janadhvani

Kannada Online News Paper

ಉಮ್ರಾ ಯಾತ್ರಾರ್ಥಿಗಳ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳ- ತ್ವರಿತಗೊಂಡ ವೈಮಾನಿಕ ವೀಕ್ಷಣೆ

ಈ ವರದಿಯ ಧ್ವನಿಯನ್ನು ಆಲಿಸಿ


ಮಕ್ಕಾ: ರಮಝಾನ್‌ನಲ್ಲಿ ಉಮ್ರಾ ಯಾತ್ರಾರ್ಥಿಗಳ ಸಂಖ್ಯೆಯು ಗಣನೀಯವಾಗಿ ಹೆಚ್ಚಳಗೊಂಡಿದ್ದು, ರಮಝಾನಿನ ಪ್ರಥಮ ವಾರದಲ್ಲೇ ಗಗನ ವೀಕ್ಷಣೆಗಳನ್ನು ತ್ವರಿತಗೊಳಿಸಲಾಗಿದೆ. ಇದರ ಅಂಗವಾಗಿ ಮಕ್ಕಾದ ಹರಂ ಪರಿಸರ, ಜಿದ್ದಾ-ಮಕ್ಕಾ ರಸ್ತೆ ಮುಂತಾದ ಎಲ್ಲಾ ರಸ್ತೆಗಳನ್ನೂ ವೀಕ್ಷಣೆಗೆ ಒಳಪಡಿಸಲಾಗಿದೆ.

ಯಾತ್ರಾರ್ಥಿಗಳ ಸುರಕ್ಷತೆಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗುತ್ತಿದ್ದು, ಮಕ್ಕಾದ ಪರಿಸರದಲ್ಲಿ ಇಪ್ಪತ್ತನಾಲ್ಕು ಗಂಟೆಗಳೂ ಬಿಡುವಿಲ್ಲದೆ ವೀಕ್ಷಣಾ ಹೆಲಿಕಾಪ್ಟರ್ ಹಾರಾಟ ನಡೆಸಲಿದೆ. ಆ ಹೆಲಿಕಾಪ್ಟರ್ ಗಳಲ್ಲಿ ಅತ್ಯಾಧುನಿಕ ವೀಕ್ಷಣಾ ಯಂತ್ರಗಳು ಮತ್ತು ರಡಾರ್‌ಗಳನ್ನು ಸ್ಥಾಪಿಸಲಾಗಿದೆ.

ಸಾರಿಗೆ ಮುಗ್ಗಟ್ಟು ಮತ್ತು ಹರಂ ಶರೀಫ್‌ಗೆ ಬರುವ ಯಾತ್ರಾರ್ಥಿಗಳ ದಟ್ಟಣೆಯನ್ನು ನಿಯಂತ್ರಿಸಲು ಈ ಸಾರಿ ಪ್ರತ್ಯೇಕ ಸಂಘವನ್ನು ನಿಯುಕ್ತಿಗೊಳಿಸಲಾಗಿದೆ. ಮಾತ್ರವಲ್ಲದೆ ತುರ್ತು ಸಂದರ್ಭದಲ್ಲಿ ಸಂದಿಗ್ಧ ಪರಿಸ್ಥಿತಿಯಲ್ಲಿ ಹತೋಟಿಗೆ ತರಲು ಮಕ್ಕಾದ ವಿವಿಧ ಪ್ರದೇಶಗಳಲ್ಲಿ ಹೆಚ್ಚಿನ ಹೆಲಿಪಾಡ್‌ಗಳನ್ನು ನಿರ್ಮಿಸಲಾಗಿದೆ.

error: Content is protected !! Not allowed copy content from janadhvani.com