janadhvani

Kannada Online News Paper

ಬೆಂಗಳೂರು:ದೃಶ್ಯ ಮಾಧ್ಯಮಗಳು ಪ್ರಚಾರ ಪಡಿಸುತ್ತಿರುವ ವ್ಯಕ್ತಿ ಶಂಕಿತ ಉಗ್ರನಲ್ಲ- ಪೋಲೀಸ್

ಬೆಂಗಳೂರು.ಏ,8: ಕಳೆದ ಸೋಮವಾರ ಸಂಜೆ 6 ಘಂಟೆ ಸುಮಾರಿಗೆ ಬೆಂಗಳೂರು ಮೆಟ್ರೋ ಸ್ಟೇಷನ್ ನಲ್ಲಿ ತೀವ್ರ ಪರಿಶೀಲನೆಗೆ ಒಳಪಡಿಸಿದ ವ್ಯಕ್ತಿ ಶಂಕಿತ ಉಗ್ರನಲ್ಲ ಎಂದು ಬೆಂಗಳೂರು ಪಶ್ಚಿಮ ವಿಭಾಗ ಡಿ.ಸಿ.ಪಿ. ರವಿ.ಡಿ.ಚೆನ್ನಣ್ಣನವರ್ ಪತ್ರಿಕಾಗೊಷ್ಠಿಯಲ್ಲಿ ವ್ಯಕ್ತಪಡಿಸಿದ್ದಾರೆ.

ಎರಡು ದಿನಗಳಿಂದ ತಾನೋರ್ವ ಉಗ್ರನೆಂಬ ನೆಲೆಯಲ್ಲಿ ದೃಶ್ಯಮಾಧ್ಯಮಗಳಲ್ಲಿ ಪ್ರಚಾರಪಡಿಸುತ್ತಿರುವ ವಿರುದ್ಧ ದೂರು ದಾಖಲಿಸಿದ,ಬೆಂಗಳೂರಿನಲ್ಲಿ ಕಳೆದ 30 ವರ್ಷದಿಂದ ಮೆಜೆಸ್ಟಿಕ್ ಸಬ್ ವೇ ನಲ್ಲಿ ವಾಚ್ ವ್ಯಾಪಾರ ನಡೆಸುತ್ತಿರುವ ರಿಯಾಝ್ ಅಹ್ಮದ್ “ತಾನು ಮೆಟ್ರೋ ಸ್ಟೇಷನ್ ನಲ್ಲಿ ಆಗಮಿಸಿದಾಗ ತನ್ನನ್ನು ವಿಭಿನ್ನವಾಗಿ ಪರಿಶೀಲನೆ ನಡೆಸಿ, ನನ್ನ ಟೋಪಿ ತೆಗೆದಾಗ ಇರಿಸುಮುರಿಸು ಉಂಟಾಗಿ ಹಿಂದೆ ಮುಂದೆ ನೋಡಿದ್ದೆ, ನಾನು ಅಲ್ಲಿಂದ ನಿರ್ಗಮಿಸಿದ ನಂತರ ಸಿಸಿಟಿವಿ ದೃಶ್ಯವನ್ನು ಬಿತ್ತರಿಸುತ್ತಾ ನನ್ನನ್ನು ಶಂಕಿತ ಉಗ್ರನೆಂದು ಆಪಾದಿಸಲಾಗಿದೆ” ಇದರಿಂದ ತೀರಾ ಮಾನಸಿಕವಾಗಿ ನೊಂದಿರುವೆನು, ನನ್ನನ್ನು ಉಗ್ರನೆಂದು ಪ್ರಚಾರಪಡಿಸುವ ವಿರುದ್ಧ ಕ್ರಮ ಕೈಗೊಳ್ಳುವಂತೆ ರಿಯಾಝ್ ದೂರಿನಲ್ಲಿ ದಾಖಲಿಸಿದ್ದಾಗಿ ಪೋಲಿಸರು ಹೇಳಿದರು.

error: Content is protected !! Not allowed copy content from janadhvani.com