್ಥೆಯಲ್ಲಿ ಉತ್ತಮ ಉದ್ಯೋಗ ಮತ್ತು ಕೈತುಂಬ ಸಂಬಳ ಕೊಡಿಸುವ ಭರವಸೆಯನ್ನು ನೀಡುತ್ತಾರೆ. ಇದನ್ನೆಲ್ಲ ನಂಬಿದ ಮಗ್ದ ಹರೌನ್ ಆಲಿ ತನ್ನ ಪ್ರಸ್ತುತ ಕೆಲಸಕ್ಕೆ ರಾಜೀನಾಮೆ ನೀಡುತ್ತಾರೆ. ಹಾಗೂ 2017 ರಲ್ಲಿ ಆಕೆ ಜಾಬ್ ಕಂಟ್ರಾಕ್ಟ್ ಅಗ್ರಿಮೆಂಟ್ ಗೆ ಸಹಿ ಹಾಕಲು ಭಾರತಕ್ಕೆ ಭೇಟಿ ನೀಡುತ್ತಾರೆ. ಹಾಗೂ 2018 ಜೂನ್ ನಲ್ಲಿ ಶೇಷಾದ್ರಿಪುರಂ ನಲ್ಲಿರುವ ಅಪೋಲೊ ಆಸ್ಪತ್ರೆಗೆ ಕೆಲಸಕ್ಕೆ ಸೇರಿಕೊಳ್ಳುತ್ತಾರೆ.

ಕೆಲಸಕ್ಕೆ ಸೇರಿಕೊಂಡ ನಂತರ ಕೆಲವು ದಿನಗಳ ಕಾಲ ಎಲ್ಲವೂ ಅಚ್ಚುಕಟ್ಟಾಗೆ ನಡೆಯುತ್ತಿರುವ ಸಂದರ್ಭ ಒಂದು ದಿವಸ ಆಕೆ ವಿಪರೀತ ಜ್ವರದಿಂದ ಬಳಲುತ್ತಿರುವಾಗ ತಾನು ಕೆಲಸ ಮಾಡುತ್ತಿರುವ ಅಪೋಲೊ ಆಸ್ಪತ್ರೆಗೆ ಅಡ್ಮಿಟ್ ಆಗುತ್ತಾಳೆ. ವೈದ್ಯರು ಹಲವು ತಪಾಸಣೆಗಳನ್ನು ಮಾಡಿ ಆಕೆ ಕ್ಯಾನ್ಸರ್ ನಿಂದ ಬಳಲುತ್ತಿರುವುದಾಗಿ ಹೇಳುತ್ತಾರೆ, ಅಲ್ಲದೇ ಆಕೆ ಹೆಚ್ಚು ದಿವಸಗಳ ಕಾಲ ಉಳಿಯುವುದಿಲ್ಲ’ ಎಂದೂ ಸಹ ತಿಳಿಸುತ್ತಾರೆ. ಇವೆಲ್ಲವನ್ನು ತಿಳಿದ ಮಗ್ದ ಹರೌನ್ ಅಲಿ ದಿಗ್ಭ್ರಮೆಗೊಳ್ಳುತ್ತಾರೆ. ಏನು ಮಾಡಬೇಕೆಂದು ತೋಚದ ಹರೌನ್ ಆಲಿ ವಿಚಲಿತರಾಗುತ್ತಾರೆ. ಅಪೋಲೊ ಆಸ್ಪತ್ರೆಯ ವೈದ್ಯರು ತಿಳಿಸಿದ ಟ್ರೀಟ್ಮೆಂಟ್ ಮುಂದುವರಿಸಲು ಮಗ್ದ ಹರೌನ್ ಅಲಿ ಸಹಕರಿಸುತ್ತಾಳೆ.

ಒಂಬತ್ತು ಖಿಮೋ ಥೆರಪಿ ಕೊಡಲಾಗಿ ಹಾಗೂ ಮೂರು ಬಾರಿ ಆಪರೇಷನ್ ಮಾಡುವ ಕಾರಣ ಆಕೆಯ ದೇಹದಲ್ಲಿ ಖಿಮೋ ಪಾಟ್ ಎನ್ನುವ ಅಂಶವನ್ನು ಇಳಿಸಲಾಗುತ್ತದೆ. ಒಮೆಂಟಮ್ ಎನ್ನುವ ದೇಹದ ಆರ್ಗ್ಯಾನ್ ನ ಆಪರೇಷನ್ ಗಾಗಿ ಲಕ್ಷ ಲಕ್ಷ ಹಣವನ್ನು ಸುಲಿಯಲಾಗುತ್ತದೆ. ಈ ಎಲ್ಲ ಪ್ರಕ್ರಿಯೆ ನಡೆಯುವ ಸಂದರ್ಭ ಆಕೆ ಸಹಿಸಲಸಾದ್ಯ ನೋವಿನಿಂದ ಬಳಲುತ್ತಾಳೆ. ಹಾಗೂ ಇಲ್ಲಿ ಏನೋ ಮೋಸ ನಡೆಯುತ್ತಿದೆ ಎನ್ನುವ ಅನುಮಾನವೂ ಆಕೆಗೆ ಕಾಡಲು ಶುರುವಾಗುತ್ತದೆ. ಈ ಎಲ್ಲ ಅನುಮಾನಗಳು ಆಕೆಗೆ ಕಾಡಲು ಶುರುವಾದ ಮೇಲೆ ಆಕೆ ಬೇರೆ ಕಡೆ ಒಮ್ಮೆ ಪರೀಕ್ಷಿಸಿ ತನ್ನ ಅನುಮಾನವನ್ನು ಬಗೆಹರಿಸಿಕೊಳ್ಳುವ ನಿರ್ಧಾರ ಕೈಗೊಳ್ಳುತ್ತಾಳೆ.

ಆ ಕಾರಣ ಆಕೆ ಬೆಂಗಳೂರಿನ “ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ”ಯ ಲ್ಯಾಬರೋಟರಿ ನಲ್ಲಿ ತಪಾಸಣೆಗೆ ಮುಂದಾಗುತ್ತಾಳೆ ಹಾಗೂ ಮುಂಬೈ ಯ S.R.L ಅಪತ್ರೆಯಲ್ಲೂ ತಪಾಸಣೆ ಮಾಡಿಸುತ್ತಾಳೆ. ದಿನಾಂಕ 03.11.2018 ಮತ್ತು 03.01.2019 ರಂದು ಎರಡೂ ಆಸ್ಪತ್ರೆಯ ರಿಪೋರ್ಟ್ ಬಂದಾಗ ಮಗ್ದ ಹರೌನ್ ಅಲಿ ಗೆ ‘ಯಾವುದೇ ಕ್ಯಾನ್ಸರ್ ಇರಲಿಲ್ಲ’ ಎನ್ನುವ ರಿಪೋರ್ಟ್ ಬರುತ್ತದೆ. ಹಾಗೂ ಆಕೆಯ ದೇಹದ ಖಿಮೋ ಪಾಟ್ ಅನ್ನು ತಕ್ಷಣವೇ ತೆಗಿಯಬೇಕು ಒಮೆಂಟಮ್ ನಲ್ಲಿ ಯಾವುದೇ ಕ್ಯಾನ್ಸರ್ ನ ಅಂಶವಿಲ್ಲ ಎಂದು ಕಿದ್ವಾಯಿ ಮತ್ತು ಎಸ್.ಆರ್.ಎಲ್ ಆಸ್ಪತ್ರೆಯ ವೈದ್ಯರು ಅಪೋಲೊ ಆಸ್ಪತ್ರೆಯ ವೈದ್ಯರಿಗೆ ಸೂಚಿಸುತ್ತಾರೆ. ‘ಅಪೋಲೊ ಆಸ್ಪತ್ರೆಯ ವೈದ್ಯರು ತಪ್ಪು ಮಾಡಿದ್ದಾರೆ ಹಾಗೂ ಖಿಮೋ ಥೆರಪಿಯನ್ನು ಕೊಡಬಾರದಿತ್ತು ಎಂದು ಡಾ.ವಾಲಿದ್ ಅಲ್ಬರಲಿ ಯವರು Email ಮುಖಾಂತರ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ.

ಇದೆಲ್ಲದರ ಪರಿಣಾಮ ಮಗ್ದ ಹರೌನ್ ಅಲಿ ಯವರ ಆರೋಗ್ಯಕ್ಕೆ ದೊಡ್ಡ ಮಟ್ಟದ ಅಪಾಯವನ್ನು ತಂದೊಡ್ಡಿದೆ. ಈಗ ಅವರು ಮೂಳೆ ನೋವು, ಮೂಳೆ ಸವೆತ, ವಿಪರೀತ ತಲೆ ನೋವು, ಚರ್ಮದ ಮೇಲೆ ಕಡಿತ, ಉರಿ ಮಲಮೂತ್ರ, ಅಸಿಡಿಟಿ, ಬಾಯಿಯಲ್ಲಿ ಅಲ್ಸರ್, ಜ್ವರ ಹೀಗೆ ಅನೇಕ ರೀತಿಯ ಕಾಯಿಲೆಗಳು ತಗುಲಿವೆ. ಅದೇ ಶೇಷಾದ್ರಿಪುರಂ ನಲ್ಲಿರುವ ಅಪೋಲೊ ಆಸ್ಪತ್ರೆಯ ವೈದ್ಯರ ನಿರ್ಲಕ್ಷದಿಂದ ಇಷ್ಟೆಲ್ಲ ಆಗಿದ್ದಲ್ಲದೆ ಆಕೆ ಅಪೋಲೊ ಆಸ್ಪತ್ರೆಗೆ ಇನ್ನೂ ಲಕ್ಷಾಂತರ ರೂಪಾಯಿ ಬಿಲ್ ಪಾವತಿ ಮಾಡಿಸಿಕೊಳ್ಳಲಾಗಿದೆ.

ತನಗೆ ಆದ ಅನ್ಯಾಯವನ್ನು ಪ್ರಶ್ನೆ ಮಾಡಲು ಮುಂದಾದಾಗ ಆಕೆಗೆ ಪರಿಹಾರ ಕೊಡಬೇಕಾಗಿದ್ದ ಅಪೋಲೊ ಆಸ್ಪತ್ರೆಯ ಅಧಿಕಾರಿಗಳು ತಿರುಗಿ ಆಕೆಗೆ ಬೆದರಿಕೆ ಹಾಕುತ್ತಿದ್ದಾರೆ.

ಒಂದು ವೇಳೆ ನೀವು ಪೊಲೀಸ್ ಸ್ಟೇಶನ್ ಗೆ ಹೋದರೆ ನಮ್ಮ ಪ್ರಭಾವ ಬಳಸಿ ಮತ್ತೊಂದು ಆಸ್ಪತ್ರೆಯ ಮುಖಾಂತರ ಸುಳ್ಳು ದಾಖಲೆಗಳನ್ನು ಸೃಷ್ಟಿ ಮಾಡಿಕೊಳ್ಳುತ್ತೇವೆ” ಅಪೋಲೋ ಆಸ್ಪತ್ರೆಯ ಆಡಳಿತ ಮಂಡಳಿಯವರು ಬೆದರಿಕೆ ಹಾಕುತ್ತಿದ್ದಾರೆ.

ಇಷ್ಠೆಲ್ಲಾ ಆಗಿ ಅನ್ಯಾಯದ ವಿರುದ್ಧ ಪ್ರತೀ ದಿವಸವು ಆಸ್ಪತ್ರೆಗೆ ಅಲೆಯುತ್ತಿದ್ದ ಮಗ್ದ ಹರೌನ್ ಅಲಿ, ನನಗೆ ತಪ್ಪು ತಪಾಸಣೆ ಮಾಡಿ, ಕ್ಯಾನ್ಸರ್ ಇದೆ ಎಂದು ತಪ್ಪು ರಿಪೋರ್ಟ್ ಕೊಟ್ಟು, ತುಂಬಾ ಅಪಾಯಕಾರಿ ಔಷಧಿಗಳನ್ನು ಕೊಟ್ಟು ಹಲವಾರು ರೋಗಕ್ಕೆ ತುತ್ತಾಗುವಂತೆ ಮಾಡಿರುವ ವೈದ್ಯರ ನಿರ್ಲಕ್ಷಕ್ಕೆ ಶಿಕ್ಷೆ ಆಗಲೇಬೇಕು’ ಎಂದು ಮಗ್ದ ಹರೌನ್ ಅಲಿ ಕೊನೆಗೆ ಧೈರ್ಯ ಮಾಡಿ 09.04.2019 ರಂದು ಶೇಷಾದ್ರಿಪುರಂ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ದೂರು ನೀಡಿ ಇಷ್ಟೊಂದು ದಿನಗಳು ಕಳೆದರು ಶೇಷಾದ್ರಿಪುರಂ ಪೊಲೀಸ್ ಠಾಣೆಯವರು ಈ ಬಗ್ಗೆ ಸೂಕ್ತ ಕ್ರಮ ಜರುಗಿಸಿಲ್ಲ. ಆರೋಪಿಗಳ ಬಂಧನ, ತನಿಖೆ ಮಾಡಿರುವ ಕುರಿತು ಮಾಹಿತಿ ತಿಳಿದು ಬಂದಿಲ್ಲ.

ಮಗ್ದ ಹರೌನ್ ಅಲಿ ಅವರಿಗೆ ಆದ ಅನ್ಯಾಯ ಕಣ್ಣೆದುರಿಗೆ ಕಾಣುತ್ತಿದ್ದೆ. ಇದರಲ್ಲಿ ಆಸ್ಪತ್ರೆಯ ವೈದ್ಯರ (medical criminal negligence) ನಿರ್ಲಕ್ಷವೇ ಅಪರಾಧಕ್ಕೆ ಕಾರಣವೆಂದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಆಸ್ಪತ್ರೆಯ ವೈದ್ಯರ ನಿರ್ಲಕ್ಷದಿಂದ ಈ ರೋಗಿಯ ಜೀವಕ್ಕೆ ಅಪಾಯ ಬಂದಿದ್ದು ಇದಕ್ಕೆ ಭಾರತೀಯ ದಂಡ ಸಂಹಿತೆಯ Section 336 ಪ್ರಕಾರ ಜೀವಹಾನಿ, 337 ಜೀವ ಮತ್ತು ವೈಯಕ್ತಿಕ ಸುರಕ್ಷತೆಗೆ ದಕ್ಕೆ, 338 ತೀವ್ರವಾದ ಗಾಯ, 307 ಕೊಲೆಯತ್ನ ಜೊತೆಗೆ 420 ವಂಚನೆ, 506 ಬೆದರಿಕೆ ಹಾಕಿರುವುದನ್ನು ಪರಿಗಣಿಸಿ ಆಸ್ಪತ್ರೆಯ ವೈದ್ಯರ ಮೇಲೆ ಮತ್ತು ಅಡಳಿತ ಮಂಡಳಿಯ ಮೇಲೆ ಕ್ರಮ ಕೈಗೊಳ್ಳಬೇಕಿತ್ತು. ಆದರೆ ಇಲ್ಲಿಯವರೆಗೆ ಪೋಲಿಸರು ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಿಲ್ಲ. ಅಪೋಲೊ ಆಸ್ಪತ್ರೆ ಮತ್ತು ಶೇಷಾದ್ರಿಪುರಂ ಪೊಲೀಸ್ ಠಾಣೆಯ ನಡುವೆ ಏನಾದರೂ ಒಳ ಒಪ್ಪಂದ ನಡೆದಿರಬಹುದೇ ? ಎಂಬ ಸಂಶಯ ಮೂಡುತ್ತಿದೆ. ಇಲ್ಲಿಯವರೆಗೆ ಸೂಕ್ತ ತನಿಖೆ ನಡೆಯದಿರುವುದು ಈ ಸಂಶಯಕ್ಕೆ ಅವಕಾಶ ಮಾಡಿಕೊಡುತ್ತಿದ್ದೆ.

ನಮ್ಮ ಬೇಡಿಕೆಗಳು;

1. 09.04.209 ರಂದು ಭಾದಿತ ವಿದೇಶಿ ಯುವತಿ ಶೇಷಾದ್ರಿಪುರಂ ಪೋಲಿಸರಿಗೆ ನೀಡಿರುವ ದೂರನ್ನು ಆಧಾರಿಸಿ ಅಪೋಲೋ ಆಸ್ಪತ್ರೆಯ ವೈದ್ಯರನ್ನು ಮತ್ತು ಆಡಳಿತ ಮಂಡಳಿಯವರನ್ನು ತಕ್ಷಣವೇ ಅರೆಸ್ಟ್ ಮಾಡಬೇಕು. ಸೂಕ್ತ ತನಿಖೆ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕು.

2. ಭಾರತೀಯ ವೈದ್ಯಕೀಯ ಮಂಡಳಿ (MCI) ತಕ್ಷಣ ಮಧ್ಯಪ್ರವೇಶ ಮಾಡಬೇಕು. ಈ ಅಪರಾಧ ಮಾಡಿರುವ ಆಸ್ಪತ್ರೆಯ ಮಾನ್ಯತೆ ರದ್ದುಗೊಳಿಸಲು ಕ್ರಮಕೈಗೊಳ್ಳಬೇಕು.

3. ಆರೋಗ್ಯವಾಗಿದ್ದ ಮಗ್ದ ಹರೌನ್ ಅಲಿ ಅವರ ಜೀವವನ್ನೇ ವೈದ್ಯಕೀಯ ನಿರ್ಲಕ್ಷದಿಂದ ಅನಾರೋಗ್ಯಕ್ಕೆ ತಳ್ಳಿದ್ದಲ್ಲದೆ ಆಕೆಯ ಜೀವಕ್ಕೆ ಅಪಾಯ ತಂದೊಡ್ಡಿದ ಕಾರಣ ಆಕೆಗೆ 10 ಕೋಟಿ ಹಣವನ್ನು ಪರಿಹಾರ ಕೊಡಬೇಕು.

4. ಮಗ್ದ ಹರೌನ್ ಅಲಿ ಅವರಿಗೆ ತಮ್ಮ ದೇಶ ಈಜಿಪ್ಟ್ ಗೆ ಕಳುಹಿಸಿಕೊಡುವ ಕೆಲಸವನ್ನು ನಮ್ಮ ಗೃಹ ಇಲಾಖೆ ಮಾಡಬೇಕು.

ಮಾನವೀಯ ದೃಷ್ಟಿಯಿಂದ ಈ ಸುದ್ದಿಯನ್ನು ತಮ್ಮ ಮಾಧ್ಯಮದಲ್ಲಿ ಪ್ರಕಟಿಸಿ, ನೊಂದ ಯುವತಿಗೆ ನ್ಯಾಯ ಸಿಗುವಂತಾಗಲು ಸಹಕರಿಸಬೇಕಾಗಿ ವಿನಂತಿ ಪತ್ರಿಕಾಗೋಷ್ಠಿ ನಡೆಸಿದ್ದೇವೆ. ನಮ್ಮೊಡನೆ ನೊಂದ ಯುವತಿ ಮಗ್ದಾ, ಈಜಿಪ್ಟಿನ ವಕೀಲರಾದ ಮೇರಿ ಇಬ್ರಾಹಿಂ, ದಲಿತ ಮುಖಂಡರಾದ ಹೆಬ್ಬಾಳ ವೆಂಕಟೇಶ, ಅಬ್ದುಲ್ ಅಜೀಜ್, ವಕೀಲರಾದ ಪರಮೇಶ್ವರ ಇದ್ದರು. ಈ ಹೋರಾಟಕ್ಕೆ ಬೆನ್ನೆಲುಬಾಗಿ ನಿಂತಿವರು ಸಹೋದ್ಯೋಗಿ ಮಿತ್ರರಾದ Sivamanithan ಮತ್ತು Ramesha ಅವರಿಗೆ ವಿಶೇಷ ಧನ್ಯವಾದಗಳು.

https://m.facebook.com/story.php?story_fbid=1980250478746663&id=100002851899686

-ಅನಂತನಾಯಕ ಎನ್
ವಕೀಲರು

error: Content is protected !! Not allowed copy content from janadhvani.com